"ಬ್ಯಾಟರಿ ಹೆಲ್ತ್ ಎಂಜಿನ್ ನಂತಹ ಆವಿಷ್ಕಾರಕ ತಂತ್ರಜ್ಞಾನ ಪರಿಚಯಿಸಲು ಹೆಮ್ಮೆ ಪಡುತ್ತೇವೆ"

ಒಪ್ಪೊ ಎಫ್23 5ಜಿ ಮೂಲಕ ನಾವು ಬ್ಯಾಟರಿ ಹೆಲ್ತ್ ಎಂಜಿನ್ ಮತ್ತು ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್‌ ನಂತಹ ಆವಿಷ್ಕಾರಕ ತಂತ್ರಜ್ಞಾನಗಳನ್ನು ಪರಿಚಯಿಸಲು ಹೆಮ್ಮೆ ಪಡುತ್ತೇವೆ. ಅವು ತಡೆರಹಿತ ಅನುಭವಕ್ಕೆ ವಿಶ್ವಾಸಾರ್ಹ ಮತ್ತು ಅನುಕೂಲಕರ ಬ್ಯಾಟರಿ ಕಾರ್ಯಕ್ಷಮತೆ ನೀಡುತ್ತವೆ. ಆದ್ದರಿಂದ ಫೋನ್‌ ನ ಬ್ಯಾಟರಿ ಲೈಫ್ ಬಗ್ಗೆ ಚಿಂತಿಸದೆ ಇಷ್ಟವಾದ ಕೆಲಸಗಳನ್ನು ಆನಂದಿಸಬಹುದು ಒಪ್ಪೊ ಇಂಡಿಯಾದ ಪ್ರಾಡಕ್ಟ್ ಮ್ಯಾನೇಜರ್ ಕ್ಷಿತಿಜ್ ಅರೋರಾ ಎಂದರು.

Written by - Manjunath N | Last Updated : May 26, 2023, 07:14 PM IST
  • ಎಫ್21 ಸರಣಿಯ ಮಾರಾಟದಿಂದ ಸಿಲಿಕಾನ್ ಸಿಟಿಯಲ್ಲಿ ಒಪ್ಪೋ ತನ್ನ ಮಾರುಕಟ್ಟೆ ಪಾಲನ್ನು ಶೇ.73ರಷ್ಟು ಹೆಚ್ಚಿಸಿಕೊಂಡಿದೆ
  • ಪ್ರಸ್ತುತ ರಾಜ್ಯದಲ್ಲಿ 35 ಸರ್ವೀಸ್ ಸ್ಟೇಷನ್‌ ಗಳು ಸದ್ಯ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.
"ಬ್ಯಾಟರಿ ಹೆಲ್ತ್ ಎಂಜಿನ್ ನಂತಹ ಆವಿಷ್ಕಾರಕ ತಂತ್ರಜ್ಞಾನ ಪರಿಚಯಿಸಲು ಹೆಮ್ಮೆ ಪಡುತ್ತೇವೆ" title=

ಬೆಂಗಳೂರು: ಒಪ್ಪೊ ಎಫ್23 5ಜಿ ಮೂಲಕ ನಾವು ಬ್ಯಾಟರಿ ಹೆಲ್ತ್ ಎಂಜಿನ್ ಮತ್ತು ಸೂಪರ್‌ವೂಕ್ ಫಾಸ್ಟ್ ಚಾರ್ಜಿಂಗ್‌ ನಂತಹ ಆವಿಷ್ಕಾರಕ ತಂತ್ರಜ್ಞಾನಗಳನ್ನು ಪರಿಚಯಿಸಲು ಹೆಮ್ಮೆ ಪಡುತ್ತೇವೆ. ಅವು ತಡೆರಹಿತ ಅನುಭವಕ್ಕೆ ವಿಶ್ವಾಸಾರ್ಹ ಮತ್ತು ಅನುಕೂಲಕರ ಬ್ಯಾಟರಿ ಕಾರ್ಯಕ್ಷಮತೆ ನೀಡುತ್ತವೆ. ಆದ್ದರಿಂದ ಫೋನ್‌ ನ ಬ್ಯಾಟರಿ ಲೈಫ್ ಬಗ್ಗೆ ಚಿಂತಿಸದೆ ಇಷ್ಟವಾದ ಕೆಲಸಗಳನ್ನು ಆನಂದಿಸಬಹುದು ಒಪ್ಪೊ ಇಂಡಿಯಾದ ಪ್ರಾಡಕ್ಟ್ ಮ್ಯಾನೇಜರ್ ಕ್ಷಿತಿಜ್ ಅರೋರಾ ಎಂದರು.

ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ನೆಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮುಂಚೂಣಿಯ ಜಾಗತಿಕ ಸ್ಮಾರ್ಟ್ ಡಿವೈಸ್‌ಗಳ ಬ್ರಾಂಡ್ ಒಪ್ಪೊ ತನ್ನ ಹೊಚ್ಚಹೊಸ ಸ್ಮಾರ್ಟ್ಫೋನ್ ಒಪ್ಪೊ ಎಫ್ 23 5ಜಿ ಬಿಡುಗಡೆ ಮಾಡಿದೆ. ಈ ಡಿವೈಸ್ ಮೇ 18 ರಿಂದಲೇ ಒಪ್ಪೊ ಸ್ಟೋರ್, ಅಮೆಜಾ಼ನ್ ಸೇರಿದಂತೆ ಪ್ರಮುಖ ರೀಟೇಲ್ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಹೇಳಿದರು. 

ಇದನ್ನೂ ಓದಿ: ಶಾದಿ.ಕಾಮ್ ನಲ್ಲಿ ಪರಿಚಯ,  ಓಯೋದಲ್ಲಿ ಮಜಾ: ಕೊನೆಗೆ ಯುವತಿಗೆ ಕೈಕೊಟ್ಟು ಬೇರೆ ನಿಖಾ ಆದ ಐನಾತಿ!

ಎಫ್21 ಸರಣಿಯ ಮಾರಾಟದಿಂದ ಸಿಲಿಕಾನ್ ಸಿಟಿಯಲ್ಲಿ ಒಪ್ಪೋ ತನ್ನ ಮಾರುಕಟ್ಟೆ ಪಾಲನ್ನು ಶೇ.73ರಷ್ಟು ಹೆಚ್ಚಿಸಿಕೊಂಡಿದೆ ಮತ್ತು ಪ್ರಸ್ತುತ ರಾಜ್ಯದಲ್ಲಿ 35 ಸರ್ವೀಸ್ ಸ್ಟೇಷನ್‌ ಗಳು ಸದ್ಯ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಬಲಿಷ್ಠ 5,000ಎಂಎಎಚ್ ಬ್ಯಾಟರಿ:

ಒಪ್ಪೊ ಎಫ್23 5ಜಿ ಅತ್ಯಂತ ಬಲಿಷ್ಠ 5,000ಎಂಎಎಚ್ ಬ್ಯಾಟರಿ, 67 ವ್ಯಾಟ್ ಸೂಪರ್‌ ವೂಕ್‌ ಟಿಎಂ ಫಾಸ್ಟ್ ಚಾರ್ಜಿಂಗ್ ಮತ್ತು ಒಪ್ಪೊದ ಬ್ಯಾಟರಿ ಹೆಲ್ತ್ ಎಂಜಿನ್ ಒಳಗೊಂಡಿದ್ದು ಬ್ಯಾಟರಿಯ ಬಹು ಸಮಯದವರೆಗೆ ಬಳಕಕೆಗೆ ಬರಲಿದೆ ಎಂದು ಹೇಳಿದರು.

ನೊಮೊಫೋಬಿಯಾ 4ರಲ್ಲಿ 3 ಮಂದಿಯಲ್ಲಿ ಪತ್ತೆ:

ಒಪ್ಪೊ ಮತ್ತು ಕೌಂಟರ್‌ಪಾಯಿಂಟ್ ನಡೆಸಿದ ಸಂಶೋಧನೆಯ ಪ್ರಕಾರ ಭಾರತದಲ್ಲಿ 4ರಲ್ಲಿ 3 ಮಂದಿ  ಕಡಿಮೆ ಅಥವಾ ಡೆಡ್ ಬ್ಯಾಟರಿಯ ಸಮಸ್ಯೆ (ನೊಮೊಫೋಬಿಯಾ) ಎದುರಿಸುತ್ತಾರೆ ಎಂದು ಸೂಚಿಸಿದೆ. ಈ ಅಧ್ಯಯನದ ಪ್ರಕಾರ ಶೇ.46 ರಷ್ಟು ಮಂದಿ ಅವರ ಫೋನ್‌ಗಳನ್ನು ಪ್ರತಿನಿತ್ಯ ಎರಡು ಬಾರಿ ಚಾರ್ಜ್ ಮಾಡುತ್ತಾರೆ, ಶೇ.62ರಷ್ಟು ಮಂದಿ ಬ್ಯಾಟರಿ ಡಿಸ್ಚಾರ್ಜ್ ಸಮಸ್ಯೆಗಳನ್ನು ಎದುರಿಸಲು ಪವರ್-ಸೇವಿಂಗ್ ಮೋಡ್ ಬಳಸುತ್ತಾರೆ ಮತ್ತು ಶೇ.60ರಷ್ಟು ಮಂದಿ ಸ್ಮಾರ್ಟ್ಫೋನ್ ಬಳಕೆದಾರರು ತಮ್ಮ ಪ್ರಸ್ತುತ ಫೋನ್‌ನಲ್ಲಿ ಒಳ್ಳೆಯ ಬ್ಯಾಟರಿ ಇಲ್ಲದಿದ್ದಲ್ಲಿ ಹೊಸ ಫೋನ್ ಖರೀದಿಸಲು ಮುಂದಾಗುತ್ತಾರೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಹೊಸನಗರದಲ್ಲಿ ಕುಡಿಯುವ ನೀರಿಗೂ ಹಾಹಾಕಾರ.. ಸಗಣಿ ನೀರನ್ನ ಮೈಮೇಲೆ ಎರಚಿಕೊಂಡು ಪ್ರತಿಭಟನೆ

ನೊಮೊಫೋಬಿಯಾ ನಿವಾರಿಸಲಿರುವ ಒಪ್ಪೊ ಎಫ್23:

ನೊಮೊಫೋಬಿಯಾ ನಿವಾರಣೆಗೆ ಮತ್ತು ಡಿವೈಸ್‌ನ ಈ ವಿಶೇಷ ಅಗತ್ಯವನ್ನು ಪೂರೈಸಲು ಹೆಚ್ಚು ಕಾಲ ಉಳಿಯುವ, ಹೆಚ್ಚಿನ ಸಾಮರ್ಥ್ಯದ ಮತ್ತು ದೀರ್ಘಬಾಳಿಕೆಯ ಬ್ಯಾಟರಿಯನ್ನು ಒಪ್ಪೊ ತನ್ನ ಎಫ್23 5ಜಿಯಲ್ಲಿ ಪರಿಚಯಿಸಿದೆ ಎಂದು ಹೇಳಿದರು.

67 ಡಬ್ಲೂ ಸೂಪರ್‌ವೂಕ್‌ಟಿಎಂ ಫ್ಲಾಶ್ ಚಾರ್ಜಿಂಗ್ ವ್ಯವಸ್ಥೆ: 

ಈ ಹ್ಯಾಂಡ್‌ಸೆಟ್‌ನಲ್ಲಿ ಒಪ್ಪೊದ ಪ್ರೋಪಟರಿ 67 ಡಬ್ಲೂ ಸೂಪರ್‌ವೂಕ್‌ಟಿಎಂ ಫ್ಲಾಶ್ ಚಾರ್ಜಿಂಗ್ ಇದ್ದು ಅದು ಕೇವಲ 18 ನಿಮಿಷಗಳಲ್ಲಿ ಶೇ.50ರಷ್ಟು ಚಾರ್ಜ್ ನೀಡುತ್ತದೆ. 5 ನಿಮಿಷದ ಚಾರ್ಜ್ ಗೆ 6 ಗಂಟೆಗಳ ಫೋನ್ ಕರೆ ಅಥವಾ 2.5 ಗಂಟೆಗಳ ಯೂಟ್ಯೂಬ್ ವೀಕ್ಷಿಸುವ ಸಮಯ ದೊರೆಯುತ್ತದೆ. ಪೂರ್ಣ ಚಾರ್ಜ್ ಮಾಡಿದಾಗ ಇದರ 5000ಎಂಎಎಚ್ ಬ್ಯಾಟರಿ 39 ಗಂಟೆಗಳಷ್ಟು ಫೋನ್ ಕರೆ ಮಾಡುವ  ಸಮಯ ನೀಡುತ್ತದೆ ಮತ್ತು 16 ಗಂಟೆಗಳಷ್ಟು ಯೂಟ್ಯೂಬ್ ವಿಡಿಯೋ ವೀಕ್ಷಣೆ ಮಾಡಬಹುದಾಗಿದೆ ಎಂದು ಹೇಳಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News