Tata Punch Rival- Hyundai Exter: ಮಿನಿ ಎಸ್‌ಯುವಿಗಳ ಜನಪ್ರಿಯತೆ ಭಾರತದಲ್ಲಿ ಹೆಚ್ಚುತ್ತಿದೆ. ಪ್ರಸ್ತುತ, ಟಾಟಾ ಪಂಚ್ ಮೈಕ್ರೋ SUV ವಿಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಆದರೆ ಇನ್ನು ಟಾಟಾ ಪಂಚ್ ಹ್ಯುಂಡೈ Exterನಿಂದ ಸ್ಪರ್ಧೆಯನ್ನು ಎದುರಿಸಲಿದೆ. ಹುಂಡೈ ಮೋಟಾರ್ ಇಂಡಿಯಾ ತನ್ನ Exter ಮೈಕ್ರೋ SUV ಅನ್ನು ಇಂದು (ಜುಲೈ 10, 2023) ಬಿಡುಗಡೆ ಮಾಡಲಿದೆ. ಇದು ಭಾರತದಲ್ಲಿ ಬಿಡುಗಡೆಯಾಗುವ ಅತ್ಯಂತ ಪುಟ್ಟ ಮತ್ತು ಕೈಗೆಟುಕುವ SUV ಆಗಿರಲಿದೆ.
ಹುಂಡೈ ಎಕ್ಸ್‌ಟರ್‌ಗಾಗಿ ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ. 11,000 ರೂಪಾಯಿಗಳ ಟೋಕನ್ ಮೊತ್ತ ಪಾವತಿಸಿ ಈ ಕಾರನ್ನು ಬುಕ್ ಮಾಡಬಹುದಾಗಿದೆ. SUV ಐದು ಟ್ರಿಮ್ ಹಂತಗಳಲ್ಲಿ ಮತ್ತು 15 ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದು EX, S, SX, SX (O) ಮತ್ತು SX (O) ಕನೆಕ್ಟ್ ಟ್ರಿಮ್‌ಗಳಲ್ಲಿ ಬರಲಿದೆ. ಅದರ ಮೂಲ ರೂಪಾಂತರದ ಬೆಲೆ 6 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಫುಲ್ಲಿ ಲೋಡೆಡ್ ವೆರಿಯೇಂಟ್ ಬೆಲೆ 10 ಲಕ್ಷದವರೆಗೆ ಹೋಗಬಹುದು.
ಇದನ್ನೂ ಓದಿ : Tech News: ಭಾರತದಲ್ಲಿ ನಾಳೆ ಬಿಡುಗಡೆಯಾಗುತ್ತಿದೆ ಒಪ್ಪೋ ರೆನೊ 10 ಸರಣಿ, DSLR ಕ್ಯಾಮೆರಾ ಮರೆತ್ಹೋಗುವಿರಿ!
1.2 ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದೆ ಎಂದು ಹ್ಯುಂಡೈ ಖಚಿತಪಡಿಸಿದೆ. ಈ ಎಂಜಿನ್‌ನೊಂದಿಗೆ ಸಿಎನ್‌ಜಿ ಕಿಟ್ ಸಹ ನೀಡಲಾಗುವುದು. ಇದನ್ನು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುವುದು. ಆದರೆ, ಸಿಎನ್‌ಜಿ ರೂಪಾಂತರಗಳಲ್ಲಿ ಮ್ಯಾನುವಲ್ ಟ್ರಾನ್ಸ್‌ಮಿಷನ್ ಮಾತ್ರ ಲಭ್ಯವಿರುತ್ತದೆ. ಪೆಟ್ರೋಲ್ ನಲ್ಲಿ ಈ ಎಂಜಿನ್ 83bhp ಮತ್ತು 114Nm ಅನ್ನು ಜನರೇಟ್ ಮಾಡುತ್ತದೆ.
ಪಂಚ್‌ಗೆ ಹೋಲಿಸಿದರೆ, ಹ್ಯುಂಡೈ Exter ಸ್ವಲ್ಪ ಉದ್ದ, ಎತ್ತರ ಮತ್ತು ಹೆಚ್ಚು ವಿಶಾಲವಾಗಿರುತ್ತದೆ. ಇದರ ಉದ್ದ 3800-3900 ಎಂಎಂ, ಎತ್ತರ 1631 ಎಂಎಂ ಮತ್ತು ವೀಲ್ ಬೇಸ್ 2450 ಎಂಎಂ ಆಗಿರುತ್ತದೆ. ಆದರೆ, ಪಂಚ್ 3700 ಎಂಎಂ ಉದ್ದ, 1690 ಎಂಎಂ ಅಗಲ, 1595 ಎಂಎಂ ಎತ್ತರ ಮತ್ತು 2435 ಎಂಎಂ ವ್ಹೀಲ್‌ಬೇಸ್‌ನೊಂದಿಗೆ ಬರುತ್ತದೆ.
ಇದನ್ನೂ ಓದಿ : ಮಾರುಕಟ್ಟೆಗೆ 32 ಇಂಚಿನ ಸ್ಮಾರ್ಟ್ LED ಟಿವಿ ಗ್ರ್ಯಾಂಡ್ ಎಂಟ್ರಿ: ಊಹೆಗೂ ಮೀರಿದ ವೈಶಿಷ್ಟ್ಯ! ಬೆಲೆ 10,000ಕ್ಕಿಂತ ಕಡಿಮೆ
ಹೊಸ ಹ್ಯುಂಡೈ ಎಕ್ಸ್‌ಟರ್ ತನ್ನ ವಿಭಾಗದಲ್ಲಿ ಡ್ಯುಯಲ್ ಕ್ಯಾಮೆರಾಗಳು ಮತ್ತು ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ ಡ್ಯಾಶ್‌ಕ್ಯಾಮ್ ಪಡೆಯುವ ಮೊದಲ ಕಾರಾಗಿರಲಿದೆ. ಇದು 6 ಏರ್ ಬ್ಯಾಗ್ ಸ್ಟ್ಯಾಂಡರ್ಡ್ ಪಡೆಯಲಿದೆ. ಇದರೊಂದಿಗೆ, ಇದು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಐಸೊಫಿಕ್ಸ್, ಹಿಲ್ ಹೋಲ್ಡ್ ಅಸಿಸ್ಟ್, 3-ಪಾಯಿಂಟ್ ಸೀಟ್ ಬೆಲ್ಟ್, ಎಲ್ಲಾ ಸೀಟ್‌ಗಳಿಗೆ ಸೀಟ್‌ಬೆಲ್ಟ್ ರಿಮೈಂಡರ್ ಮತ್ತು ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=38l6m8543Vk
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ