ಬೆಂಗಳೂರು : ಪ್ರತಿಯೊಬ್ಬರೂ Google ಅನ್ನು ಬಳಸುತ್ತಾರೆ. ಯಾವುದೇ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕು ಅಂದರೆ ಗೂಗಲ್ ಮೊರೆ ಹೋಗುತ್ತಾರೆ. ಸಾಮಾನ್ಯವಾಗಿ ನಾವು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಗೂಗಲ್ ಬಳಿ ಉತ್ತರ ಇರುತ್ತದೆ. ಇತ್ತೀಚೀನ ವರದಿಯ ಪ್ರಕಾರ ಪುರುಷರು ಗೂಗಲ್‌ನಲ್ಲಿ ಯಾವುದನ್ನು ಹೆಚ್ಚು ಹುಡುಕುತ್ತಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ.  


COMMERCIAL BREAK
SCROLL TO CONTINUE READING

ಪುರುಷರು ತಿಳಿದುಕೊಳ್ಳಲು ಬಯಸುವ ವಿಷಯಗಳು ಇವು : 
From-Mars.com ನ ವರದಿಯ ಪ್ರಕಾರ, ಪುರುಷರು Google ನಲ್ಲಿ ಅತಿ ಹೆಚ್ಚು ಹುಡುಕುವ ವಿಷಯವೆಂದರೆ ಲೈಂಗಿಕತೆ ಬಗ್ಗೆ. ವರದಿಯ ಪ್ರಕಾರ, ಪ್ರತಿ ವರ್ಷ ಸುಮಾರು 68 ಸಾವಿರ ಪುರುಷರು ತಾವು ದುರ್ಬಲರೇ  ಎನ್ನುವ ವಿಚಾರದ ಬಗ್ಗೆ ಸರ್ಚ್ ಮಾಡುತ್ತಾರೆ.  ಮಾತ್ರವಲ್ಲ  ಕ್ಷೌರ ಮಾಡುವುದರಿಂದ ಗಡ್ಡ ಕೂದಲು ಹೆಚ್ಚು ಬೆಳೆಯುತ್ತದೆಯೇ ಎನ್ನುವ ಬಗ್ಗೆಯೂ ತಿಳಿದುಕೊಳ್ಳಲು ಬಯಸುತ್ತಾರೆ. ಗಡ್ಡವನ್ನು ದಪ್ಪವಾಗಿಸುವ ಮಾರ್ಗಗಳು ಯಾವುವು ಎನ್ನುವುದನ್ನು ಕೂಡಾ ಹೆಚ್ಚಿನ ಹುಡುಗರು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ. 


ಇದನ್ನೂ ಓದಿ : Free ಯಾಗಿ ಸಿಗುತ್ತಿದೆ YouTube Premium ನ ಒಂದು ವರ್ಷದ ಚಂದಾದಾರಿಕೆ, ಈ ರೀತಿ ಲಾಭ ಪಡೆಯಿರಿ


ಟೋಪಿ ಧರಿಸುವುದರಿಂದ ಕೂದಲಿನ ಮೇಲೆ ಯಾವ ಪರಿಣಾಮ ?  ಪೋನಿಟೇಲ್ ಮಾಡುವುದು ಅಥವಾ ಟೋಪಿ ಧರಿಸುವುದು ಕೂದಲಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೇ ಎನ್ನುವುದನ್ನು ಕೂಡಾ  ಪುರುಷರು ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರೆ. ವರ್ಕೌಟ್ ದಿನಚರಿ, ಬಾಡಿ ಬಿಲ್ಡಿಂಗ್ ಹೇಗೆ ಮಾಡಬೇಕು ಮತ್ತು ಯಾವ ಪ್ರೊಟೀನ್ ಶೇಕ್ ಕುಡಿಯಬೇಕು ಈ ಎಲ್ಲಾ ಪ್ರಶ್ನೆಗಳಿಗೆ ಹುಡುಗರು ಉತ್ತರ ಕಂಡು ಕೊಳ್ಳುವುದು ಗೂಗಲ್ ಸರ್ಚ್ ನಲ್ಲಿ. 


ಸ್ತನ ಕ್ಯಾನ್ಸರ್ ಬಗ್ಗೆಯೂ  ನಡೆಸುತ್ತಾರೆ ಸರ್ಚ್ : 
ಈ ವರದಿಯಲ್ಲಿ ಮತ್ತೊಂದು ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ವರದಿಯ ಪ್ರಕಾರ, ಪುರುಷರ ಟಾಪ್ ಗೂಗಲ್ ಸರ್ಚ್‌ನಲ್ಲಿ ಸ್ತನ ಕ್ಯಾನ್ಸರ್ ಕೂಡ ಸೇರಿದೆ. ಸ್ತನ ಕ್ಯಾನ್ಸರ್ ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಆದರೆ ಹುಡುಗರಿಗೆ ಸ್ತನ ಕ್ಯಾನ್ಸರ್ ಬರುತ್ತದೆಯೇ?   ಒಂದು ವೇಳೆ ಹೌದು ಎಂದಾದಲ್ಲಿ ಇದು ಹೇಗೆ ಸಂಭವಿಸುತ್ತದೆ ಮತ್ತು ಶೇಕಡಾವಾರು ಸಂಭವನೀಯತೆ ಏನು ? ಎನ್ನುವ ಬಗ್ಗೆ ಹುಡುಗರು ಸರ್ಚ್ ಮಾಡುತ್ತಾರೆ. 


ಇದನ್ನೂ ಓದಿ : ಈ ಬೆಡ್ ಶೀಟ್ ಇದ್ದರೆ AC,Cooler ಅಗತ್ಯವೇ ಇಲ್ಲ.! ಹಾಸುತ್ತಿದ್ದಂತೆಯೇ ನೀಡುತ್ತದೆ ತಂಪಾದ ಅನುಭವ


ಹುಡುಗಿಯರ ಬಗ್ಗೆ ಈ ಸರ್ಚ್ ಮಾಡಿ :
ಹುಡುಗರು ಕೂಡ ಗೂಗಲ್‌ನಲ್ಲಿ ಹುಡುಗಿಯರ ಬಗ್ಗೆ ಅನೇಕ ವಿಷಯಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ.  ಈ ವರದಿಯ ಪ್ರಕಾರ, ಹುಡುಗರು ಹುಡುಗಿಯರನ್ನು ಹೇಗೆ ಮೆಚ್ಚಿಸಬಹುದು? ಹುಡುಗಿಯರು ಹೇಗೆ ಸಂತೋಷವಾಗಿರುತ್ತಾರೆ ಮತ್ತು  ಹುಡುಗಿಯರು ಏನನ್ನು ಇಷ್ಟಪಡುತ್ತಾರೆ ಮತ್ತು ಏನನ್ನು ಇಷ್ಟಪಡುವುದಿಲ್ಲ ಎನ್ನುವುದನ್ನು ಕೂಡಾ ಗೂಗಲ್‌ನಲ್ಲಿ ಹುಡುಕುತ್ತಾರೆ. ಇನ್ನು ಮದುವೆಯ ನಂತರ ಹುಡುಗಿಯರು ಏನು ಮಾಡುತ್ತಾರೆ ಎಂಬ ವಿಷಯದ ಬಗ್ಗೆಗೂಗಲ್ ನಲ್ಲಿ  ಹುಡುಗರ  ಸರ್ಚ್ ನಡೆಯುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.