Maruti Suzuki Swift CNG : ಮಾರುತಿ ಸುಜುಕಿ ತನ್ನ ಜನಪ್ರಿಯ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನ ಸಿಎನ್‌ಜಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದುಬಾರಿ ಪೆಟ್ರೋಲ್ ದರದಿಂದ ಬೇಸತ್ತಿರುವವರಿಗೆ ಈ ಕಾರು ಪರಿಹಾರ ನೀಡಲಿದೆ.   CNG ರೂಪಾಂತರಗಳು ಭಾರತದಲ್ಲಿ ಸಾಕಷ್ಟು ಜನಪ್ರಿಯವಾಗಿವೆ.ಈ ಕಾರುಗಳು  ಉತ್ತಮ ಮೈಲೇಜ್ ಒದಗಿಸುವುದೇ ಇದಕ್ಕೆ ಕಾರಣ.ಅಲ್ಲದೆ ಸಿಎನ್ ಜಿ ಕಾರುಗಳು ಮಾಲಿನ್ಯವನ್ನು ಉಂಟುಮಾಡುವುದಿಲ್ಲ.ಹ್ಯಾಚ್‌ಬ್ಯಾಕ್‌ನಲ್ಲಿ,ಗ್ರಾಹಕರಿಗೆ 1.2-ಲೀಟರ್ ಮೂರು-ಸಿಲಿಂಡರ್ Z12E ನ್ಯಾಚ್ಯುರಲಿ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್ ನೊಂದಿಗೆ ಬರುತ್ತದೆ.ಇದು ಅಸ್ತಿತ್ವದಲ್ಲಿರುವ 1.2-ಲೀಟರ್ K-ಸರಣಿಯ ನಾಲ್ಕು ಸಿಲಿಂಡರ್ ಎಂಜಿನ್‌ಗಿಂತ ಉತ್ತಮ ಮೈಲೇಜ್ ನೀಡುತ್ತದೆ.


COMMERCIAL BREAK
SCROLL TO CONTINUE READING

ಮಾರುತಿ ಸ್ವಿಫ್ಟ್ ಸಿಎನ್‌ಜಿ ಬಿಡುಗಡೆ :
ಮಾರುತಿ ಸ್ವಿಫ್ಟ್ CNGಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ನ್ಯೂಸ್ ಜನರೆಶನ್ ಮಾಡೆಲ್ ಅನ್ನು ಹೊಸ ಪೆಟ್ರೋಲ್ ಎಂಜಿನ್‌ನೊಂದಿಗೆ ಮೇ 9 ,2024 ರಂದು ಪ್ರಾರಂಭಿಸಲಾಯಿತು. 


ಇದನ್ನೂ ಓದಿ : 23kmpl ಮೈಲೇಜ್ ನೀಡುವ 5 ಸೀಟರ್ ಕಾರು: ಅದ್ಭುತ ವೈಶಿಷ್ಟ್ಯದ ಜೊತೆ ಬೆಲೆಯೂ 5 ಲಕ್ಷಕ್ಕಿಂತ ಕಡಿಮೆ! ಖರೀದಿಗೆ ಇದು ಬೆಸ್ಟ್ ಟೈಂ


ಎಂಜಿನ್ ಮತ್ತು ಪವರ್ :
ಮಾರುತಿ ಸ್ವಿಫ್ಟ್ ಸಿಎನ್‌ಜಿಯಲ್ಲಿ ಹೊಸ Z ಸರಣಿಯ ಎಂಜಿನ್ ಅನ್ನು ಒದಗಿಸಲಾಗಿದೆ.ಪೆಟ್ರೋಲ್ ಎಂಜಿನ್‌ನೊಂದಿಗೆ ಹೋಲಿಸಿದರೆ,ಇದರಕ್ಲಿ ಬಹಳಷ್ಟು  ಬದಲಾವಣೆಗಳನ್ನು ಮಾಡಲಾಗಿದೆ. ಈಗ ಈ 1.2 ಲೀಟರ್ ಎಂಜಿನ್ 69.75 ಪಿಎಸ್ ಪವರ್ ಮತ್ತು 101.8 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಸಿಎನ್‌ಜಿ ಮೋಡ್‌ನಲ್ಲಿ  ಜನರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.ಇದರೊಂದಿಗೆ, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಕೂಡಾ ನೀಡಲಾಗಿದೆ. 


ವೈಶಿಷ್ಟ್ಯಗಳು ಮತ್ತು ವಿಶೇಷಣಗಳು :
ಮಾರುತಿ ಸ್ವಿಫ್ಟ್ ಸಿಎನ್‌ಜಿಯಲ್ಲಿ,ಗ್ರಾಹಕರಿಗೆ ಪೆಟ್ರೋಲ್ ರೂಪಾಂತರಗಳಂತೆಯೇ  ವೈಶಿಷ್ಟ್ಯಗಳನ್ನು ನೀಡಲಾಗುತ್ತದೆ. ಇದು ABS, ESP ಪ್ಲಸ್, ಸ್ಟ್ಯಾಂಡರ್ಡ್ ಆಗಿ ಆರು ಏರ್‌ಬ್ಯಾಗ್‌ಗಳು, ಹಿಲ್ ಹೋಲ್ಡ್ ಅಸಿಸ್ಟ್, ಅಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ರಿಯರ್ ಎಸಿ ವೆಂಟ್, ವೈರ್‌ಲೆಸ್ ಚಾರ್ಜರ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ.ಗ್ರಾಹಕರಿಗೆ ಕಾರಿನಲ್ಲಿ 7 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸುಜುಕಿ ಕನೆಕ್ಟ್ ಮುಂತಾದ ವೈಶಿಷ್ಟ್ಯಗಳನ್ನು ನೀಡಲಾಗಿದೆ.


ಇದನ್ನೂ ಓದಿ : ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಇದು !ಇಲ್ಲಿ ತರಕಾರಿ ಬೆಲೆಯಲ್ಲಿ ಸಿಗುತ್ತದೆ ಎಲ್ಲಾ ಬ್ರಾಂಡಿನ ಫೋನ್ !ಒಮ್ಮೆ ವಿಸಿಟ್ ಮಾಡಿ ನೋಡಿ


ಬೆಲೆ ಎಷ್ಟು :
ಸ್ವಿಫ್ಟ್ CNG ಭಾರತೀಯ ಮಾರುಕಟ್ಟೆಯಲ್ಲಿ VXI, VXI (O) ಮತ್ತು ZXI ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ. ಅದರ ಮೂಲ ರೂಪಾಂತರ VXI ನ ಎಕ್ಸ್ ಶೋರೂಂ ಬೆಲೆಯನ್ನು ರೂ 819500 ನಲ್ಲಿ ಇರಿಸಲಾಗಿದೆ. ಉನ್ನತ ರೂಪಾಂತರದ ಎಕ್ಸ್ ಶೋ ರೂಂ ಬೆಲೆ ರೂ 919500 ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.