ಬೆಂಗಳೂರು : ಈಗ ಯಾವುದೇ ವಿಷಯದ ಬಗ್ಗೆ ಹೆಚ್ಚಿನ ಜ್ಞಾನ ಬೇಕು ಎಂದಾದರೆ ತಿಳಿದುಕೊಳ್ಳುವುದು ಬಹಳ ಸುಲಭ. ಎಲ್ಲಾ ಮಾಹಿತಿ ನಮ್ಮ ಬೆರೆಳ ತುದಿಯಲ್ಲಿಯೇ ಲಭ್ಯವಿರುತ್ತದೆ. ಯಾವುದೇ ಸಂದೇಹಕ್ಕೆ  ಪರಿಹಾರ ಕಂಡುಕೊಳ್ಳಲು ಗೂಗಲ್ ಬಳಸಲಾಗುತ್ತದೆ. ವಿವಾಹಿತ ಮಹಿಳೆಯರು ಕೂಡಾ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಆದರೆ ವಿವಾಹಿತ ಮಹಿಳೆಯರು ಗೂಗಲ್‌ನಲ್ಲಿ ಏನನ್ನು ಹುಡುಕುತ್ತಾರೆ ಎನ್ನುವುದನ್ನು ಇತ್ತೀಚಿನ ಅಧ್ಯಯನವು ಬಹಿರಂಗಪಡಿಸಿದೆ. 


COMMERCIAL BREAK
SCROLL TO CONTINUE READING

ವಿವಾಹಿತ ಮಹಿಳೆಯರು Googleನಲ್ಲಿ ಏನನ್ನು ಹೆಚ್ಚು ಹುಡುಕುತ್ತಾರೆ? :
Googleನ ಡೇಟಾ ಪ್ರಕಾರ, ವಿವಾಹಿತ ಮಹಿಳೆಯರು ಗಂಡಂದಿರು ಸಾಮಾನ್ಯವಾಗಿ  ಏನು ಇಷ್ಟಪಡುತ್ತಾರೆ ಎಂಬುದನ್ನು ಹುಡುಕುತ್ತಿರುತ್ತಾರೆಯಂತೆ. ಅವರ ಆಯ್ಕೆಗಳು ಯಾವುವು ? ಏನನ್ನು  ಇಷ್ಟಪಡುತ್ತಾರೆ , ಯಾವುದನ್ನು ಇಷ್ಟಪಡುವುದಿಲ್ಲ ಎಂಬ ಪ್ರಶ್ನೆಗಳನ್ನು ಗೂಗಲ್ ನಲ್ಲಿ ಹಾಕುತ್ತಿರುತ್ತಾರೆಯಂತೆ.  ಅಲ್ಲದೆ, ವಿವಾಹಿತ ಮಹಿಳೆಯರು ತಮ್ಮ ಗಂಡನ ಹೃದಯವನ್ನು ಹೇಗೆ ಗೆಲ್ಲಬಹುದು, ಅವರನ್ನು ಹೇಗೆ ಸಂತೋಷಪಡಿಸಬಹುದು ಎಂಬ ಪ್ರಶ್ನೆಯನ್ನು ಗೂಗಲ್‌ನಲ್ಲಿ ಸಾಕಷ್ಟು ಬಾರಿ ಕೇಳುತ್ತಾರೆ ಎಂದು ಅಧ್ಯಯನದ ವರದಿ ಹೇಳಿದೆ. 


ಇದನ್ನೂ ಓದಿ : 27 ಸಾವಿರ ರೂಪಾಯಿಯ ಸ್ಮಾರ್ಟ್ ಫೋನ್ ಕೇವಲ ಏಳು ಸಾವಿರ ರೂಪಾಯಿಗೆ ಲಭ್ಯ .!


ಪತಿಯನ್ನು  ಕಪಿ ಮುಷ್ಟಿಯಲ್ಲಿಟ್ಟುಕೊಳ್ಳುವುದು ಹೇಗೆ ?
ವಿವಾಹಿತ ಮಹಿಳೆಯರು ತಮ್ಮ ಪತಿಯನ್ನು ಹೇಗೆ ತಮ್ಮ ಮುಷ್ಟಿಯಲ್ಲಿಟ್ಟುಕೊಳ್ಳಬೇಕು ಎಂಬ ಪ್ರಶ್ನೆಯನ್ನು ಕೂಡಾ ಗೂಗಲ್‌ನಲ್ಲಿ ಕೇಳುತ್ತಾರೆಯಂತೆ. ಮಾತ್ರವಲ್ಲದೆ, ತಮ್ಮ ಕುಟುಂಬವನ್ನು ವಿಸ್ತರಿಸುವ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಬೇಕು? ಮಗುವನ್ನು ಹೊಂದಲು ಸರಿಯಾದ ಸಮಯ ಯಾವುದು ಎಂದು ತಿಳಿಯಲು ಬಯಸುತ್ತಾರೆಯಂತೆ. 


ವಿವಾಹಿತ ಮಹಿಳೆಯರು ಗೂಗಲ್ ನಲ್ಲಿ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು :
1. ಮದುವೆಯ ನಂತರ ತಮ್ಮ ಹೊಸ ಸಂಸಾರದಲ್ಲಿ ಹೇಗೆ ನಡೆದುಕೊಳ್ಳಬೇಕು?  ಅತ್ತೆ ಮಾವಂದಿರ ಜೊತೆ ಹೇಗೆ ನಡೆದುಕೊಳ್ಳಬೇಕು? 
2. ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಹೇಗೆ ?
3. ಮದುವೆಯ ನಂತರ ಸ್ವಂತ ವ್ಯಾಪಾರವನ್ನು ಹೇಗೆ ಆರಂಭಿಸುವುದು? ಕುಟುಂಬ ಮತ್ತು ಬಿಸಿನೆಸ್ ಎರಡನ್ನೂ ಜೊತೆಯಾಗಿ ಹೇಗೆ ನಿಭಾಯಿಸುವುದು ? 


ಇದನ್ನೂ ಓದಿ : Facebook-ಇನ್‌ಸ್ಟಾಗ್ರಾಮ್‌ನಿಂದ ಹಣ ಗಳಿಸುವ ಅವಕಾಶ- ಸುಲಭ ಮಾರ್ಗ ತಿಳಿಸಿದ ಮಾರ್ಕ್ ಜುಕರ್‌ಬರ್ಗ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.