Mobile Customers:ಈ ಟೆಲಿಕಾಂ ಕಂಪನಿಯ ಗ್ರಾಹಕರಿಗೆ Big Shock
Mobile Postpaid Plans - ದೇಶದ ಒಟ್ಟು ಐದು ಸರ್ಕಲ್ ಗಳಲ್ಲಿ Vi ತನ್ನ ಟ್ಯಾರಿಫ್ ಪ್ಲಾನ್ (Mobile Postpaid Plan) ಗಳಲ್ಲಿ ಬದಲಾವಣೆ ಮಾಡಿದೆ. ಇವುಗಳಲ್ಲಿ ಚೆನ್ನೈ, ತಮಿಳುನಾಡು, ಕೊಲ್ಕತ್ತಾ, ಮಹಾರಾಷ್ಟ್ರ ಹಾಗೂ ಗೋವಾ ಸರ್ಕಲ್ ಗಳಲ್ಲಿ ನೂತನ ದರಗಳು ಜಾರಿಗೆ ಬಂದಿವೆ. ಪೂರ್ವ ಉತ್ತರ ಪ್ರದೇಶದ ಸರ್ಕಲ್ ನಲ್ಲಿ ಈ ಮೊದಲು ಹೊಸ ದರಗಳು ಜಾರಿಗೆ ಬಂದಿರುವುದು ಇಲ್ಲಿ ಉಲ್ಲೇಖನೀಯ.
ನವದೆಹಲಿ: Mobile Postpaid Plans - ದೇಶದಲ್ಲಿ ಈ ವರ್ಷದ ಆರ್ಥಿಕ ಆಯವ್ಯಯ ಪತ್ರ ಮಂಡನೆಯಾದ ಕೆಲವೇ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆದಾರರಿಗೊಂಡು ಶಾಕಿಂಗ್ ಸುದ್ದಿ ಪ್ರಕಟಗೊಂಡಿದೆ. ದೇಶಾದ್ಯಂತ ಇರುವ ಟೆಲಿಕಾಂ ಕಂಪನಿಗಳು ತನ್ನ ಟ್ಯಾರಿಫ್ ಗಳನ್ನು ಹೆಚ್ಚಿಸುತ್ತಿವೆ. ಇದೆ ಸರಣಿಯಲ್ಲಿ ಇದೀಗ Vi ತನ್ನ ಪೋಸ್ಟ್ ಪೇಡ್ (PostpaidConnection) ಪ್ಲ್ಯಾನ್ಗಳಲ್ಲಿ ಬದಲಾವಣೆ ಮಾಡಿದೆ.
ದುಬಾರಿಯಾದ ಫ್ಯಾಮಿಲಿ ಪೋಸ್ಟ್ ಪೇಡ್ ಪ್ಲಾನ್
ಟೆಕ್ ಸೈಟ್ telecomtalk ನಲ್ಲಿ ಪ್ರಕಟಗೊಂಡ ಮಾಹಿತಿ ಪ್ರಕಾರ Vi ತನ್ನ ಫ್ಯಾಮಿಲಿ ಪೋಸ್ಟ್ ಪೇಡ್ ಪ್ಲಾನ್ ದರಗಳನ್ನು ಹೆಚ್ಚಿಸಿದೆ. ಮಾಹಿತಿ ಪ್ರಕಾರ 598 ಹಾಗೂ 699 ಪ್ಲಾನ್ (Recharge Plan) ಗಳ ದರ ಹೆಚ್ಚಾಗಿವೆ. ಈ ಎರಡೂ ಪ್ಲಾನ್ (Vi Recharge) ಗಳಿಗೆ ಈಗ ಕ್ರಮವಾಗಿ ಗ್ರಾಹಕರು ರೂ.649 ಹಾಗೂ ರೂ.799 ಹಣ ಪಾವತಿಸಬೇಕು.
ಈ ಐದು ಸರ್ಕಲ್ ಗಳಲ್ಲಿ ನೂತನ ದರಗಳು ಜಾರಿಗೆ ಬಂದಿವೆ
ವರದಿಗಳ ಪ್ರಕಾರ Vi ಒಟ್ಟು ಐದು ಸರ್ಕಲ್ ಗಳಲ್ಲಿ ನೂತನ ದರ ಜಾರಿಗೊಳಿಸಿದೆ. ಚೆನ್ನೈ, ತಮಿಳುನಾಡು, ಕೊಲ್ಕತ್ತಾ, ಮಹಾರಾಷ್ಟ್ರ ಹಾಗೂ ಗೋವಾ ಸರ್ಕಲ್ ಗಳಲ್ಲಿ ನೂತನ ದರ ಜಾರಿಗೊಳಿಸಿದೆ.
ಇದನ್ನು ಓದಿ-ಮೊಬೈಲ್ ಬಳಕೆದಾರರಿಗೆ Reliance Jio ಶಾಕ್..! ಇನ್ನು ಚಾಲ್ತಿಯಲ್ಲಿರುವುದಿಲ್ಲ 4 ಅಗ್ಗದ ರಿಚಾರ್ಜ್ ಪ್ಲಾನ್..!
ಕೆಳಗಿನ ಐದು ಪ್ಲಾನ್ ಗಳು ಹೊಸ ಪ್ಲಾನ್ ಗಳಾಗಿವೆ
ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಚೆನ್ನೈ, ತಮಿಳುನಾಡು, ಕೊಲ್ಕತ್ತಾ, ಮಹಾರಾಷ್ಟ್ರ ಹಾಗೂ ಗೋವಾ ಸರ್ಕಲ್ಗಳಲ್ಲಿ ನೂತನ ಐದು ಪ್ಲಾನ್ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಈ ಸರ್ಕಲ್ ನಲ್ಲಿರುವ ಬಳಕೆದಾರರು ಇನ್ಮುಂದೆ 649, 799, 999, 948 ಮತ್ತು 1348 ರೂ. ಪ್ಲಾನ್ಗಳಲ್ಲಿ ಯಾವುದಾದರೊಂದು ಪ್ಲಾನ್ ಆಯ್ಕೆ ಮಾಡಬೇಕು.
ಇದನ್ನು ಓದಿ- ತನ್ನ ಗ್ರಾಹಕರಿಗಾಗಿ ಅಗ್ಗದ ದರದಲ್ಲಿ ಹೊಸ ಪ್ಲಾನ್ ಲಾಂಚ್ ಮಾಡಿದ BSNL
ಉಳಿದೆಲ್ಲ ಸರ್ಕಲ್ ಗಳಲ್ಲಿ ಹಳೆ ದರಗಳು ಮುಂದುವರೆಯಲಿವೆ
ಈ ಐದು ಸರ್ಕಲ್ ಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಸದ್ಯ ಹೊಸ ಸ್ಲ್ಯಾಬ್ (Vi New Postpaid Slab) ಜಾರಿಗೊಳಿಸಲಾಗಿಲ್ಲ. ಉಳಿದೆಲ್ಲ ಸರ್ಕಲ್ ಗಳ ಬಳಕೆದಾರರಿಗೆ ಇನ್ನೂ 598, 749, 899 ಹಾಗೂ 999 ರೂ.ಗಳ ಪ್ಲಾನ್ ಗಳನ್ನು ಬಳಸಬಹುದು.
ಇದನ್ನು ಓದಿ- ಹೊಸ ರೀಚಾರ್ಜ್ ಯೋಜನೆ ಪ್ರಾರಂಭಿಸಿದ BSNL, ಸಿಗಲಿದೆ ಈ ಎಲ್ಲಾ ಪ್ರಯೋಜನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.