ನವದೆಹಲಿ: ಭಾರತ-ಚೀನಾ ಗಡಿ ವಿವಾದದ ನಂತರ, ಅಂತಿಮವಾಗಿ ಮೈಕ್ರೋಮ್ಯಾಕ್ಸ್ ಮತ್ತೊಮ್ಮೆ ಭಾರತದಲ್ಲಿ ಮೊಬೈಲ್ ಫೋನ್‌ಗಳ ವ್ಯವಹಾರಕ್ಕೆ ಪ್ರವೇಶಿಸಿದೆ. ಇಂದು ವಿಶೇಷ ಕಾರ್ಯಕ್ರಮವೊಂದರಲ್ಲಿ ಮೈಕ್ರೋಮ್ಯಾಕ್ಸ್ ತನ್ನ In ಸರಣಿಯ ಹೊಸ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡಿತು. ಮೈಕ್ರೋಮ್ಯಾಕ್ಸ್ ಇನ್ ನೋಟ್ 1 (Micromax In Note 1) ಮತ್ತು ಮೈಕ್ರೋಮ್ಯಾಕ್ಸ್ ಇನ್ 1 ಬಿ (Micromax In 1B) ಹೆಸರಿನ ಈ ಎರಡೂ ಹೊಸ ಹ್ಯಾಂಡ್‌ಸೆಟ್‌ಗಳನ್ನು ಫ್ಲಿಪ್‌ಕಾರ್ಟ್‌ನಿಂದ ಖರೀದಿಸಬಹುದು.


COMMERCIAL BREAK
SCROLL TO CONTINUE READING

ಎರಡು ಹೊಸ ಸರಣಿಗಳನ್ನು ಲಾಂಚ್ ಮಾಡಲಾಗಿದೆ: 
ಮೈಕ್ರೋಮ್ಯಾಕ್ಸ್ ಇನ್ ನೋಟ್ 1 ಮತ್ತು ಮೈಕ್ರೋಮ್ಯಾಕ್ಸ್ ಇನ್ 1 ಬಿ ಅನ್ನು In ಸರಣಿಯ ಅಡಿಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಮೈಕ್ರೋಮ್ಯಾಕ್ಸ್ (Micromax) ಟ್ವೀಟ್ ಮಾಡಿದೆ. ನೋಟ್ 1ರಲ್ಲಿ ಮೈಕ್ರೋಮ್ಯಾಕ್ಸ್‌ನ ಎರಡು ರೂಪಾಂತರಗಳಿವೆ. ಮೊದಲನೆಯದು 4 ಜಿಬಿ RAM ಅನ್ನು ಹೊಂದಿದ್ದು, ಇದು 64 ಜಿಬಿ ಸಂಗ್ರಹವನ್ನು ಪಡೆಯುತ್ತದೆ. ಈ ಫೋನ್‌ನ ಬೆಲೆ 10,999 ರೂ. ಅಂತೆಯೇ ಎರಡನೇ ರೂಪಾಂತರವನ್ನು 4 ಜಿಬಿ RAM ಮತ್ತು 128 ಜಿಬಿ ಸಂಗ್ರಹದೊಂದಿಗೆ ಬಿಡುಗಡೆ ಮಾಡಲಾಗಿದೆ. ಈ ಹ್ಯಾಂಡ್‌ಸೆಟ್‌ನ ಬೆಲೆ 12,499 ರೂ.


#MadeInIndia:ಮೈಕ್ರೊಮ್ಯಾಕ್ಸ್ ಪುನರಾಗಮನಕ್ಕೆ ನಡೆದಿದೆ ಭರ್ಜರಿ ಸಿದ್ಧತೆ


ಕಂಪನಿಯು In ಸರಣಿಯಲ್ಲಿ ಮೈಕ್ರೋಮ್ಯಾಕ್ಸ್ ಇನ್ 1 ಬಿ ಅನ್ನು ಸಹ ಬಿಡುಗಡೆ ಮಾಡಿದೆ. ಇದು ಬಜೆಟ್ ಫೋನ್. 4 ಜಿಬಿ RAM  ಮತ್ತು 64 ಜಿಬಿ ಸ್ಟೋರೇಜ್ ಹೊಂದಿರುವ ಈ ಫೋನ್‌ನ ಬೆಲೆ 7,999 ರೂ. ಈ ಸರಣಿಯ ಎರಡನೇ ರೂಪಾಂತರವನ್ನು ನೀವು 6,999 ರೂ.ಗಳಿಗೆ ಖರೀದಿಸಬಹುದು. ಈ ಕೈಗೆಟುಕುವ ಮೊಬೈಲ್ 2 RAM ಮತ್ತು 32 ಜಿಬಿ ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.


Flipkart Big Billion Days: ಕೇವಲ 3 ದಿನಗಳಲ್ಲಿ ಕೋಟ್ಯಾಧಿಪತಿಗಳಾದ 70 ಮಂದಿ


ಕಂಪನಿಯು ಹೊಸ ಸಾಧನಗಳಲ್ಲಿ ರಿವರ್ಸ್ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ನೀಡಿದೆ ಮತ್ತು ಅವುಗಳಲ್ಲಿ ಸ್ಟಾಕ್ ಆಂಡ್ರಾಯ್ಡ್ ಎಕ್ಸ್‌ಪೀರಿಯೆನ್ಸ್ ಬಳಕೆದಾರರು ಯಾವುದೇ ಬ್ಲೋಟ್‌ವೇರ್ ಅಥವಾ ಮೊದಲೇ ಸ್ಥಾಪಿಸಲಾದ ಅಪ್ಲಿಕೇಶನ್‌ಗಳನ್ನು ಪಡೆಯುತ್ತಾರೆ. ಎರಡೂ ಸಾಧನಗಳನ್ನು ಫ್ಲಿಪ್‌ಕಾರ್ಟ್ (Flipkart) ಮತ್ತು ಮೈಕ್ರೋಮ್ಯಾಕ್ಸ್‌ನ ಅಧಿಕೃತ ಸೈಟ್‌ನಿಂದ ಖರೀದಿಸಲು ಸಾಧ್ಯವಾಗುತ್ತದೆ ಮತ್ತು ಅವುಗಳ ಮಾರಾಟವು ನವೆಂಬರ್ 24 ರಿಂದ ಪ್ರಾರಂಭವಾಗುತ್ತದೆ.