Maruti Suzuki Eeco New Model : ಮಾರುತಿ ಸುಜುಕಿ ತನ್ನ ಇಕೊ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಹೊಸ  ರೂಪದಲ್ಲಿ ಬಿಡುಗಡೆ ಮಾಡಿದೆ.  ಈ ಹೊಸ Eeco MPVಯನ್ನು 5.10 ಲಕ್ಷದ ರೂಪಾಯಿ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿದೆ.  ಇದು 5-ಸೀಟರ್ ಕಾನ್ಫಿಗರೇಶನ್, 7-ಸೀಟರ್ ಕಾನ್ಫಿಗರೇಶನ್, ಕಾರ್ಗೋ, ಟೂರ್ ಮತ್ತು ಆಂಬ್ಯುಲೆನ್ಸ್ ಆವೃತ್ತಿಗಳನ್ನು ಒಳಗೊಂಡಿರುವ 13 ರೂಪಾಂತರಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ಕಾರು ಪೆಟ್ರೋಲ್ ಎಂಜಿನ್‌ನೊಂದಿಗೆ ಸಿಎನ್‌ಜಿ ಕಿಟ್‌ನಲ್ಲಿಯೂ ಲಭ್ಯವಿದೆ.  


COMMERCIAL BREAK
SCROLL TO CONTINUE READING

ಮಾರುತಿ ಇಕೋ ಪ್ರಸ್ತುತ ದೇಶದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಅಗ್ಗದ 7 ಸೀಟರ್ ಕಾರು. ಇಕೋ ಬಿಡುಗಡೆಯಾದ ನಂತರ ಕಳೆದ ದಶಕದಲ್ಲಿ 9.75 ಲಕ್ಷಕ್ಕೂ ಹೆಚ್ಚು ಜನರು ಈ ಕಾರನ್ನು ಖರೀದಿಸಿದ್ದಾರೆ ಎಂದು ಕಂಪನಿಯ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ, ಶಶಾಂಕ್ ಶ್ರೀವಾಸ್ತವ್  ತಿಳಿಸಿದ್ದಾರೆ. 


ಇದನ್ನೂ ಓದಿ :  Best Broadband Plans: ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಬ್ರಾಡ್‌ಬ್ಯಾಂಡ್ ಯೋಜನೆ! ಇಲ್ಲಿದೆ ವಿವರ


ಎಂಜಿನ್ ಮತ್ತು ಮೈಲೇಜ್ : 
ಮಾರುತಿಯ ಹೊಸ 1.2-ಲೀಟರ್ ಡ್ಯುಯಲ್ಜೆಟ್ ಪೆಟ್ರೋಲ್ ಎಂಜಿನ್ ಅನ್ನು ಈಗ ಇಕೋದಲ್ಲಿ ನೀಡಲಾಗಿದೆ. ಇದೇ ಎಂಜಿನ್ ಅನ್ನು  ಡಿಜೈರ್, ಸ್ವಿಫ್ಟ್, ಬಲೆನೊ ಮತ್ತು ಇತರ ಮಾದರಿಗಳಲ್ಲಿಯೂ  ಅಳವಡಿಸಲಾಗಿದೆ.  ಇದು 6,000 rpmನಲ್ಲಿ 80.76 PS ಶಕ್ತಿಯನ್ನು ಮತ್ತು 104.4 Nm ನ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಇದು ಹಳೆಯ ಎಂಜಿನ್‌ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ. CNGಯಲ್ಲಿ ಕಾರು ಚಾಲನೆಯಲ್ಲಿರುವಾಗ, ಶಕ್ತಿಯು 71.65 PS ಗೆ ಇಳಿಯುತ್ತದೆ ಮತ್ತು ಟಾರ್ಕ್ 95 Nm ಗೆ ಇಳಿಯುತ್ತದೆ. ಕಂಪನಿಯ ಪ್ರಕಾರ, ಅದರ ಮೈಲೇಜ್ ಪೆಟ್ರೋಲ್ ಎಂಜಿನ್‌ನಲ್ಲಿ 20.20 ಕಿಮೀ/ಲೀ ಮತ್ತು ಸಿಎನ್‌ಜಿಯೊಂದಿಗೆ 27.05 ಕಿಮೀ/ಕೆಜಿ. ಆಗಿರುತ್ತದೆ. ಇದು ಹಿಂದಿನ ಎಂಜಿನ್‌ಗಿಂತ ಶೇಕಡಾ 29 ರಷ್ಟು ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿದೆ. 


ಮಾರುತಿ ಸುಜುಕಿ ಇಕೋ ವೈಶಿಷ್ಟ್ಯಗಳು :
ಮಾರುತಿ ಸುಜುಕಿ ಇಕೋ  ಮುಂಭಾಗದ ಸೀಟುಗಳು, ಕ್ಯಾಬಿನ್ ಏರ್ ಫಿಲ್ಟರ್ ಮತ್ತು ಹೊಸ ಬ್ಯಾಟರಿ ಸೇವರ್ ಕಾರ್ಯವನ್ನು ಪಡೆಯುತ್ತದೆ. ಇದು ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ಸ್ಟೀರಿಂಗ್ ವೀಲ್ ಮತ್ತು ACಗಾಗಿ ರೋಟರಿ ಕಂಟ್ರೋಲ್ ಹೊಂದಿದೆ.  ಸುರಕ್ಷತೆಗಾಗಿ, ಎಂಜಿನ್ ಇಮೊಬಿಲೈಸರ್, ಡ್ಯುಯಲ್ ಏರ್‌ಬ್ಯಾಗ್‌ಗಳು, ಇಬಿಡಿಯೊಂದಿಗೆ ಎಬಿಎಸ್, ಬಾಗಿಲು ಮತ್ತು ಕಿಟಕಿಗಳಿಗೆ ಚೈಲ್ಡ್ ಲಾಕ್ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಒದಗಿಸಲಾಗಿದೆ.


ಇದನ್ನೂ ಓದಿ : ಸೂರ್ಯನೊಳಗೆ ಅಡಗಿದೆಯಂತೆ ದೈತ್ಯ 'ಹಾವು' .! ಏನು ಹೇಳುತ್ತದೆ ಈ ವೈರಲ್ ವೀಡಿಯೊ ?


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...