ಭಾರತದಲ್ಲಿ ಬಿಡುಗಡೆಯಾಗಿದೆ Samsung Galaxy A22: ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ

ಭಾರತದಲ್ಲಿ Galaxy A22 ಫೋನ್ ಬಿಡುಗಡೆ ಭಾರತಕ್ಕೂ ಮೊದಲು, ಯುರೋಪಿನಲ್ಲಿ ಬಿಡುಗಡೆ  ಈ ಫೋನಿನ ಬೆಲೆ ವೈಶಿಷ್ಟ್ಯ ತಿಳಿಯಿರಿ  

Written by - Ranjitha R K | Last Updated : Jul 1, 2021, 10:28 AM IST
  • ಭಾರತದಲ್ಲಿ Galaxy A22 ಫೋನ್ ಬಿಡುಗಡೆ
  • ಭಾರತಕ್ಕೂ ಮೊದಲು, ಯುರೋಪಿನಲ್ಲಿ ಬಿಡುಗಡೆ
  • ಈ ಫೋನಿನ ಬೆಲೆ ವೈಶಿಷ್ಟ್ಯ ತಿಳಿಯಿರಿ
ಭಾರತದಲ್ಲಿ ಬಿಡುಗಡೆಯಾಗಿದೆ Samsung Galaxy A22: ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ title=
ಭಾರತದಲ್ಲಿ Galaxy A22 ಫೋನ್ ಬಿಡುಗಡೆ (photo india.com)

ನವದೆಹಲಿ : ಸ್ಯಾಮ್‌ಸಂಗ್ (samsung) ಭಾರತದಲ್ಲಿ Galaxy A22 ಫೋನ್ ಅನ್ನು ಬಿಡುಗಡೆ ಮಾಡಿದ್ದು, ತನ್ನ ಎ ಸರಣಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ವಿಸ್ತರಿಸಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ, ಬಳಕೆದಾರರು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು ವಾಟರ್‌ಡ್ರಾಪ್ ಸ್ಟೈಲ್ ನಾಚ್ ಡಿಸ್ಪ್ಲೇಯೊಂದಿಗೆ 90Hz ಅಮೋಲೆಡ್ ಡಿಸ್ಪ್ಲೇ ಸೌಲಭ್ಯವನ್ನು ಪಡೆಯುತ್ತಾರೆ. ಈ ಫೋನ್ ಗೆ  ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ನೀಡಲಾಗಿದೆ. ಭಾರತಕ್ಕೂ ಮೊದಲು, ಈ ಸ್ಮಾರ್ಟ್‌ಫೋನ್ ಅನ್ನು ಇತ್ತೀಚೆಗೆ ಯುರೋಪಿನಲ್ಲಿ ಬಿಡುಗಡೆ ಮಾಡಲಾಯಿತು. ಇದು Galaxy A21ನ ಅಪ್ಗ್ರೇಡ್  ಆವೃತ್ತಿಯಾಗಿದೆ.  

Samsung Galaxy A22: ಬೆಲೆ ಮತ್ತು ಲಭ್ಯತೆ :
Samsung Galaxy A22 ಅನ್ನು ಭಾರತದಲ್ಲಿ ಒಂದೇ ಸ್ಟೋರೇಜ್ ವೆರಿಯೆಂಟ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಬೆಲೆ 18,499 ರೂಪಾಯಿ.  ಇದರಲ್ಲಿ 6 GB RAMನೊಂದಿಗೆ  128 ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ. ಈ ಸ್ಮಾರ್ಟ್ಫೋನ್ ( smartphone) ಕಪ್ಪು ಮತ್ತು ಮಿಂಟ್ ಕಲರ್ ಗಳಲ್ಲಿ ಲಭ್ಯವಿದೆ.  ಈ ಸ್ಮಾರ್ಟ್‌ಫೋನ್ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲಭ್ಯವಾಗಿದೆ. ಅಲ್ಲದೆ, ರಿಟೇಲ್ ಸ್ಟೋರ್ ಗಳಲ್ಲಿಯೂ ಖರೀದಿಸಬಹುದು. 

ಇದನ್ನೂ ಓದಿ  : Google New Features: Message App ನಲ್ಲಿ ಹೊಸ ವೈಶಿಷ್ಟ್ಯ ಘೋಷಿಸಿದ Google, 24 ಗಂಟೆಗಳ ಬಳಿಕ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿದೆ OTP ಒಳಗೊಂಡ ಸಂದೇಶ

Samsung Galaxy A22: ವೈಶಿಷ್ಟ್ಯಗಳು :
Samsung Galaxy A22 ಆಂಡ್ರಾಯ್ಡ್ 11 ಓಎಸ್ ಅನ್ನು ಆಧರಿಸಿದೆ ಮತ್ತು 6.4-ಇಂಚಿನ ಎಚ್‌ಡಿ + ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದರ ಸ್ಕ್ರೀನ್  ರೆಸಲ್ಯೂಶನ್ 720 × 1,600 ಪಿಕ್ಸೆಲ್‌ಗಳು ಮತ್ತು 90Hz ರಿಫ್ರೆಶ್ ರೇಟ್ ಅನ್ನು ನೀಡಲಾಗಿದೆ. ಫೋನ್‌ನಲ್ಲಿನ ಪವರ್ ಬ್ಯಾಕಪ್‌ಗಾಗಿ,  5,000mAh ಬ್ಯಾಟರಿ ನೀಡಲಾಗಿದೆ. ಅದು ವೇಗದ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ.  ಒಂಡು ಸಲ ಚಾರ್ಜ್‌ ಮಾಡಿದರೆ 38 ಗಂಟೆಗಳ ಟಾಕ್‌ಟೈಮ್ (talk time) ನೀಡುವ ಸಾಮರ್ಥ್ಯವನ್ನು ಇದು ಹೊಂದಿದೆ ಎನ್ನುತ್ತದೆ ಕಂಪನಿ . 

Samsung Galaxy A22 ಸ್ಮಾರ್ಟ್ಫೋನ್ ಅನ್ನು octa-core ಪ್ರೊಸೆಸರ್ನಲ್ಲಿ ಪರಿಚಯಿಸಲಾಗಿದೆ ಮತ್ತು ಫೋಟೋಗ್ರಾಫಿಗಾಗಿ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದರ ಪ್ರೈಮರಿ ಸೆನ್ಸಾರ್  48 ಎಂಪಿ ಆಗಿದ್ದರೆ, ಇದು 8 ಎಂಪಿ ಅಲ್ಟ್ರಾ ವೈಡ್ ಆಂಗಲ್ ಶೂಟರ್, 2 ಎಂಪಿ ಮ್ಯಾಕ್ರೋ ಶೂಟರ್ ಮತ್ತು 2 ಎಂಪಿ ಡೆಪ್ತ್ ಸೆನ್ಸಾರ್ ಹೊಂದಿದೆ. ವಿಡಿಯೋ ಕಾಲಿಂಗ್ ಮತ್ತು ಸೆಲ್ಫಿ ಸೌಲಭ್ಯಕ್ಕಾಗಿ ಈ ಸ್ಮಾರ್ಟ್‌ಫೋನ್ 13 ಎಂಪಿ ಫ್ರಂಟ್ ಕ್ಯಾಮೆರಾವನ್ನು (camera) ಹೊಂದಿದೆ. ಫೋನ್‌ನಲ್ಲಿ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ನೀಡಲಾಗಿದೆ. 

ಇದನ್ನೂ ಓದಿ  :World Social Media Day 2021: ವಿಶ್ವದ ಮೊಟ್ಟಮೊದಲ ಸಾಮಾಜಿಕ ಮಾಧ್ಯಮ ಯಾವುದು ನಿಮಗೆ ಗೊತ್ತಾ? ಬನ್ನಿ ಈ ರೀತಿಯ ಸ್ವಾರಸ್ಯಕರ ಸಂಗತಿಗಳನ್ನು ತಿಳಿದುಕೊಳ್ಳೋಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News