ಸಾಮಾನ್ಯ ಎಲ್ಇಡಿ vs ಸ್ಮಾರ್ಟ್ ಎಲ್ಇಡಿ? ಈ ಎರಡು ಬಲ್ಬ್‌ಗಳಲ್ಲಿ ನಿಮ್ಮ ಮನೆಗೆ ಯಾವುದು ಉತ್ತಮ

LED Bulb Option: ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಲಿ ಸಾಮಾನ್ಯ ಬಲ್ಬ್‌ಗಳಿಗಿಂತ ಎಲ್ಇಡಿ ಬಲ್ಬ್ ಅಳವಡಿಸುವುದು ಲಾಭದಾಯಕ ಎಂದು ನಿಮಗೆ ತಿಳಿದೇ ಇದೆ. ಆದರೆ, ಸಾಮಾನ್ಯ ಎಲ್ಇಡಿ ಅಥವಾ ಸ್ಮಾರ್ಟ್ ಎಲ್ಇಡಿ ಬಲ್ಬ್‌ಗಳಲ್ಲಿ ನಿಮ್ಮ ಮನೆಗೆ ಯಾವ ಬಲ್ಬ್ ಅತ್ಯುತ್ತಮ ಆಯ್ಕೆಯಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? 

Written by - Yashaswini V | Last Updated : Jun 27, 2023, 07:48 AM IST
  • ಈ ಬಲ್ಬ್‌ಗಳಲ್ಲಿ ಇಂದಿಗೂ ಕೂಡ ಜನರು ತಮ್ಮ ಮನೆಯಲ್ಲಿ ಸರಳವಾದ ಎಲ್ಇಡಿ ಬಲ್ಬ್‌ಗಳನ್ನೇ ಹೆಚ್ಚಾಗಿ ಬಳಸುತ್ತಾರೆ.
  • ಆದರೆ, ಸಾಮಾನ್ಯ ಎಲ್ಇಡಿ ಅಥವಾ ಸ್ಮಾರ್ಟ್ ಎಲ್ಇಡಿ ಬಲ್ಬ್‌ಗಳಲ್ಲಿ ನಿಮ್ಮ ಮನೆಗೆ ಯಾವ ಬಲ್ಬ್ ಅತ್ಯುತ್ತಮ ಆಯ್ಕೆಯಾಗಿರಬಹುದು ಎಂದು ನಿಮಗೆ ತಿಳಿದಿದೆಯೇ?
  • ನೀವಿನ್ನೂ ಸರಳ ಎಲ್ಇಡಿ ಬಲ್ಬ್‌ಗಳನ್ನು ಬಳಸುತ್ತಿದ್ದರೆ, ಸರಳ ಎಲ್ಇಡಿ ಮತ್ತು ಸ್ಮಾರ್ಟ್ ಎಲ್ಇಡಿ ಬಲ್ಬ್‌ಗಳ ನಡುವಿನ ವ್ಯತ್ಯಾಸವನ್ನು ತಿಳಿದಿಲ್ಲದಿದ್ದರೆ ಈ ಲೇಖನದಲ್ಲಿ ಇದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
ಸಾಮಾನ್ಯ ಎಲ್ಇಡಿ vs ಸ್ಮಾರ್ಟ್ ಎಲ್ಇಡಿ? ಈ ಎರಡು ಬಲ್ಬ್‌ಗಳಲ್ಲಿ ನಿಮ್ಮ ಮನೆಗೆ ಯಾವುದು ಉತ್ತಮ  title=
Normal LED vs Smart LED Bulb

Normal LED vs Smart LED: ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಎಲ್‌ಇಡಿ ಬಲ್ಬ್‌ಗಳು ಅತ್ಯುತ್ತಮ ಆಯ್ಕೆ ಎಂಬುದರಲ್ಲಿ ಅನುಮಾನವೇ ಇಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಬಗೆಯ ಎಲ್‌ಇಡಿ ಬಲ್ಬ್‌ಗಳು ಲಭ್ಯವಿವೆ. ಅದರಲ್ಲಿ ಸರಳ ಎಲ್‌ಇಡಿ ಬಲ್ಬ್‌ಗಳು ಹಾಗೂ ಸ್ಮಾರ್ಟ್  ಎಲ್‌ಇಡಿ ಬಲ್ಬ್‌ಗಳು ಹೆಚ್ಚು ಜನಪ್ರಿಯವಾಗಿವೆ. ಎಲ್ಇಡಿ ಬಲ್ಬ್‌ಗಳು ನಿಮ್ಮ ಮನೆಯನ್ನು ಪ್ರಕಾಶಮಾನವಾಗಿಡಲು ಮಾತ್ರವಲ್ಲದೆ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.

ಸಾಮಾನ್ಯವಾಗಿ ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಲಿ ಸಾಮಾನ್ಯ ಬಲ್ಬ್‌ಗಳಿಗಿಂತ ಎಲ್ಇಡಿ ಬಲ್ಬ್ ಅಳವಡಿಸುವುದು ಲಾಭದಾಯಕ ಎಂದು ನಿಮಗೆ ತಿಳಿದೇ ಇದೆ.  ಹಾಗಾಗಿಯೇ, ವಿದ್ಯುತ್ ಉಳಿತಾಯದ ದೃಷ್ಟಿಯಿಂದ ಹೆಚ್ಚು ಜನಪ್ರಿಯವಾಗುತ್ತಿವೆ. ಈ ಬಲ್ಬ್‌ಗಳಲ್ಲಿ  ಇಂದಿಗೂ ಕೂಡ ಜನರು ತಮ್ಮ ಮನೆಯಲ್ಲಿ ಸರಳವಾದ ಎಲ್ಇಡಿ ಬಲ್ಬ್‌ಗಳನ್ನೇ ಹೆಚ್ಚಾಗಿ ಬಳಸುತ್ತಾರೆ. ಆದರೆ, ಸಾಮಾನ್ಯ ಎಲ್ಇಡಿ ಅಥವಾ ಸ್ಮಾರ್ಟ್ ಎಲ್ಇಡಿ ಬಲ್ಬ್‌ಗಳಲ್ಲಿ ನಿಮ್ಮ ಮನೆಗೆ ಯಾವ ಬಲ್ಬ್ ಅತ್ಯುತ್ತಮ ಆಯ್ಕೆಯಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? 

ನೀವಿನ್ನೂ ಸರಳ ಎಲ್ಇಡಿ ಬಲ್ಬ್‌ಗಳನ್ನು ಬಳಸುತ್ತಿದ್ದರೆ, ಸರಳ ಎಲ್ಇಡಿ ಮತ್ತು ಸ್ಮಾರ್ಟ್ ಎಲ್ಇಡಿ ಬಲ್ಬ್‌ಗಳ ನಡುವಿನ ವ್ಯತ್ಯಾಸವನ್ನು ತಿಳಿದಿಲ್ಲದಿದ್ದರೆ ಈ ಲೇಖನದಲ್ಲಿ ಇದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. 

ಇದನ್ನೂ ಓದಿ- Pink WhatsApp: ಬಳಕೆದಾರರಲ್ಲಿ ಭೀತಿ ಸೃಷ್ಟಿಸಿದ ಪಿಂಕ್ ವಾಟ್ಸಾಪ್!

ಬೆಳಕಿನ ತಂತ್ರಜ್ಞಾನ ಸುಧಾರಿಸಿದಂತೆ ಎಲ್ಇಡಿ ಬಲ್ಬ್‌ಗಳ ಹೊಸ ರೂಪಾಂತರಗಳನ್ನು ರಚಿಸಲಾಗಿದೆ. ಅವುಗಳಲ್ಲಿ ಸ್ಮಾರ್ಟ್ ಬಲ್ಬ್ ಕೂಡ ಒಂದು. .ಇದು ನೋಡಲು ಇತರ ಯಾವುದೇ ಬೆಳಕಿನ ಬಲ್ಬ್‌ನಂತೆ ಕಾಣಿಸಬಹುದು, ಆದರೆ ಸ್ಮಾರ್ಟ್ ಬಲ್ಬ್ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ

ಸಾಮಾನ್ಯ ಎಲ್ಇಡಿ vs ಸ್ಮಾರ್ಟ್ ಎಲ್ಇಡಿ: 
ಹೆಸರೇ ಸೂಚಿಸುವಂತೆ ಸಾಮಾನ್ಯ ಎಲ್‌ಇಡಿ ಬಲ್ಬ್‌ಗಳಿಗಿಂತ ಸ್ಮಾರ್ಟ್ ಬಲ್ಬ್‌ಗಳು ಹೆಚ್ಚಿನ ಸಾಮರ್ಥ್ಯದ ಬಲ್ಬ್‌ಗಳು. ಸ್ಮಾರ್ಟ್ ಬಲ್ಬ್ ಎನ್ನುವುದು ಇಂಟರ್ನೆಟ್-ಸಾಮರ್ಥ್ಯದ ಎಲ್ಇಡಿ ಬಲ್ಬ್ ಆಗಿದ್ದು ಬಳಕೆದಾರರು ಅದನ್ನು ಸ್ಮಾರ್ಟ್‌ಫೋನ್ ಅಪ್ಲಿಕೇಶನ್, ಸ್ಮಾರ್ಟ್-ಹೋಮ್ ಅಸಿಸ್ಟೆಂಟ್-ಉದಾಹರಣೆಗೆ Google Assistant, Amazon Alexa, ಅಥವಾ Apple Home-ಅಥವಾ ಇತರ ಸ್ಮಾರ್ಟ್ ಗ್ಯಾಜೆಟ್‌ಗಳೊಂದಿಗೆ ಸಿಂಕ್ ಮಾಡುವ ಮೂಲಕ ಅದನ್ನು ಸುಲಭವಾಗಿ ನಿಯಂತ್ರಿಸಬಹುದು. 

ಸಾಂಪ್ರದಾಯಿಕ ಲೈಟಿಂಗ್ ಫಿಕ್ಚರ್‌ಗಳಿಗಿಂತ ಭಿನ್ನವಾಗಿ, ಸ್ಮಾರ್ಟ್ ಬಲ್ಬ್‌ಗಳು ನಿಮ್ಮ ಮನೆಯ ಜೀವನವನ್ನು ಅನುಕೂಲಕರ ಮತ್ತು ಆರಾಮದಾಯಕವಾಗಿಸಲು ಹೆಚ್ಚಿನ ಸಾಮರ್ಥ್ಯಗಳನ್ನು ನೀಡುತ್ತವೆ. ಹಾಗಾಗಿಯೇ ಮನೆ ಅಥವಾ ಕಛೇರಿಗಳಲ್ಲಿ ಹೆಚ್ಚಿನ ವಿದ್ಯುತ್ ಉಳಿತಾಯವನ್ನು ನೀವು ಬಯಸಿದರೆ ಸಾಮಾನ್ಯ ಎಲ್ಇಡಿ ಬಲ್ಬ್‌ಗಳಿಗಿಂತ ಸ್ಮಾರ್ಟ್ ಎಲ್ಇಡಿ ಬಲ್ಬ್‌ಗಳನ್ನು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. 

ಇದನ್ನೂ ಓದಿ- ಟೈಟಾನಿಕ್ ಅವಶೇಷಗಳೆಡೆಗೆ ಪ್ರಯಾಣ: ದುರ್ಘಟನೆಯ ಅನಾವರಣ

ಸ್ಮಾರ್ಟ್ ಎಲ್ಇಡಿ ಬಲ್ಬ್‌ಗಳ ವೈಶಿಷ್ಟ್ಯಗಳೇನು? 
* ರಿಮೋಟ್ ಕಂಟ್ರೋಲ್: 

ಒಮ್ಮೆ ನೀವು ನಿಮ್ಮ ಸ್ಮಾರ್ಟ್ ಬಲ್ಬ್ ಅನ್ನು ಹೊಂದಿಸಿದರೆ , ನೀವು ಹಾಸಿಗೆಯಲ್ಲಿ ಮಲಗಿದ್ದರೂ, ತಡರಾತ್ರಿಯಲ್ಲಿ ನಿಮ್ಮ ಮೇಜಿನಿಂದ ಕೆಲಸ ಮಾಡುತ್ತಿದ್ದರೂ ಅಥವಾ ಬೇರೆಡೆ ಇದ್ದರೂ ಕೂಡ ನೀವು ದೀಪಗಳನ್ನು ನಿಯಂತ್ರಿಸುವ ಅನುಕೂಲತೆ ಮತ್ತು ನಮ್ಯತೆಯನ್ನು ಆನಂದಿಸಬಹುದು. ಅರ್ಥಾತ್ ನೀವು ಲೈಟ್ ಆಫ್ ಮಾಡಲು ಇಲ್ಲವೇ ಆನ್ ಮಾದ್ಲೌ ದೈಹಿಕವಾಗಿ ಸನಿಹದಲ್ಲಿಯೇ ಇರಬೇಕು ಎಂದೇನಿಲ್ಲ. ಎಷ್ಟೋ ಬಾರಿ ನಾವು ಊರಿಗೆ ಹೋಗುವಾಗ, ಇಲ್ಲವೇ ಮನೆಯಿಂದ ಹೊರಡುವಾಗ ಲೈಟ್ ಆಫ್ ಮಾಡಲು ಮರೆಯುತ್ತೇವೆ. ಅಂತಹ ಸಂದರ್ಭದಲ್ಲಿ ಇದು ಹೆಚ್ಚು ಉಪಯುಕ್ತವಾಗಿದೆ. 

* ಗುಂಪು ನಿಯಂತ್ರಣ: 
ಸಾಮಾನ್ಯ ಎಲ್ಇಡಿ ಬಲ್ಬ್‌ಗಳನ್ನು ಬಳಸುವಾಗ ನೀವು ಬೇರೆ ಕೋಣೆಯಲ್ಲಿ ಲೈಟ್ ಆನ್ ಇದ್ದರೆ ಅದನ್ನು ಆಫ್ ಮಾದ್ಲೌ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಹೋಗದೆ ಬೇರೆ ದಾರಿಯೇ ಇಲ್ಲ. ಆದರೆ ಸ್ಮಾರ್ಟ್ ಬಲ್ಬ್‌ಗಳನ್ನು ಬಲಸುವಾಗ ನಿಮಗೆ ಈ ತೊಂದರೆ ಇರುವುದಿಲ್ಲ. ಸ್ಮಾರ್ಟ್ ಎಲ್ಇಡಿ ಬಲ್ಬ್ ಬಳಸುವಾಗ ಅಪ್ಲಿಕೇಶನ್‌ನಲ್ಲಿ ಗುಂಪು ನಿಯಂತ್ರಣ ಕಾರ್ಯವನ್ನು ಬಳಸಲು ಅವರು ನಿಮಗೆ ಅನುಕೂಲಕರ ಆಯ್ಕೆಯನ್ನು ನೀಡುತ್ತಾರೆ. ಇದರ ಸಹಾಯದಿಂದ  ನೀವು ಒಂದೇ  ಒಂದು ಟ್ಯಾಪ್‌ನೊಂದಿಗೆ ಎಲ್ಲವನ್ನೂ ಅಥವಾ ನಿರ್ದಿಷ್ಟ ಗುಂಪಿನ ಬಲ್ಬ್‌ಗಳನ್ನು ಏಕಕಾಲದಲ್ಲಿ ಆನ್/ಆಫ್ ಮಾಡಲು ಸಹಾಯಕವಾಗಿದೆ. 

* ಬಲ್ಬ್ ತಾಪಮಾನ, ಬಣ್ಣ ಮತ್ತು ಹೊಳಪನ್ನು ಬದಲಾಯಿಸುವ ಸಾಮರ್ಥ್ಯ:
ನೀವು ಕೋಣೆಯ ಸೌಂದರ್ಯವನ್ನು ಹೆಚ್ಚಿಸಲು ಬಯಸಿದಾಗ, ಡಿಮ್ಮರ್ ಸ್ವಿಚ್‌ಗಳು ಮತ್ತು ಡಿಮ್ಮಬಲ್ ಟ್ರಾನ್ಸ್‌ಫಾರ್ಮರ್‌ಗಳ ಜೊತೆಗೆ ಡಿಮ್ಮಬಲ್ LED ಬಲ್ಬ್‌ಗಳನ್ನು ಖರೀದಿಸುವ ಅಗತ್ಯವನ್ನು ಸ್ಮಾರ್ಟ್ ಬಲ್ಬ್‌ಗಳು ನಿವಾರಿಸುತ್ತದೆ. ಅಪ್ಲಿಕೇಶನ್‌ನ ಮೂಲಕ, ನಿಮ್ಮ ಮನಸ್ಥಿತಿ ಅಥವಾ ಪರಿಸ್ಥಿತಿಗೆ ಸೂಕ್ತವಾದ ವಾತಾವರಣವನ್ನು ರಚಿಸಲು ನೀವು ಸ್ಮಾರ್ಟ್ ಬಲ್ಬ್‌ನಲ್ಲಿ ಪ್ರಖರತೆ, ಬಣ್ಣ ಮತ್ತು ತಾಪಮಾನವನ್ನು ಬದಲಾಯಿಸಬಹುದು. 

*ಸ್ಮಾರ್ಟ್ ಹೋಮ್: 
ಸ್ಮಾರ್ಟ್ ಎಲ್ಇಡಿ ಬಲ್ಬ್‌ಗಳ ಮತ್ತೊಂದು ಪ್ರಮುಖ ವೈಶಿಷ್ಟ್ಯವೆಂದರೆ, ನೀವು ನಿಮ್ಮ ದೈನಂದಿನ ದಿನಚರಿಯನ್ನು ಅವಲಂಬಿಸಿ ನಿಮ್ಮ  ಮನೆಯ ಲೈಟ್ ಗಳನ್ನು ಆನ್ ಮತ್ತು ಆಫ್ ಮಾಡಲು ನೀವು ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅಥವಾ ನಿಮ್ಮ ಸ್ಮಾರ್ಟ್ ಹೋಮ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ದಿನಚರಿ ಮತ್ತು ಸ್ವಯಂಚಾಲಿತತೆಯನ್ನು ಹೊಂದಿಸಬಹುದಾಗಿದ್ದು, ಸ್ಮಾರ್ಟ್ ಎಲ್ಇಡಿ ಬಲ್ಬ್‌ಗಳಲ್ಲಿ ಇನ್ನೂ ಹಲವು ವೈಶಿಷ್ಟ್ಯಗಳು ಲಭ್ಯವಾಗಲಿವೆ.  ಹಾಗಾಗಿಯೇ, ನಾರ್ಮಲ್ ಎಲ್ಇಡಿ ಬಲ್ಬ್‌ಗಳಿಗಿಂತ ಸ್ಮಾರ್ಟ್ ಎಲ್ಇಡಿ ಬಲ್ಬ್ ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News