ಉದ್ಯೋಗದ ಆಸೆಗೆ ಬಲಿಯಾಗದಿರಿ! ಲಿಂಕ್ಡ್ಇನ್ ಈಗ ವಂಚಕರ ಹೊಸ ಅಡ್ಡ
LinkedIn Scam: ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ಇನ್ ಇದೀಗ ವಂಚಕರ ಹೊಸ ಅಡ್ಡ ಆಗಿ ಮುನ್ನಲೆಗೆ ಬಂದಿದೆ. ನೀವು ಕೂಡ ಲಿಂಕ್ಡ್‌ಇನ್‌ನಲ್ಲಿ ಉದ್ಯೋಗಕ್ಕಾಗಿ ಲಾಗ್ ಇನ್ ಆಗಿದ್ದರೆ ನಕಲಿ ನೇಮಕಾತಿಗಳ ಬಗ್ಗೆ ಎಚ್ಚರದಿಂದಿರುವುದು ಬಹಳ ಮುಖ್ಯ.
LinkedIn Scam: ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್‌ಇನ್‌ನಲ್ಲಿ ವಂಚಕರು ಇದೀಗ ಅಸ್ತಿತ್ವದಲ್ಲಿಲ್ಲದ ಉದ್ಯೋಗಗಳ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದಾರೆ. ಪ್ರಸ್ತುತ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಬಹಳ ದೊಡ್ಡ ಸಮಸ್ಯೆ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಸ್ಕ್ಯಾಮರ್‌ಗಳು ಹಗರಣಕ್ಕೆ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಈ ಕುರಿತಂತೆ ಫೈನಾನ್ಶಿಯಲ್ ಟೈಮ್ಸ್ ವರದಿ ಮಾಡಲಾಗಿದ್ದು, ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್‌ಇನ್‌ನಲ್ಲಿ ಉದ್ಯೋಗದಾತರಂತೆ ನಟಿಸುವ ಸ್ಕ್ಯಾಮರ್‌ಗಳಿಂದ ನಕಲಿ ನೇಮಕಾತಿಗಳನ್ನು ಮಾಡಲಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಬಹಿರಂಗಗೊಳಿಸಿದೆ.
ಲಿಂಕ್ಡ್‌ಇನ್‌ನ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಈ ಬಗ್ಗೆ ಎಚ್ಚರಿಕೆಯಿಂದಿರಿ ಎಂಬ ಲಿಂಕ್ಡ್‌ಇನ್‌ನ ಉತ್ಪನ್ನ ನಿರ್ವಹಣೆಯ ಉಪಾಧ್ಯಕ್ಷ ಆಸ್ಕರ್ ರೊಡ್ರಿಗಸ್ ವರದಿಯೊಂದರಲ್ಲಿ ತಿಳಿಸಿರುವುದು ಈ ಹಗರಣಕ್ಕೆ ಪುಷ್ಟಿ ನೀಡಿದಂತಿದೆ. ಇದಲ್ಲದೆ, ವಂಚನೆಗಳ ಬಗ್ಗೆ ಮಾಹಿತಿ ಬೆಳಕಿಗೆ ಬಂದಿರುವ ಹಿನ್ನಲೆಯಲ್ಲಿ, ಪ್ಲಾಟ್‌ಫಾರ್ಮ್ ಇತ್ತೀಚಿನ ತಿಂಗಳುಗಳಲ್ಲಿ ಲಕ್ಷಾಂತರ ನಕಲಿ ಖಾತೆಗಳನ್ನು ನಿರ್ಬಂಧಿಸಲು ಪ್ರಯತ್ನಿಸಿದೆ ಎಂದು ಕೂಡ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ- ನಿಮ್ಮ ಮೊಬೈಲ್ ಡೇಟಾ ಕೂಡ ಬೇಗ ಖಾಲಿಯಾಗುತ್ತಾ? ಮೊದಲು ಈ ಸೆಟ್ಟಿಂಗ್ ಆಫ್ ಮಾಡಿ
ನಿರುದ್ಯೋಗಿಗಳೇ ಇವರ ಟಾರ್ಗೆಟ್:
ಸೈಬರ್ ಸೆಕ್ಯುರಿಟಿ ಕಂಪನಿ ZScaler ವರದಿಯ ಪ್ರಕಾರ, ಇಲ್ಲಿ ನಿರುದ್ಯೋಗಿಗಳೇ ವಂಚಕರ ಟಾರ್ಗೆಟ್ ಆಗಿದ್ದು, ಅಲ್ಲಿ ವಂಚಕರು ಲಿಂಕ್ಡ್‌ಇನ್‌ನ ನೇರ ಸಂದೇಶ ಕಳುಹಿಸುವ ವೈಶಿಷ್ಟ್ಯವಾದ InMail ಮೂಲಕ ಜನರನ್ನು ಸಂಪರ್ಕಿಸುತ್ತಾರೆ. ಇವರು ನೀಡುತ್ತಿರುವ ಮಾಹಿತಿ ಸತ್ಯವೆಂದು ಬಿಂಬಿಸುವ ದೃಷ್ಟಿಯಿಂದ ಅವರು ಕಂಪನಿಗಳನ್ನು ಸಂದರ್ಶನ ಮಾಡಲು ಕೇಳುವ ನೈಜ ನೇಮಕಾತಿದಾರರ ಚಿತ್ರಗಳೊಂದಿಗೆ ಸ್ಕೈಪ್ ಪ್ರೊಫೈಲ್‌ಗಳನ್ನು ಸಹ ರಚಿಸಿದ್ದಾರೆ ಎಂದು ಜಸ್ಕೆಲ್ಲರ್‌ನ ಭದ್ರತಾ ಸಂಶೋಧನೆಯ ಉಪಾಧ್ಯಕ್ಷ ಡಿಪೆನ್ ದೇಸಾಯಿ ತಿಳಿಸಿದ್ದಾರೆ.
US ಫೆಡರಲ್ ಟ್ರೇಡ್ ಕಮಿಷನ್ (FTC) ಇತ್ತೀಚೆಗೆ 2022 ರಲ್ಲಿ 92,000 ಉದ್ಯೋಗ-ಸಂಬಂಧಿತ ಮತ್ತು ವ್ಯಾಪಾರ ಹಗರಣಗಳು ನಡೆದಿವೆ ಎಂದು ಹೇಳಿದ್ದು, $367.4 ಮಿಲಿಯನ್ ಕಳ್ಳತನವಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಬಹಿರಂಗಗೊಳಿಸಿದೆ.
ಇದನ್ನೂ ಓದಿ- ಫ್ಯಾನ್, ಎಸಿ, ಕೂಲರ್, ಫ್ರಿಜ್ ಅನ್ನು ಎಷ್ಟೇ ಬಳಸಿದರೂ ಬರಲ್ಲ ವಿದ್ಯುತ್ ಬಿಲ್
ಗಮನಿಸಿ: ನೀವೂ ಉದ್ಯೋಗಾಕಾಂಕ್ಷಿ ಆಗಿದ್ದರೆ, ಇಂತಹ ಸಂದೇಶಗಳ ಬಗ್ಗೆ ಬಹಳ ಜಾಗರೂಕರಾಗಿರಿ. ಕೂಲಂಕುಷವಾಗಿ ಪೂರ್ವಾಪರವನ್ನು ತಿಳಿದ ಬಳಿಕವೇ ಮುಂದುವರೆಯಲು ಸಲಹೆ ನೀಡಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.