Mahindra Scorpio Classic S5 Variant : ಸ್ಕಾರ್ಪಿಯೊ ಮಹೀಂದ್ರಾ ಕಂಪನಿಯ ಜನಪ್ರಿಯ ಪ್ರಾಡಕ್ಟ್. ಕಳೆದ ವರ್ಷ, ಮಹೀಂದ್ರಾ ಹೊಸ ಸ್ಕಾರ್ಪಿಯೊ-ಎನ್ ಅನ್ನು ಬಿಡುಗಡೆ ಮಾಡಿತ್ತು. ಆದರೆ ಈಗಾಗಲೇ ಅಸ್ತಿತ್ವದಲ್ಲಿರುವ ಸ್ಕಾರ್ಪಿಯೊವನ್ನು ಸ್ಥಗಿತಗೊಳಿಸಲಿಲ್ಲ. ಆದರೆ ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತ್ತು. ಈ ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಹೊಸ ಅವತಾರಕ್ಕೆ ಸ್ಕಾರ್ಪಿಯೊ ಕ್ಲಾಸಿಕ್ ಎಂದು ನಾಮಕಾರಣ ಮಾಡಿತ್ತು.  ಸ್ಕಾರ್ಪಿಯೊ ಕ್ಲಾಸಿಕ್   S ಮತ್ತು S11 ಎನ್ನುವ ಎರಡು ರೂಪಾಂತರಗಳಲ್ಲಿ  ಮಾತ್ರ ಲಭ್ಯವಿದೆ. ಎಸ್ ಬೇಸ್ ವೆರಿಯಂಟ್ ಆಗಿದ್ದರೆ ಎಸ್11 ಟಾಪ್ ವೆರಿಯಂಟ್ ಆಗಿದೆ. ಇವೆರಡನ್ನು ಬಿಟ್ಟರೆ ಬೇರೆ ಯಾವುದೇ ರೂಪಾಂತರ ಲಭ್ಯವಿರಲಿಲ್ಲ. ಆದರೆ, ಈಗ ಮಹೀಂದ್ರಾ S5 ರೂಪಾಂತರವನ್ನು  ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು S ಮತ್ತು S11ರ ನಡುವಿನ ರೂಪಾಂತರವಾಗಿದೆ. 


COMMERCIAL BREAK
SCROLL TO CONTINUE READING

ಮಹೀಂದ್ರಾ ತನ್ನ S5 ರೂಪಾಂತರದ ಬೆಲೆಗಳನ್ನು ಇನ್ನೂ ಘೋಷಿಸಿಲ್ಲ. ಆದರೆ, ಇದು  ಬೇಸ್ ವೆರಿಯೇಂಟ್ S ಬೆಲೆ 12.99 ಲಕ್ಷ, ಆಗಿದ್ದರೆ  ಟಾಪ್ ವೆರಿಯೇಂಟ್  S11ರ ಬೆಲೆ  16.81 ಲಕ್ಷ ಆಗಿದೆ.  ಅಂದರೆ ಈ ಹೊಸ S5  ವೆರಿಯೇಂಟ್ ಬೆಲೆ 12.99 16.81 ಲಕ್ಷದ ಮಧ್ಯೆ ಇರಲಿದೆ.  ಅದರಲ್ಲೂ  ಈ ಹೊಸ ಕಾರಿನ ಬೆಲೆ  12.99 ಲಕ್ಷಕ್ಕೆ ಹತ್ತಿರದಲ್ಲಿ ಇರಲಿದೆ.  ಬೇಸ್ ಎಸ್ ರೂಪಾಂತರಕ್ಕೆ ಹೋಲಿಸಿದರೆ ಹೊಸ S5ನಲ್ಲಿ ಹೆಚ್ಚು ಹೊಸ ವೈಶಿಷ್ಟ್ಯಗಳನ್ನು ನೀಡಲಾಗಿಲ್ಲ.  S ಟ್ರಿಮ್‌ಗಿಂತ ಭಿನ್ನವಾಗಿ, ಇದರಲ್ಲಿ  ಕೇವಲ 17-ಇಂಚಿನ ಮ ಅಲಾಯ್ ವ್ಹಿಲ್  , ಬಾಡಿ ಕಲರ್ಡ್ ಬಂಪರ್‌ಗಳು, ಬಾಡಿ ಕಲರ್ಡ್ ಪ್ಲಾಸ್ಟಿಕ್ ಬಾಡಿ ಕ್ಲಾಡಿಂಗ್, ರೂಫ್ ರೈಲ್ಸ್, ಡೋರ್ ಕ್ಲಾಡಿಂಗ್ ಮತ್ತು ಸ್ಕಾರ್ಪಿಯೋ ಬ್ರ್ಯಾಂಡಿಂಗ್‌ನೊಂದಿಗೆ ಸೈಡ್ ಸ್ಟೆಪ್‌ಗಳೊಂದಿಗೆ ಬರುತ್ತದೆ. S5 ಅನ್ನು ಅಪ್ಗ್ರೇಡ್ ಮಾಡಲಾಗಿದೆ.  


ಇದನ್ನೂ ಓದಿ : 34 ಕಿ.ಮೀ ಮೈಲೇಜ್ ನೀಡುವ, ದೇಶದಲ್ಲಿ ಅತಿ ಹೆಚ್ಚು ಮಾರಾಟವಾದ ಕಾರಿದು.. ಕೇವಲ ರೂ.3 ಲಕ್ಷಕ್ಕೆ ಮನೆಗೆ ತನ್ನಿ!


ಆದಾಗ್ಯೂ, ಬಾಡಿ ಕಲರ್ಡ್  ಡೋರ್ ಹ್ಯಾಂಡಲ್‌ಗಳು, ಇನ್ಫೋಟೈನ್‌ಮೆಂಟ್ ಸ್ಕ್ರೀನ್, ಸ್ಟೀರಿಂಗ್-ಮೌಂಟೆಡ್ ಆಡಿಯೊ ಕಂಟ್ರೋಲ್‌ಗಳು, ಫಾಗ್ ಲ್ಯಾಂಪ್‌ಗಳು ಮತ್ತು ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ORVM ಗಳನ್ನು ಹೊಂದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ, ಇವೆಲ್ಲವನ್ನೂ ಹೊಸ S5 ಟ್ರಿಮ್‌ನಲ್ಲಿ ನೀಡಲಾಗಿಲ್ಲ. ಇದು ಮ್ಯಾನ್ಯುವಲ್ ಎಸಿ, ರಿಯರ್ ಎಸಿ ವೆಂಟ್‌ಗಳು, ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿನ ಎಂಐಡಿ, ಎಲ್‌ಇಡಿ ಟೈಲ್‌ಲೈಟ್‌ಗಳು, ಥರ್ಡ್ ರೋ ಸೈಡ್ ಫೇಸಿಂಗ್ ಬೆಂಚ್ ಸೀಟ್‌ಗಳಂತಹ ಬೇಸ್ ವೇರಿಯಂಟ್ ನಂಥಹ ಹಲವು ವೈಶಿಷ್ಟ್ಯಗಳನ್ನು ಪಡೆಯುತ್ತದೆ.


ಇದನ್ನೂ ಓದಿ : Jeans Technology: ಪ್ಯಾಂಟ್‌ ಜಿಪ್‌ ಓಪನ್‌ ಆಗಿದ್ರೆ ಕೂಡಲೇ ನೀಡುತ್ತೆ ಅಲರ್ಟ್‌


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ