How to Get Back the Money Transfer to Wrong Account: ಆನ್ಲೈನ್ ಬ್ಯಾಂಕಿಂಗ್ ಜನರ ಬಹುತೇಕ ಬ್ಯಾಂಕಿಂಗ್ ಕೆಲಸಗಳನ್ನು ಬಹಳ ಸುಲಭಗೊಳಿಸಿದೆ. ಆದರೆ, ಕೆಲವೊಮ್ಮೆ ಸ್ವಲ್ಪವೇ ಸ್ವಲ್ಪ ಅಜಾಗರೂಕರಾದರೂ ಕೂಡ ಖಾತೆಯಿಂದ ಹಣ ಬೇರೆ ಖಾತೆಗೆ ವರ್ಗಾವಣೆ ಆಗುತ್ತದೆ. ಇದು ಚಿಂತೆಯ ವಿಷಯವಾದರೂ ಕೂಡ, ನೀವು ಚಿಂತಿಸುವ ಅಗತ್ಯವಿಲ್ಲ. ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಎಸ್‌ಬಿ‌ಐ ಇಂತಹ ಸಮಸ್ಯೆಗೆ ಪರಿಹಾರವನ್ನು ನೀಡಿದೆ.


COMMERCIAL BREAK
SCROLL TO CONTINUE READING

ಹೌದು, ಒಂದು ಬ್ಯಾಂಕ್ ಖಾತೆಯಿಂದ ಮತ್ತೊಂದು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾವಣೆ ಮಾಡುವಾಗ ಕೆಲವೊಮ್ಮೆ ಮಿಸ್ ಆಗಿ ಅದು ಬೇರೆ ಖಾತೆಗೆ ವರ್ಗಾವಣೆ ಆಗಬಹುದು.  ಆದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿ‌ಐ) ನೀಡಿರುವ ಸಲಹೆಯನ್ನು ಅನುಸರಿಸುವ ಮೂಲಕ ನೀವು ನಿಮ್ಮ ಹಣವನ್ನು ಸುಲಭವಾಗಿ ಮರಳಿ ಪಡೆಯಬಹುದಾಗಿದೆ. 


ಇದನ್ನೂ ಓದಿ- WhatsApp: ಬಳಕೆದಾರರಿಗಾಗಿ ಏಳು ಅದ್ಭುತ ವೈಶಿಷ್ಟ್ಯಗಳನ್ನು ಪರಿಚಯಿಸಿದ ವಾಟ್ಸಾಪ್


ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಗ್ರಾಹಕರೊಬ್ಬರ ಸಮಸ್ಯೆಗೆ ಪ್ರತಿಕ್ರಿಯಿಸಿರುವ ಎಸ್‌ಬಿ‌ಐ ತಪ್ಪು ಬ್ಯಾಂಕ್ ಖಾತೆಗೆ ಹಣ ಕಳುಹಿಸಿದ್ದರೆ ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬ ಸಲಹೆಯನ್ನು ನೀಡಿದೆ. 


ಸಾಮಾನ್ಯ ಎಲ್ಇಡಿ vs ಸ್ಮಾರ್ಟ್ ಎಲ್ಇಡಿ? ಈ ಎರಡು ಬಲ್ಬ್‌ಗಳಲ್ಲಿ ನಿಮ್ಮ ಮನೆಗೆ ಯಾವುದು ಉತ್ತಮ


[[{"fid":"315999","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ವಾಸ್ತವವಾಗಿ, ಗ್ರಾಹಕರಾದ ರವಿ ಅಗರ್ವಾಲ್ ಎಂಬುವವರು ಎಸ್‌ಬಿ‌ಐನ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಟ್ಯಾಗ್ ಮಾಡಿ ಈ ರೀತಿ ಬರೆದಿದ್ದಾರೆ: 
“ಆತ್ಮೀಯ @TheOfficialSBI ನಾನು ತಪ್ಪಾಗಿ ತಪ್ಪು ಖಾತೆ ಸಂಖ್ಯೆಗೆ ಹಣವನ್ನು ಪಾವತಿ ಮಾಡಿದ್ದೇನೆ. ಸಹಾಯವಾಣಿಯವರು ಹೇಳಿದ ಎಲ್ಲಾ ವಿವರಗಳನ್ನು ನನ್ನ ಶಾಖೆಗೆ ನೀಡಿದ್ದೇನೆ. ಇನ್ನೂ, ನನ್ನ ಶಾಖೆಯು ರಿವರ್ಸಲ್ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ದಯವಿಟ್ಟು ಸಹಾಯ ಮಾಡಿ” ಎಂದು  ಟ್ವೀಟ್  ಮೂಲಕ ಮನವಿ ಮಾಡಿದ್ದಾರೆ. 


ಗ್ರಾಹಕರ ಈ ಸಮಸ್ಯೆಗೆ ಪ್ರತಿಕ್ರಿಯಿಸಿರುವ ಎಸ್‌ಬಿ‌ಐ, ಇಂತಹ ಸಂದರ್ಭದಲ್ಲಿ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದು ಉಲ್ಲೇಖಿಸಿದೆ. ಎಸ್‌ಬಿ‌ಐ ಪ್ರಕಾರ, ನೀವು ತಪ್ಪಾದ ಖಾತೆಗೆ ಹಣ ವರ್ಗಾವಣೆ ಮಾಡಿದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿದರೆ ನಿಮ್ಮ ಹಣವನ್ನು ಮರಳಿ ಪಡೆಯಬಹುದು... 
* ಹಣ ವರ್ಗಾವಣೆ ಮಾಡುವಾಗ ಗ್ರಾಹಕರು ಫಲಾನುಭವಿಯ ತಪ್ಪು ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿದ್ದರೆ, ಅವನು ಅಥವಾ ಅವಳು ಹೋಮ್ ಶಾಖೆಯನ್ನು ಸಂಪರ್ಕಿಸಬೇಕಾಗುತ್ತದೆ. 
* ಗ್ರಾಹಕರು ಈ ಕುರಿತಂತೆ ದೂರು ನೀಡಿದ ಬಳಿಕ ಹೋಮ್ ಶಾಖೆಯು ಯಾವುದೇ ಹಣದ ಹೊಣೆಗಾರಿಕೆಗಳಿಲ್ಲದೆ ಇತರ ಬ್ಯಾಂಕ್‌ನೊಂದಿಗೆ ಅನುಸರಣಾ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆ.
* ಆದಾಗ್ಯೂ, ಶಾಖೆಯಲ್ಲಿ ಸಮಸ್ಯೆಯನ್ನು ಪರಿಹರಿಸದಿದ್ದರೆ, ಗ್ರಾಹಕರು https://crcf.sbi.co.in/ccfunder ವೈಯಕ್ತಿಕ ವಿಭಾಗ/ ವೈಯಕ್ತಿಕ ಗ್ರಾಹಕ - ಜನರಲ್ ಬ್ಯಾಂಕಿಂಗ್/ ಶಾಖೆಗೆ ಸಂಬಂಧಿಸಿದ/ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂಬಲ್ಲಿ ದೂರು ಸಲ್ಲಿಸಬಹುದು. 
* ಇದಲ್ಲದೆ, ನೀವು ನಿಮ್ಮ ಸಮಸ್ಯೆಯ ವಿವರಗಳನ್ನು ಕಾಮೆಂಟ್ ಬಾಕ್ಸ್‌ನಲ್ಲಿ ನಮೂದಿಸುವಂತೆ ಎಸ್‌ಬಿ‌ಐ ಸೂಚಿಸಿದೆ. 
* ಸಮಸ್ಯೆ ಬಗ್ಗೆ ಎಸ್‌ಬಿ‌ಐ ಗಮನಕ್ಕೆ ತಂದ ನಂತರ "ಸಂಬಂಧಿತ ತಂಡವು ಅದನ್ನು ಪರಿಶೀಲಿಸುತ್ತದೆ" ಎಂದು ಬ್ಯಾಂಕ್ ಮತ್ತಷ್ಟು ಉಲ್ಲೇಖಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.