World's Smallest 4G Smartphone - ಶೀಘ್ರದಲ್ಲೇ ವಿಶ್ವದ (World's Smallest 4G Smartphone) ಅತಿ ಚಿಕ್ಕ 4 ಜಿ ಸ್ಮಾರ್ಟ್‌ಫೋನ್ ಆಗಿ Money Mist ಜಾಗತಿಕ ಮಾರುಕಟ್ಟೆಯನ್ನು ಪ್ರವೇಶಿಸಬಹುದು. ಈ ಫೋನ್ ತುಂಬಾ ಚಿಕ್ಕದಾಗಿದೆ ಮತ್ತು ಬಳಕೆದಾರರ ಅಂಗೈಯಲ್ಲಿ ಸುಲಭವಾಗಿ ಹೊಂದಿಕೊಳ್ಳಲಿದೆ. ಇದು ನೋಡಲು  ಐಫೋನ್ 4 ರಂತೆ ಕಾಣಿಸುತ್ತದೆ.  GSMArena ವರದಿಯ ಪ್ರಕಾರ, ಕಂಪನಿಯು ಈ ಫೋನ್‌ನ ವಿನ್ಯಾಸವನ್ನು  iPhone 4 ರಂತೆ ಇಟ್ಟುಕೊಂಡಿದೆ. ಸ್ಟೀವ್ ಜಾಬ್ಸ್‌ಗೆ ಗೌರವ ಸಲ್ಲಿಸುವುದು ಇದರ ಹಿಂದಿನ ಉದ್ದೇಶ ಎಂದು ಕಂಪನಿ ಹೇಳಿದೆ.


COMMERCIAL BREAK
SCROLL TO CONTINUE READING

GSMArena ವರದಿಯ ಪ್ರಕಾರ, Money Mist ಸಂಪೂರ್ಣ ಕ್ರಿಯಾತ್ಮಕ 4 ಜಿ ಸ್ಮಾರ್ಟ್ಫೋನ್ ಆಗಿದೆ ಮತ್ತು ಇದು ಆಂಡ್ರಾಯ್ಡ್ ಪೈ ಓಎಸ್  (Android Pie OS) ಸಂಚಾಲಿತವಾಗಿರಲಿದೆ. ಸ್ಮಾರ್ಟ್‌ಫೋನ್ (Smartphone) ಮಾರಾಟ ಇನ್ನೂ ಪ್ರಾರಂಭವಾಗಿಲ್ಲ, ಆದರೆ ಇದು ಕ್ರೌಡ್‌ಫಂಡಿಂಗ್ ವೆಬ್‌ಸೈಟ್‌ಗಳಲ್ಲಿ $ 99 ಬೆಲೆಯೊಂದಿಗೆ ಲಭ್ಯವಿದೆ. ಮುಕ್ತ ಮಾರುಕಟ್ಟೆಯಲ್ಲಿ, ಕಂಪನಿಯು ಇದನ್ನು $150 (ಸುಮಾರು 11,100 ರೂ.) ಬೆಲೆಯೊಂದಿಗೆ ಬಿಡುಗಡೆ ಮಾಡಬಹುದು.


Money Mist ವೈಶಿಷ್ಟ್ಯತೆ ಮತ್ತು ವಿಶೇಷತೆಗಳು (Money Mist Features)
ಈ ಫೋನ್‌ನ 89.5 ಮಿಮೀ ಉದ್ದ, 45.5 ಮಿಮೀ ಅಗಲ ಮತ್ತು 11.5 ಮಿಮೀ ದಪ್ಪಾಗಿದೆ. ಈ ಫೋನ್ ಸಾಕಷ್ಟು ಚಿಕ್ಕದಾಗಿರುವ ಕಾರಣ ಹತ್ತಿರ ಇಟ್ಟುಕೊಳ್ಳುವುದು ಕೂಡ ತುಂಬಾ ಸುಲಭವಾಗಿದೆ. ಆದರೆ, ಫೋನ್‌ನ ಸಣ್ಣ ಪರದೆಯ ಕಾರಣ, ಅದರಲ್ಲಿರುವ ಮೇನ್ಯೂಗಳಲ್ಲಿ ನ್ಯಾವಿಗೇಟ್ ಮಾಡುವುದು ಸ್ವಲ್ಪ ಕ್ಲಿಷ್ಟವಾಗಿದೆ. ಸಣ್ಣ ಪರದೆಯ ಕಾರಣ, ವೆಬ್‌ಸೈಟ್‌ಗಳನ್ನು ಓದುವುದು ಅಥವಾ ಅದರಲ್ಲಿ ಇತರ ಆನ್‌ಲೈನ್ ಕಾರ್ಯಗಳನ್ನು ಮಾಡುವುದು ಸಹ ಕಷ್ಟ.


ಇದನ್ನೂ ಓದಿ- Realme ಬಿಡುಗಡೆ ಮಾಡಿದೆ 2000 ಕ್ಕೂ ಕಡಿಮೆ ಬೆಲೆಯ ಫೋನ್ , ವೈಶಿಷ್ಟ್ಯ ಏನಿದೆ ತಿಳಿಯಿರಿ


ಫೋನ್‌ನಲ್ಲಿ, ಕಂಪನಿಯು 48 ಇಂಚಿನ 854 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ 3 ಇಂಚಿನ LCD ಡಿಸ್ಪ್ಲೇ ನೀಡುತ್ತಿದ್ದು, ಇದು 16: 9 ರ ಅನುಪಾತದೊಂದಿಗೆ ಬರುತ್ತದೆ. ಫೋನ್ 3 ಜಿಬಿ RAM ಮತ್ತು 32 ಜಿಬಿ ಆಂತರಿಕ ಮೆಮೊರಿಯೊಂದಿಗೆ ಬರುತ್ತದೆ. ಪ್ರೊಸೆಸರ್ ರೂಪದಲ್ಲಿ ಕಂಪನಿಯು ಫೋನ್ ನಲ್ಲಿ ಏಳು ವರ್ಷಗಳಷ್ಟು ಹಳೆಯ ಮೀಡಿಯಾ ಟೆಕ್ ಎಂಟಿ 6735 ಚಿಪ್‌ಸೆಟ್ ಅನ್ನು ನೀಡುತ್ತಿದೆ.


ಇದನ್ನೂ ಓದಿ-Android ಬಳಕೆದಾರರೇ ಗಮನಿಸಿ! ಫೇಸ್‌ಬುಕ್‌ನ ಲಾಗಿನ್ ಪಾಸ್‌ವರ್ಡ್ ಕದಿಯುತ್ತಿರುವ ಅಪ್ಲಿಕೇಶನ್‌ಗಳ ಬಗ್ಗೆ ಇರಲಿ ಎಚ್ಚರ


ಫೋನ್‌ನಲ್ಲಿ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ನೀಡಲಾಗಿಲ್ಲ. ಓಎಸ್ ಬಗ್ಗೆ ಹೇಳುವುದಾದರೆ, ಈ ಫೋನ್ ಆಂಡ್ರಾಯ್ಡ್ 9 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋಟೋಗ್ರಫಿಗಾಗಿ, ಈ ಫೋನ್ 13 ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮೆರಾ ಅಳವಡಿಸಲಾಗಿದೆ. ಇದೇ ವೇಳೆ ಕಂಪನಿಯು ಈ ಫೋನ್‌ನಲ್ಲಿ ವಿಜಿಎ ​​ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಿದೆ. ಫೋನ್‌ಗೆ ಪವರ್ ತುಂಬಲು ಇದು 1250mAh ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿಗಾಗಿ  ಫೋನ್ ಡ್ಯುಯಲ್ ಮೈಕ್ರೋ ಸಿಮ್ ಸ್ಲಾಟ್, ವೈ-ಫೈ, 4 ಜಿ, ಬ್ಲೂಟೂತ್ 4.0 ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಅನ್ನು ಹೊಂದಿದೆ.


ಇದನ್ನೂ ಓದಿ- WhatsApp: ಈ ಸಿಂಪಲ್ ಟಿಪ್ಸ್ ಅನುಸರಿಸಿ, ನಿಮ್ಮ ಕೆಲಸವನ್ನು ಇನ್ನಷ್ಟು ಸುಲಭಗೊಳಿಸಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.