Massive discounts on iPhone 12, iPhone 12 mini : ಆಪಲ್ ಐಫೋನ್ 13 ಸರಣಿಯನ್ನು ಹೆಚ್ಚು ಸಡಗರದಿಂದ ಬಿಡುಗಡೆ ಮಾಡಿದೆ. ಮುಂದಿನ ವಾರದಲ್ಲಿ ಆಪಲ್ ಐಫೋನ್ 13 ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ಆದಾಗ್ಯೂ, ಇತ್ತೀಚಿನ ಉತ್ತಮ ಐಫೋನ್ ಬಯಸುವ ಖರೀದಿದಾರರು ಐಫೋನ್ 12 ಸರಣಿಯು ಉತ್ತಮ ಆಯ್ಕೆಯಾಗಲಿದೆ. ಇ-ಕಾಮರ್ಸ್ ತಾಣಗಳಾದ ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಐಫೋನ್ 13 ಮಾರಾಟಕ್ಕೆ ಒಂದು ವಾರ ಮುಂಚಿತವಾಗಿ iPhone 12, iPhone 12 mini ಸಾಧನದಲ್ಲಿ ಭಾರೀ ರಿಯಾಯಿತಿಗಳನ್ನು ನೀಡುತ್ತಿವೆ.


COMMERCIAL BREAK
SCROLL TO CONTINUE READING

ಹೌದು, ಪ್ರಸ್ತುತ ಐಫೋನ್ 12 (iPhone 12) ಮತ್ತು ಐಫೋನ್ 12 ಮಿನಿ (iPhone 12 mini) ಭಾರೀ ರಿಯಾಯಿತಿಗಳಲ್ಲಿ ಲಭ್ಯವಿದೆ. ನೀವು ಐಫೋನ್ 12 ಅನ್ನು 30 ಸಾವಿರ ರೂಪಾಯಿ ಅಗ್ಗದ ದರದಲ್ಲಿ ಖರೀದಿಸಬಹುದು. ಈ ಫೋನ್ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯಂತ ಅಗ್ಗದ ದರದಲ್ಲಿ ಲಭ್ಯವಿದೆ. ಅಮೆಜಾನ್ (Amazon) ಮತ್ತು ಫ್ಲಿಪ್ ಕಾರ್ಟ್  iPhone 12, iPhone 12 mini  ಫೋನ್ಗಳ ಮೇಲೆ ಭಾರೀ ರಿಯಾಯಿರಿ ನೀಡುವುದರ ಜೊತೆಗೆ ಗಣನೀಯ ಬ್ಯಾಂಕ್ ರಿಯಾಯಿತಿಗಳನ್ನು ಮತ್ತು ಖರೀದಿದಾರರಿಗೆ ನೋ ಕಾಸ್ಟ್ EMI ಸೌಲಭ್ಯಗಳನ್ನು ಸಹ ನೀಡುತ್ತಿವೆ. ಎಕ್ಸ್‌ಚೇಂಜ್ ಆಫರ್ ಅನ್ನು ಬ್ಯಾಂಕ್ ರಿಯಾಯಿತಿಗಳೊಂದಿಗೆ ಸಂಯೋಜಿಸುವುದರಿಂದ ಕಡಿಮೆ ದರದಲ್ಲಿ ಐಫೋನ್ 12 ಫೋನ್ ಅನ್ನು ಮನೆಗೆ ತರಬಹುದು. 


ಇದನ್ನೂ ಓದಿ- Bumper Discount on Samsung Galaxy F22: ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್‌ನಲ್ಲಿ ಸಿಗುತ್ತಿದೆ ಭಾರೀ ರಿಯಾಯಿತಿ


ಐಫೋನ್ 12 (iPhone 12) ನಲ್ಲಿ ಲಭ್ಯವಿರುವ ಕೊಡುಗೆಗಳು ಮತ್ತು ರಿಯಾಯಿತಿಗಳು:
ಐಫೋನ್ 12 (iPhone 12) 128GB ರೂಪಾಂತರಕ್ಕೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ (Flipkart) ಎರಡರಲ್ಲೂ ₹ 68,999 ರಂತೆ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಫೋನಿನ ಬಿಡುಗಡೆ ಬೆಲೆ ₹ 84,900. ಫ್ಲಿಪ್‌ಕಾರ್ಟ್ ₹ 15,000 ವರೆಗಿನ ವಿನಿಮಯ ರಿಯಾಯಿತಿಯನು ನೀಡುತ್ತಿದೆ. ಅಮೆಜಾನ್‌ನಲ್ಲಿ ಕೂಡ, ಐಫೋನ್ 12 ಅನ್ನು ₹ 14,000 ಕ್ಕಿಂತ ಹೆಚ್ಚಿನ ವಿನಿಮಯ ರಿಯಾಯಿತಿಯೊಂದಿಗೆ ಖರೀದಿಸಬಹುದು. ರಿಯಾಯಿತಿಯ ನಂತರ, ಐಫೋನ್ 12 ರ 64 ಜಿಬಿ ರೂಪಾಂತರವು ₹  63,999 ಕ್ಕೆ ಮತ್ತು 128 ಜಿಬಿ ರೂಪಾಂತರವು ₹  68,999 ಕ್ಕೆ ಲಭ್ಯವಾಗಲಿದೆ.


ಐಫೋನ್ 12 ಮಿನಿ  (iPhone 12 mini) ಯಲ್ಲಿ ಲಭ್ಯವಿರುವ ಕೊಡುಗೆಗಳು ಮತ್ತು ರಿಯಾಯಿತಿಗಳು:
ಏತನ್ಮಧ್ಯೆ, iPhone 12 Mini ಯ 64GB ರೂಪಾಂತರವು ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ರೂ. 56,999 ಕ್ಕೆ ಮಾರಾಟವಾಗಿದೆ.  ಐಫೋನ್ 12 ಮಿನಿ 128 ಜಿಬಿ ಕೂಡ ರಿಯಾಯಿತಿ ದರದಲ್ಲಿ ₹ 61,999 ಕ್ಕೆ ಮಾರಾಟವಾಗುತ್ತಿದೆ. ಈ ಸಾಧನವನ್ನು ₹ 74,900 ಕ್ಕೆ ಬಿಡುಗಡೆ ಮಾಡಲಾಗಿದೆ. 


ಇದನ್ನೂ ಓದಿ- ಅದ್ಬುತ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರುತ್ತಿದೆ ಈ ಸ್ಮಾರ್ಟ್ ಪೋನ್, ಇತರ ವೈಶಿಷ್ಟ್ಯಗಳ ಮಾಹಿತಿ ಇಲ್ಲಿದೆ


ಐಫೋನ್ 12 ಮಿನಿ  64GB ರೂಪಾಂತರವನ್ನು₹ 56,999 ಕ್ಕೆ ಮತ್ತು 128GB ರೂಪಾಂತರದ ಫೋನ್ ಅನ್ನು ₹ 63,999 ಕ್ಕೆ ಖರೀದಿಸಬಹುದು. ಇದಕ್ಕಾಗಿ, ನೀವು ಫ್ಲಿಪ್‌ಕಾರ್ಟ್‌ನಲ್ಲಿ ₹ 15,000 ವರೆಗಿನ ವಿನಿಮಯ ಕೊಡುಗೆಯನ್ನು ಪಡೆಯಬಹುದು. ಹಾಗೆಯೇ, ನೀವು SBI ಕ್ರೆಡಿಟ್ ಕಾರ್ಡ್‌ನೊಂದಿಗೆ ಖರೀದಿಸಿದರೆ, ನಿಮಗೆ 10%ನಷ್ಟು ತ್ವರಿತ ರಿಯಾಯಿತಿ ಸಿಗುತ್ತದೆ. ಅಮೆಜಾನ್‌ನಲ್ಲಿ ₹ 14,200 ವರೆಗಿನ ವಿನಿಮಯ ಕೊಡುಗೆ ಕೂಡ ಇದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.