Jio Mobile Number Scheme : ಮೊಬೈಲ್ ನೆಟ್‌ವರ್ಕ್ ಪೂರೈಕೆದಾರ ಜಿಯೋ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ, ನಿಮ್ಮ ಆಯ್ಕೆಯ ಸಂಖ್ಯೆಯನ್ನು ಮೊಬೈಲ್ ಫೋನ್ ನಂಬರ್ ಆಗಿ ಪಡೆಯಬಹುದು. ನಿಮ್ಮ ಅದೃಷ್ಟ ಸಂಖ್ಯೆ ಅಥವಾ ಜನ್ಮ ದಿನಾಂಕವನ್ನು ನಿಮ್ಮ ಮೊಬೈಲ್ ಸಂಖ್ಯೆಯನ್ನಾಗಿ ಮಾಡಿಕೊಳ್ಳಬಹುದು. ಜಿಯೋದ ಈ ಹೊಸ ಯೋಜನೆ ಅಡಿಯಲ್ಲಿ, ನಿಮಗಿಷ್ಟವಾದ ಯಾವುದೇ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಮೊಬೈಲ್ ಸಂಖ್ಯೆಯು 10 ಅಂಕೆಗಳನ್ನು ಹೊಂದಿದೆ. ಅದರಲ್ಲಿ ಕೊನೆಯ 4 ರಿಂದ 6 ಸಂಖ್ಯೆಗಳನ್ನು ನೀವೇ ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ನೆಚ್ಚಿನ ಮೊಬೈಲ್ ಸಂಖ್ಯೆಯನ್ನು ಪಡೆಯಲು ಬಯಸುವುದಾದರೆ ಏನು ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.  


COMMERCIAL BREAK
SCROLL TO CONTINUE READING

ನಿಮಗಿಷ್ಟವಾದ ಸಂಖ್ಯೆಯನ್ನು ಪಡೆಯುವುದು ಹೇಗೆ ? : 
ಜಿಯೋದ ಈ ಯೋಜನೆಯನ್ನು ಪಡೆದುಕೊಳ್ಳಲು, ಒಮ್ಮೆ 499 ಪಾವತಿಸಬೇಕಾಗುತ್ತದೆ. ಜಿಯೋದ ಈ ಆಫರ್ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಎರಡೂ ಬಳಕೆದಾರರಿಗೆ ಅನ್ವಯವಾಗುತ್ತದೆ. ಇದಕ್ಕಾಗಿ ಯಾರೂ  499 ಕ್ಕಿಂತ ಹೆಚ್ಚು  ಹಣವನ್ನು ಪಾವತಿ ಮಾಡಬೇಕಾಗಿಲ್ಲ. ಈ ಯೋಜನೆಯ ಅಡಿಯಲ್ಲಿ, ಬಳಕೆದಾರರು ತಮ್ಮ ಆಯ್ಕೆಗೆ ಅನುಗುಣವಾಗಿ ಮೊಬೈಲ್ ಸಂಖ್ಯೆಯನ್ನು ಪಡೆದುಕೊಳ್ಳಬಹುದು.  


ಇದನ್ನೂ ಓದಿ : 6 Airbag ಮತ್ತು ಸನ್ ರೂಫ್ ಇರುವ ಅಗ್ಗದ SUV ಇಂದು ಬಿಡುಗಡೆ !


ಈ ಹಂತಗಳನ್ನು ಅನುಸರಿಸಬೇಕು : 
-ಜಿಯೋದ ಈ ಯೋಜನೆಯ ಲಾಭ ಪಡೆಯಲು, ಮೊದಲು https://www.jio.com/selfcare/choice-number/ ವೆಬ್‌ಸೈಟ್‌ಗೆ ಭೇಟಿ ನೀಡಿ . 
- ನಂತರ  ಸೆಲ್ಫ್ ಕೇರ್ ವಿಭಾಗಕ್ಕೆ ಹೋಗಿ. 
-ಇದಲ್ಲದೆ, ಫೋನ್‌ನಲ್ಲಿ MyJio ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ನೀವು ಈ ಹಂತವನ್ನು ತಲುಪಬಹುದು.
-ನಂತರ ನೀವು ಮೊಬೈಲ್ ಸಂಖ್ಯೆ ಆಯ್ಕೆ ವಿಭಾಗಕ್ಕೆ ಹೋಗಿ.
- ಅಲ್ಲಿ ನೀವು ನಿಮ್ಮ ಅಸ್ತಿತ್ವದಲ್ಲಿರುವ ಸಂಖ್ಯೆಯನ್ನು ನಮೂದಿಸಿ. ಈಗ OTT ಮೂಲಕ ನಿಮ್ಮ ಸಂಖ್ಯೆಯನ್ನು ಪರಿಶೀಲಿಸಿ. 
- ಈಗ  ಮೊಬೈಲ್ ನಂಬರ್ ಸೆಲೆಕ್ಷನ್ ವಿಭಾಗಕ್ಕೆ ಹೋಗಿ.  
- ಈ ಆಯ್ಕೆಗೆ ಹೋಗುವ ಮೂಲಕ, ನಿಮ್ಮ ಇಚ್ಛೆಗೆ ಅನುಗುಣವಾಗಿ ಮೊಬೈಲ್ ಸಂಖ್ಯೆಯ ಕೊನೆಯ 4 ರಿಂದ 6 ಅಂಕೆಗಳನ್ನು ಆಯ್ಕೆ ಮಾಡುವುದು ಸಾಧ್ಯವಾಗುತ್ತದೆ. 
-ಆದ್ಯತೆಯ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿದ ನಂತರ,  ಪೇಮೆಂಟ್ ವಿಭಾಗಕ್ಕೆ ಹೋಗಿ 499 ರೂ.  ಪಾವತಿಸಬೇಕಾಗುತ್ತದೆ.
- ಹಣ ಪಾವತಿಸಿದ 24 ಗಂಟೆಗಳಲ್ಲಿ ಹೊಸ ಮೊಬೈಲ್ ಸಂಖ್ಯೆಯನ್ನು ಸಕ್ರಿಯಗೊಳಿಸಲಾಗುತ್ತದೆ. 


ಇದನ್ನೂ ಓದಿ : Tech News: ಭಾರತದಲ್ಲಿ ನಾಳೆ ಬಿಡುಗಡೆಯಾಗುತ್ತಿದೆ ಒಪ್ಪೋ ರೆನೊ 10 ಸರಣಿ, DSLR ಕ್ಯಾಮೆರಾ ಮರೆತ್ಹೋಗುವಿರಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.