ನಿಮ್ಮ ಮೊಬೈಲ್ ಡೇಟಾ ಕೂಡ ಬೇಗ ಖಾಲಿಯಾಗುತ್ತಾ? ಮೊದಲು ಈ ಸೆಟ್ಟಿಂಗ್ ಆಫ್ ಮಾಡಿ

ಪ್ರಸ್ತುತ ಪ್ರತಿಯೊಬ್ಬರ ಜೀವನಾಡಿ ಸ್ಮಾರ್ಟ್‍ಫೋನ್. ಸ್ಮಾರ್ಟ್‍ಫೋನ್ಗಳಲ್ಲಿ ಹಲವು ಅಪ್ಲಿಕೇಶನ್ಗಳು ಕಾರ್ಯನಿರ್ವಹಿಸಲು ಮೊಬೈಲ್ ಡೇಟಾ ಬೇಕೇ ಬೇಕು. ಒಂದೊತ್ತು ಊಟ ಬಿಟ್ಟರೂ ಸರಿಯೇ ಜನರು ಮೊಬೈಲ್ ಡೇಟಾಗಾಗಿ ಹಣ ಹಾಕುತ್ತಾರೆ. ಆದರೆ, ಎಷ್ಟೇ ದೈನಂದಿನ ಡೇಟಾ ಯೋಜನೆ ಹಾಕಿಸಿದರೂ ಕೂಡ ಮೊಬೈಲ್ ಡೇಟಾ ಬೇಗ ಖಾಲಿಯಾಗುತ್ತದೆ. ನೀವೂ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಿರಾ...

Written by - Yashaswini V | Last Updated : Feb 27, 2023, 10:26 AM IST
  • ನಿಮ್ಮ ಮೊಬೈಲ್ ಡೇಟಾ ತ್ವರಿತವಾಗಿ ಖಾಲಿ ಆಗಲು ಹಲವು ಕಾರಣಗಳಿರಬಹುದು.
  • ಅವುಗಳಲ್ಲಿ ಹೈ ಡೆಫಿನಿಶನ್ ಗೇಮ್ಸ್, ಹೆಚ್ಚು ಹೆಚ್ಚು ವಿಡಿಯೋ ವಾಚ್ ಮಾಡಿರುವುದು ಕೂಡ ಒಂದು ಕಾರಣವಿರಬಹುದು.
  • ಆದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೇಟಾ ತ್ವರಿತವಾಗಿ ಖಾಲಿಯಾಗಲು ಅಪ್ಲಿಕೇಶನ್‌ಗಳ ನವೀಕರಣವು ಒಂದು ಪ್ರಮುಖ ಕಾರಣವಾಗಿದೆ.
ನಿಮ್ಮ ಮೊಬೈಲ್ ಡೇಟಾ ಕೂಡ ಬೇಗ ಖಾಲಿಯಾಗುತ್ತಾ? ಮೊದಲು ಈ ಸೆಟ್ಟಿಂಗ್ ಆಫ್ ಮಾಡಿ  title=
How To Save Mobile Data

ಬೆಂಗಳೂರು: ಪ್ರಸ್ತುತ ಜಗತ್ತಿನಲ್ಲಿ ಗಾಳಿ, ನೀರು, ಆಹಾರದಂತೆ ಸ್ಮಾರ್ಟ್‍ಫೋನ್ ಇಂಟರ್ನೆಟ್ ಇರದೇ ಬದುಕಲು ಸಾಧ್ಯವೇ ಇಲ್ಲ ಎಂಬಂತ ಸ್ಥಿತಿಯಲ್ಲಿ ನಾವಿದ್ದೇವೆ. ಅದು ಮೊಬೈಲ್ ಫೋನ್ ಆಗಿರಲಿ ಅಥವಾ ಮನೆಯಲ್ಲಿ ವೈ-ಫೈ ಆಗಿರಲಿ ಎಲ್ಲೆಡೆ 24 ಗಂಟೆಗಳ ಕಾಲ ಇಂಟರ್ನೆಟ್ ಬೇಕೇ, ಬೇಕು. ಇಲ್ಲದಿದ್ದರೆ ಜೀವನದಲ್ಲಿ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ. ವಾಸ್ತವವಾಗಿ, ಸ್ಮಾರ್ಟ್‍ಫೋನ್ಗಳಲ್ಲಿ ಹಲವು ಅಪ್ಲಿಕೇಶನ್ಗಳು ಕಾರ್ಯನಿರ್ವಹಿಸಲು ಮೊಬೈಲ್ ಡೇಟಾ ಬೇಕೇ ಬೇಕು. ಒಂದೊತ್ತು ಊಟ ಬಿಟ್ಟರೂ ಸರಿಯೇ ಜನರು ಮೊಬೈಲ್ ಡೇಟಾಗಾಗಿ ಹಣ ಹಾಕುತ್ತಾರೆ. ಆದರೆ, ಎಷ್ಟೇ ದೈನಂದಿನ ಡೇಟಾ ಯೋಜನೆ ಹಾಕಿಸಿದರೂ ಕೂಡ ಮೊಬೈಲ್ ಡೇಟಾ ಬೇಗ ಖಾಲಿಯಾಗುತ್ತದೆ. ನೀವೂ ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಿರಾ... ಹೌದು, ಎಂದಾದರೆ ನಿಮ್ಮ ಸ್ಮಾರ್ಟ್‍ಫೋನ್ ನಲ್ಲಿ ಒಂದೇ ಒಂದು ಸೆಟ್ಟಿಂಗ್ ಬದಲಾಯಿಸುವ ಮೂಲಕ ಈ ಸಮಸ್ಯೆಯಿಂದ ಶೀಘ್ರದಲ್ಲೇ ಪರಿಹಾರ ಪಡೆಯಬಹುದು.

ವಾಸ್ತವವಾಗಿ, ನಿಮ್ಮ ಮೊಬೈಲ್ ಡೇಟಾ ತ್ವರಿತವಾಗಿ ಖಾಲಿ ಆಗಲು ಹಲವು ಕಾರಣಗಳಿರಬಹುದು. ಅವುಗಳಲ್ಲಿ ಹೈ ಡೆಫಿನಿಶನ್ ಗೇಮ್ಸ್, ಹೆಚ್ಚು ಹೆಚ್ಚು ವಿಡಿಯೋ ವಾಚ್ ಮಾಡಿರುವುದು ಕೂಡ ಒಂದು ಕಾರಣವಿರಬಹುದು. ಆದರೆ, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಡೇಟಾ ತ್ವರಿತವಾಗಿ ಖಾಲಿಯಾಗಲು ಅಪ್ಲಿಕೇಶನ್‌ಗಳ ನವೀಕರಣವು ಒಂದು ಪ್ರಮುಖ ಕಾರಣವಾಗಿದೆ.  ಡೀಫಾಲ್ಟ್ ಸೆಟ್ಟಿಂಗ್‌ಗಳಿಂದಾಗಿ ಅಪ್ಲಿಕೇಶನ್‌ಗಳು ಸ್ವಯಂಚಾಲಿತವಾಗಿ ನವೀಕರಿಸಲ್ಪಡುತ್ತವೆ. ಕೆಲವೊಮ್ಮೆ ನಾವು ಯಾವುದೋ ಕಾರಣಕ್ಕೆ ಇನ್ಸ್ಟಾಲ್ ಮಾಡಿದ, ಹೆಚ್ಚು ಬಳಕೆಯಲ್ಲಿಲ್ಲದ ಅಪ್ಲಿಕೇಶನ್‌ಗಳಿಂದಲೂ ಕೂಡ ಡೇಟಾ ಬೇಗ ಖಾಲಿಯಾಗುತ್ತದೆ. ಇದನ್ನು ತಪ್ಪಿಸಲು ಒಂದು ಸೆಟ್ಟಿಂಗ್ ಅನ್ನು ಆಫ್ ಮಾಡಿದರೆ ಅಷ್ಟೇ ಸಾಕು.

ಇದನ್ನೂ ಓದಿ- ಫ್ಯಾನ್, ಎಸಿ, ಕೂಲರ್, ಫ್ರಿಜ್ ಅನ್ನು ಎಷ್ಟೇ ಬಳಸಿದರೂ ಬರಲ್ಲ ವಿದ್ಯುತ್ ಬಿಲ್‌

ಮೊಬೈಲ್ ಡೇಟಾ ಬೇಗ ಖಾಲಿಯಾಗುವುದನ್ನು ತಡೆಯಲು ಯಾವ ಸೆಟ್ಟಿಂಗ್ ಅನ್ನು ಆಫ್ ಮಾಡಬೇಕು?
ಈ ಸೆಟ್ಟಿಂಗ್ ಆಫ್ ಮಾಡಲು ನೀವು ಮೊದಲು ಗೂಗಲ್ ಪ್ಲೇ ಸ್ಟೋರ್ ಗೆ ಭೇಟಿ ನೀಡಬೇಕು. 
>> ಇಲ್ಲಿ ಸೆಟ್ಟಿಂಗ್‌ಗಳಿಗೆ ಹೋಗುವ ಮೂಲಕ ಸ್ವಯಂ ನವೀಕರಣವನ್ನು ಆಫ್ ಮಾಡಿ. 
>>  ಡೌನ್‌ಲೋಡ್ ಮಾಡಿದ ಎಲ್ಲಾ ಅಪ್ಲಿಕೇಶನ್‌ಗಳಿಗೆ ನೀವು ಸ್ವಯಂ ನವೀಕರಣ ಆಯ್ಕೆಯನ್ನು ಆಫ್ ಮಾಡಬಹುದು. 
>> ಮಾತ್ರವಲ್ಲ, ಯಾವುದೇ ಆ್ಯಪ್ ಹೆಚ್ಚು ಅಪ್‌ಡೇಟ್‌ಗಳನ್ನು ತೆಗೆದುಕೊಳ್ಳುತ್ತಿದ್ದರೆ, ಅದನ್ನು ಕೂಡ ನೀವು ಆಫ್ ಮಾಡಬಹುದು.

ಇದನ್ನೂ ಓದಿ- Spy Balloons : ಆಗಸದಲ್ಲಿನ ರಹಸ್ಯ ಕಣ್ಣು : ಗುಪ್ತಚರ ಬಲೂನ್‌ಗಳ ಲೋಕದೆಡೆಗೊಂದು ನೋಟ

ಇದನ್ನು ಹೊರತುಪಡಿಸಿ, ನೀವು  ಲೈಟ್ ಆವೃತ್ತಿಯ ಅಪ್ಲಿಕೇಶನ್‌ಗಳನ್ನು  ಡೌನ್‌ಲೋಡ್ ಮಾಡಬಹುದು. ಈ ಲೈಟ್ ಆವೃತ್ತಿಯ ಅಪ್ಲಿಕೇಶನ್‌ಗಳ ಪ್ರಮುಖ ವೈಶಿಷ್ಟ್ಯವೆಂದರೆ ಇವು ಕಡಿಮೆ ಡೇಟಾ ಬಳಸುತ್ತವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News