ಇಂದು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ ಅಗ್ಗದ 5G ಸ್ಮಾರ್ಟ್‌ಫೋನ್ , ಬೆಲೆ ವೈಶಿಷ್ಟ್ಯ ವಿನ್ಯಾಸ ತಿಳಿಯಿರಿ ..!

ಭಾರತದಲ್ಲಿ ಮಾತ್ರ  Motorola Moto G82 5G  6GB + 128GB ಮೆಮೊರಿ ಕಾನ್ಫಿಗರೇಶನ್‌ಗಾಗಿ ಬಾಕ್ಸ್ ಬೆಲೆ 23,999 ರೂ. ಆಗಿರಲಿದೆ. ಆದರೂ ರಿಯಾಯಿತಿ ನಂತರ ಈ ಫೋನ್ ಸುಮಾರು 19,000 ರೂಪಾಯಿಗೆ ಲಭ್ಯವಿರಲಿದೆ.   

Written by - Ranjitha R K | Last Updated : Jun 7, 2022, 09:46 AM IST
  • ಇಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಅಗ್ಗದ ಫೋನ್
  • Motorola Moto G82 5G ಭಾರತದಲ್ಲಿ ಇಂದು ಲಾಂಚ್
  • ಬೆಲೆ ಎಷ್ಟು ಗೊತ್ತಾ? ವೈಶಿಷ್ಟ್ಯ ಏನಿರಲಿದೆ ತಿಳಿದಿದೆಯಾ ?
ಇಂದು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ  ಅಗ್ಗದ 5G ಸ್ಮಾರ್ಟ್‌ಫೋನ್ , ಬೆಲೆ ವೈಶಿಷ್ಟ್ಯ ವಿನ್ಯಾಸ ತಿಳಿಯಿರಿ ..! title=
moto g82 5g (file photo)

ಬೆಂಗಳೂರು : Motorola ಇಂದು ಭಾರತದಲ್ಲಿ Moto G82 5G ಅನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಫೋನ್ ಈಗಾಗಲೇ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಆದ್ದರಿಂದ ಈ ಫೋನ್ ನ ವೈಶಿಷ್ಟ್ಯಗಳ ಬಗ್ಗೆ ಈಗಾಗಲೇ ಎಲ್ಲವೂ ಬಹಿರಂಗವಾಗಿದೆ. Moto G82 5G 6.6-ಇಂಚಿನ ಡಿಸ್ಪ್ಲೇ, 50MP ಕ್ಯಾಮೆರಾ ಮತ್ತು 5,000mAh ಬ್ಯಾಟರಿಯನ್ನು ಹೊಂದಿರಲಿದೆ.  

ಭಾರತದಲ್ಲಿ Moto G82 5G ಬೆಲೆ :
ಭಾರತದಲ್ಲಿ ಮಾತ್ರ  Motorola Moto G82 5G  6GB + 128GB ಮೆಮೊರಿ ಕಾನ್ಫಿಗರೇಶನ್‌ಗಾಗಿ ಬಾಕ್ಸ್ ಬೆಲೆ 23,999 ರೂ. ಆಗಿರಲಿದೆ. ಆದರೂ ರಿಯಾಯಿತಿ ನಂತರ ಈ ಫೋನ್ ಸುಮಾರು 19,000 ರೂಪಾಯಿಗೆ ಲಭ್ಯವಿರಲಿದೆ. 

ಇದನ್ನೂ ಓದಿ : WhatsApp ಬಳಕೆದಾರರಿಗೆ ಗುಡ್ ನ್ಯೂಸ್!

Moto G82 5G ವಿಶೇಷಣಗಳು :
Motorola Moto G82 5G 6.6-ಇಂಚಿನ 10-ಬಿಟ್ FHD+ 120Hz ಪೋಲ್ಡ್ ಡಿಸ್ಪ್ಲೇ, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್, 50MP (ವೈಡ್, OIS) + 8MP (ಅಲ್ಟ್ರಾವೈಡ್) + 2MP (ಮ್ಯಾಕ್ರೋ) ಟ್ರಿಪಲ್ ಕ್ಯಾಮೆರಾ ಸಿಸ್ಟಮ್ ಮತ್ತು 16MP ಸೆಲ್ಫಿ ಕ್ಯಾಮೆರಾದೊಂದಿಗೆ ಬರುತ್ತದೆ.

Moto G82 5G ವೈಶಿಷ್ಟ್ಯಗಳು : 
ಇತರ ವಿಶೇಷಣಗಳೆಂದರೆ  ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್, ಡಾಲ್ಬಿ ಅಟ್ಮಾಸ್-ಬೆಂಬಲಿತ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು, ಸ್ಪ್ಲಾಶ್ ರೆಸಿಸ್ಟೆನ್ಸ್ ಗಾಗಿ IP52 ರೇಟಿಂಗ್, Android 12 ಮತ್ತು 13 5G ಬ್ಯಾಂಡ್‌ಗಳು ಸೇರಿವೆ.

ಇದನ್ನೂ ಓದಿ : iPhone 13 ಮೇಲೆ 28 ಸಾವಿರ ರೂ ಗಳ ಭಾರೀ ರಿಯಾಯಿತಿ ..!

Moto G82 5G ಬ್ಯಾಟರಿ :
ಇದು 30W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. 5,000mAh ಬ್ಯಾಟರಿಯನ್ನು ಈ ಫೋನ್ ಹೊಂದಿದೆ. ಇದು ಗ್ರೇ ಅಥವಾ ವೈಟ್ ಲಿಲಿ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News