27 ಸಾವಿರ ರೂಪಾಯಿಯ ಸ್ಮಾರ್ಟ್ ಫೋನ್ ಕೇವಲ ಏಳು ಸಾವಿರ ರೂಪಾಯಿಗೆ ಲಭ್ಯ .!

Flipkart Electronics Sale: ಇಂದು ರಿಯಲ್‌ಮಿಯ 5G ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. 27 ಸಾವಿರ ರೂಪಾಯಿ ಬೆಲೆಯ Realme 9 Pro+ 5G ಫೋನ್ ಅನ್ನು ಇಲ್ಲಿ ಕೇವಲ 7 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು. 

Written by - Ranjitha R K | Last Updated : Jun 23, 2022, 08:20 AM IST
  • ಇಂದಿನಿಂದ ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್ ಸೇಲ್
  • ಕೇವಲ 7 ಸಾವಿರ ರೂಪಾಯಿಗಳಿಗೆ Realme 9 Pro+ 5G
  • ಜೂನ್ 26 ರವರೆಗೆ ನಡೆಯಲಿದೆ ಸೇಲ್
27 ಸಾವಿರ ರೂಪಾಯಿಯ ಸ್ಮಾರ್ಟ್ ಫೋನ್ ಕೇವಲ ಏಳು ಸಾವಿರ ರೂಪಾಯಿಗೆ ಲಭ್ಯ .! title=
Flipkart Electronics Sale (file photo)

ಬೆಂಗಳೂರು : Flipkart Electronics Sale: ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ಜೂನ್ 23 ರಿಂದ ಆರಂಭವಾಗಿದ್ದು, ಜೂನ್ 26 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರೀ  ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ 5G ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಭಾರತದಲ್ಲಿ ಶೀಘ್ರದಲ್ಲೇ 5G ಸೇವೆ ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಜನರು ಕೂಡಾ 5G ಫೋನ್‌ಗಳತ್ತ ಮೊರೆ ಹೋಗುತ್ತಿದ್ದಾರೆ. ಫ್ಲಿಪ್‌ಕಾರ್ಟ್‌ ಎಲೆಕ್ಟ್ರಾನಿಕ್ಸ್ ಸೇಲ್ ನಲ್ಲಿ   Realme ನ 5G ಸ್ಮಾರ್ಟ್‌ಫೋನ್ ಅನ್ನು ಅತ್ಯಂತ ಅಗ್ಗವಾಗಿ ಖರೀದಿಸಬಹುದು. 27 ಸಾವಿರ ರೂಪಾಯಿ ಬೆಲೆಯ Realme 9 Pro+ 5G ಫೋನ್ ಅನ್ನು ಇಲ್ಲಿ ಕೇವಲ 7 ಸಾವಿರ ರೂಪಾಯಿಗಳಿಗೆ ಖರೀದಿಸಬಹುದು. 

Realme 9 Pro+ 5G ಕೊಡುಗೆಗಳು ಮತ್ತು ರಿಯಾಯಿತಿಗಳು :
Realme 9 Pro + 5G 8 GB RAM + 128 GB ಸ್ಟೋರೇಜ್‌ನ ಬೆಲೆ 24,999 ರೂಪಾಯಿಗಳು, ಆದರೆ ಈ ಫೋನ್ ಖರೀದಿ ಮೇಲೆ  ಹಲವಾರು ಬ್ಯಾಂಕ್ ಆಫರ್ ಗಳು ಮತ್ತು ಮತ್ತು ವಿನಿಮಯ ಕೊಡುಗೆಗಕಳು ಕೂಡಾ ಇವೆ. ಈ ಕಾರಣದಿಂದಾಗಿ ಫೋನ್‌ನ ಬೆಲೆ 10 ಸಾವಿರ ರೂಪಾಯಿಗಿಂತ ಕಡಿಮೆಯಾಗುತ್ತದೆ. 

ಇದನ್ನೂ ಓದಿ : Facebook-ಇನ್‌ಸ್ಟಾಗ್ರಾಮ್‌ನಿಂದ ಹಣ ಗಳಿಸುವ ಅವಕಾಶ- ಸುಲಭ ಮಾರ್ಗ ತಿಳಿಸಿದ ಮಾರ್ಕ್ ಜುಕರ್‌ಬರ್ಗ್

Realme 9 Pro+ 5G ಬ್ಯಾಂಕ್  ಆಫರ್ ಗಳು : 
Realme 9 Pro + 5G ಖರೀದಿಸಲು,  ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ ಬಳಸಿದರೆ 6 ಸಾವಿರ ರೂಪಾಯಿಗಳ ರಿಯಾಯಿತಿ ಸಿಗುತ್ತದೆ.  ಇದರ ಹೊರತಾಗಿ, SBI ಯ ಕ್ರೆಡಿಟ್ ಕಾರ್ಡ್‌ ಮೂಲಕ ಪಾವತಿಸಿದರೆ,  ಮತ್ತೆ ಸಾವಿರ ರೂಪಾಯಿಗಳ ರಿಯಾಯಿತಿ ಪಡೆಯುವುದು ಸಾಧ್ಯವಾಗುತ್ತದೆ. ಹೀಗೆ ಫೋನ್ ಬೆಲೆ  19,999 ರೂ. ಗೆ ಇಳಿಯುತ್ತದೆ. ಇದಲ್ಲದೆ, ಈ ಫೋನ್ ಅನ್ನು ಎಕ್ಸ್ಚೇಂಜ್ ಆಫರ್ ಮೇಲೆ ಕೂಡಾ ಖರೀದಿಸಬಹುದು. 

Realme 9 Pro+ 5G ಎಕ್ಸ್ಚೇಂಜ್ ಆಫರ್ :
Realme 9 Pro + 5G ನಲ್ಲಿ 12,500 ರೂಪಾಯಿಗಳ ವಿನಿಮಯ ಕೊಡುಗೆ ಅಥವಾ ಎಕ್ಸ್ಚೇಂಜ್ ಆಫರ್ ಇದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು  ವಿನಿಮಯ ಮಾಡಿಕೊಂಡರೆ, ಹೊಸ ಫೋನ್ ಖರೀದಿ ಮೇಲೆ ತುಂಬಾ ರಿಯಾಯಿತಿ ಪಡೆಯಬಹುದು. ಆದರೆ ಹಳೆಯ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 12,500 ರೂ. ಆಫರ್ ಪಡೆಯಬಹುದು. ಹೀಗೆ ಎಲ್ಲಾ ರಿಯಾಯಿತಿಗಳನ್ನು ಪಡೆಯುವುದು ಸಾಧ್ಯವಾದರೆ  Realme 9 Pro+ 5G ಫೋನ್ ಅನ್ನು ಕೇವಲ 7,499 ರೂ.ಗೆ ಖರೀದಿಸಬಹುದು. 

ಇದನ್ನೂ ಓದಿ : ಟ್ವಿಟ್ಟರ್ ಬಳಕೆದಾರರಿಗೊಂದು ಗುಡ್ ನ್ಯೂಸ್...!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News