ಸೂರ್ಯನೊಳಗೆ ಅಡಗಿದೆಯಂತೆ ದೈತ್ಯ 'ಹಾವು' .! ಏನು ಹೇಳುತ್ತದೆ ಈ ವೈರಲ್ ವೀಡಿಯೊ ?

Sun Viral Video:ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊವನ್ನು ನೋಡಿದಾಗ, ಹಾವು ಸೂರ್ಯನೊಳಗೆ ಚಲಿಸುತ್ತಿರುವಂತೆ ಭಾಸವಾಗುತ್ತದೆ. 

Written by - Ranjitha R K | Last Updated : Nov 22, 2022, 01:30 PM IST
  • ಸೂರ್ಯನ ಮೇಲ್ಮೈಯಲ್ಲಿ ಹಾವು ಓಡುತ್ತಿರುವಂಥಹ ದೃಶ್ಯ
  • ಈ ವಿಡಿಯೋ ವೀಕ್ಷಿಸಿದವರೆಲ್ಲರೂ ಬೆರಗಾಗಿದ್ದಾರೆ.
  • ಹಾವು ಸೂರ್ಯನೊಳಗೆ ಚಲಿಸುತ್ತಿರುವಂತೆ ಭಾಸವಾಗುತ್ತದೆ.
ಸೂರ್ಯನೊಳಗೆ ಅಡಗಿದೆಯಂತೆ ದೈತ್ಯ 'ಹಾವು' .! ಏನು ಹೇಳುತ್ತದೆ ಈ ವೈರಲ್ ವೀಡಿಯೊ ?  title=

Sun Viral Video : ಯುರೋಪಿಯನ್ ಸ್ಪೇಸ್ ಏಜೆನ್ಸಿಯ  ಸೋಲಾರ್ ಆರ್ಬಿಟರ್ ವಿಡಿಯೋವೊಂದನ್ನು ಮಾಡಿದೆ. ಈ ವಿಡಿಯೋದಲ್ಲಿ ಸೂರ್ಯನ ಮೇಲ್ಮೈಯಲ್ಲಿ ಹಾವು ಓಡುತ್ತಿರುವಂಥಹ ದೃಶ್ಯವನ್ನು ಕಾಣಬಹುದು. ಈ ವಿಡಿಯೋ ವೀಕ್ಷಿಸಿದವರೆಲ್ಲರೂ ಬೆರಗಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊವನ್ನು ನೋಡಿದಾಗ, ಹಾವು ಸೂರ್ಯನೊಳಗೆ ಚಲಿಸುತ್ತಿರುವಂತೆ ಭಾಸವಾಗುತ್ತದೆ. 

ಸೂರ್ಯನೊಳಗೆ ಹಾವು .! 
ಈ  ವಿದ್ಯಮಾನವನ್ನು Serpent inside Sun ಎಂದು, ಈ ವಿಡಿಯೋವನ್ನು ರೆಕಾರ್ಡ್ ಮಾಡಿರುವ ಇಎಸ್‌ಎ ತಂಡ  ಕರೆದಿದೆ. ಸೂರ್ಯನ ಒಳ ಮತ್ತು ಹೊರ ಮೇಲ್ಮೈಗಳ ಉಷ್ಣತೆಯು  ಅಧಿಕವಾಗಿದ್ದು, ಇಲ್ಲಿ ಯಾವುದೇ ಜೀವಿಗಳು ವಾಸಿಸಲು ಸಾಧ್ಯವಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.  

ಇದನ್ನೂ ಓದಿ : E-Bike: ಗಿಯರ್ ಹೊಂದಿರುವ Electric Bike, ಫುಲ್ ಚಾರ್ಜ್ ಗೆ 150 ಕೀ,ಮೀ ಮೈಲೇಜ್

ವೀಡಿಯೊದಲ್ಲಿ ಹಾವಿನಂತೆ ಚಲಿಸುತ್ತಿರುವ  ವಸ್ತು, ಸೌರ ಸ್ಫೋಟದಿಂದ ಹೊರಬರುವ ಸೌರ ತರಂಗವಾಗಿದೆ. ಈ ಸೌರ ತರಂಗವೇ ಹಾವಿನಂತೆ ಚಲಿಸುತ್ತಿದೆ ಎನ್ನುವುದನ್ನು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಸೂರ್ಯನೊಳಗೆ ಇಂತಹ ಅಲೆಗಳು ಕಂಡು ಬರುವುದು ಸಾಮಾನ್ಯ ವಿದ್ಯಮಾನವಾಗಿದೆ. ಆದರೆ ಈ ದೃಶ್ಯ ಸೆರೆ ಸಿಕ್ಕಿರುವುದು ವಿಶೇಷವಾಗಿದೆ. 

 

ಇದನ್ನೂ ಓದಿ : 20,000 ಮೌಲ್ಯದ Realme ಫೋನ್ ಕೇವಲ 999 ರೂಗಳಲ್ಲಿ ಲಭ್ಯ.!

ವಿಜ್ಞಾನಿಗಳ ಪ್ರಕಾರ, 'ಪ್ಲಾಸ್ಮಾದ ಉಷ್ಣತೆಯು ಸೂರ್ಯನ ಉಳಿದ ಭಾಗಗಳಿಗಿಂತ ಸ್ವಲ್ಪ ತಂಪಾಗಿರುವಾಗ, ಇಂಥಹ ಸೌರ ಅಲೆಯು ರೂಪುಗೊಳ್ಳುತ್ತದೆ. ಈ ಸೌರ ತರಂಗವು ಸೌರ ಕಾಂತಕ್ಷೇತ್ರದಿಂದ ಹೊರಬರುವ ತಂತು. ಮುಂದುವರಿದ ತಂತ್ರಜ್ಞಾನದ ಸಹಾಯದಿಂದ ಈ ಚಲನೆಯನ್ನು ತಿಳಿದುಕೊಳ್ಳುವುದು ಸಾಧ್ಯವಾಗಿದೆ. 

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News