Moon Latest News - ಚಂದ್ರ ನಿಧಾನವಾಗಿ ಭೂಮಿಯನ್ನು (Earth) ಬಿಟ್ಟು ದೂರ ಹೋಗುತ್ತಿದ್ದಾನೆ. ಆದರೆ ಆತನ  ನಿರ್ಗಮನದ ಗತಿ ತುಂಬಾ ನಿಧಾನವಾಗಿದ್ದು, ನಮಗೆ ಇದು ಇನ್ನೂ ತಿಳಿದಿಲ್ಲ. ಚಂದ್ರ (Moon) ಸಂಪೂರ್ಣವಾಗಿ ಕಣ್ಮರೆಯಾಗುವ ಸಮಯ ಬರುತ್ತದೆ ಎಂದು ಅಧ್ಯಯನವೊಂದು ಹಕ್ಕು ಸಾಧಿಸಿದೆ.


COMMERCIAL BREAK
SCROLL TO CONTINUE READING

ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ಚಂದ್ರ ನಿರ್ಮಾಣಗೊಂಡಿದ್ದಾನೆ
ದಿ ಅಟ್ಲಾಂಟಿಕ್ ನ ವರದಿಯ ಪ್ರಕಾರ, ವಿಜ್ಞಾನಿಗಳು 'ಚಂದ್ರ ಹಿಮ್ಮೆಟ್ಟುವಿಕೆ'ಯನ್ನು ಹಲವು ಮೂಲಗಳೊಂದಿಗೆ ಸಂಯೋಜಿಸುವ ಲೇಸರ್ ಕಿರಣಗಳನ್ನು ಬಳಸಿ ಅಳತೆ ಮಾಡಿದ್ದಾರೆ. ಇದರಲ್ಲಿ ಚಂದ್ರನು ನಿಧಾನವಾಗಿ ಭೂಮಿಯಿಂದ ಪ್ರತಿವರ್ಷ ದೂರ ಸರಿಯುತ್ತಿರುವುದು ಕಂಡುಬಂದಿದೆ. ವಿಜ್ಞಾನಿಗಳ ಪ್ರಕಾರ, ಚಂದ್ರನು ಸುಮಾರು 4.5 ಬಿಲಿಯನ್ ವರ್ಷಗಳ ಹಿಂದೆ ರೂಪಗೊಂಡಿದ್ದಾನೆ. ಆ ಸಮಯದಲ್ಲಿ ಇದು ಭೂಮಿಯ ಸುತ್ತ ತೇಲುತ್ತಿರುವ ಕಲ್ಲಿನ ಅವಶೇಷಗಳಿಂದ ಮಾಡಲ್ಪಟ್ಟಿದೆ ಎನ್ನಲಾಗಿತ್ತು. ಆಗ ಚಂದ್ರನು ಇಂದಿನದಕ್ಕಿಂತ ಭೂಮಿಗೆ ಹತ್ತಿರವಾಗಿದ್ದನು ಎನ್ನುತ್ತಾರೆ ವಿಜ್ಞಾನಿಗಳು. ಆಗ ಚಂದ್ರ ಸುಮಾರು 10 ಪಟ್ಟು ಹೆಚ್ಚು ವೇಗದಲ್ಲಿ ಭೂಮಿಯ ಸುತ್ತ ಸುತ್ತುತ್ತಿದ್ದನು ಎನ್ನಲಾಗಿದೆ. ಈ ಕಾರಣದಿಂದಾಗಿ, ಆಗ ಹಗಲು ಕೂಡ ಕೇವಲ 4 ಗಂಟೆಗಳು ಮತ್ತು ಉಳಿದ ಸಮಯ ರಾತ್ರಿಯಾಗಿರುತ್ತಿತ್ತು.


ಭೂಮಿಯ ಗುರುತ್ವಾಕರ್ಷಣ ಸಂಪರ್ಕದಲ್ಲಿ ಬಂದ ಚಂದ್ರ
ವಿಜ್ಞಾನಿಗಳ ಪ್ರಕಾರ, ಯಾವ ಅವಶೇಷಗಳಿಂದ ಚಂದ್ರನ ನಿರ್ಮಾಣವಾಗಿದೆಯೋ ಆ ಅವಶೇಷ ಭೂಮಿ ಹಾಗೂ ಒಂದು ರಹಸ್ಯ ಬೃಹತ್ ಗಾತ್ರದ ವಸ್ತುವಿನ ಡಿಕ್ಕಿಯಿಂದ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಆಗ ಚಂದ್ರ ತುಂಬಾ ಬಿಸಿಯಾಗಿದ್ದ ಹಾಗೂ ರಾತ್ರಿಯ ಹೊತ್ತು ಕೆಂಪು ಗ್ರಹದ ಹಾಗೆ ಹೊಳೆಯುತ್ತಿದ್ದ. ಭೂಮಿಯ ಗುರುತ್ವಾಕರ್ಷಣೆಯ ಕಾರಣ ಆತ ಭೂಮಿಯ ಪ್ರಭಾವಕ್ಕೆ ಒಳಗಾದ ಹಾಗೂ ಭೂಮಿಯ ಸುತ್ತ ಸುತ್ತಲು ಆರಂಭಿಸಿದ ಎನ್ನಲಾಗಿದೆ.


ಆದರೆ, ಚಂದ್ರನನ್ನು ಹಲವು ಗ್ರಹಗಳು ತನ್ನತ್ತ ಸೆಳೆಯುತ್ತಿವೆ
ವರದಿಯ ಪ್ರಕಾರ, ಪ್ರಸ್ತುತ ಇತರ ಗ್ರಹಗಳು ಚಂದ್ರನನ್ನು ತನ್ನತ್ತ  ಎಳೆಯುತ್ತಿವೆ ಎನ್ನಲಾಗಿದೆ. ಅವುಗಳ ಗುರುತ್ವಾಕರ್ಷಣೆಯ (Gravity) ಬಲವು ಭೂಮಿಗಿಂತ ಹೆಚ್ಚಾಗಿದೆ. ಆದ್ದರಿಂದ ಚಂದ್ರನು ವರ್ಷಕ್ಕೆ ಸುಮಾರು ಎಂಟು ಇಂಚುಗಳಷ್ಟು ದೂರಕ್ಕೆ ಸರಿಯುತ್ತಿದ್ದಾನೆ. ವಿಜ್ಞಾನಿಗಳ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಚಂದ್ರನ ಹಿಮ್ಮೆಟ್ಟುವಿಕೆಯ ದರ ಬದಲಾಗಿದೆ. ಈ ಕಾರಣದಿಂದಾಗಿ ಚಂದ್ರನಲ್ಲಿ ಅನೇಕ ಖಗೋಳ ಘಟನೆಗಳು ಸಂಭವಿಸಿವೆ. ಉದಾಹರಣೆಗೆ, ಚಂದ್ರನ ಮೇಲೆ ಉಲ್ಕಾಶಿಲೆ ಸ್ಫೋಟದ ಘಟನೆಗಳಿವೆ. ಈ ಕಾರಣದಿಂದಾಗಿ, ಭೂಮಿಯ ಹವಾಮಾನ ಚಕ್ರವೂ ಬದಲಾಗುತ್ತಿದೆ.


ಇದನ್ನೂ ಓದಿ-Harvest Moon : ಆಗಸದಲ್ಲಿಕಾಣಿಸಲಿದೆ ಚಂದ್ರನ ಅದ್ಭುತ ನೋಟ , ಇನ್ನೂ ಎರಡು ದಿನಗಳವರೆಗೆ ಕಾಣಬಹುದು ಈ ಅಮೋಘ ದೃಶ್ಯ


ನಿಧಾನಕ್ಕೆ ಭೂಮಿಯಿಂದ ಹಿಂದಕ್ಕೆ ಸರಿಯುತ್ತಿದ್ದಾನೆ ಚಂದ್ರ
ಭೂಮಿಯನ್ನು ಸುತ್ತುತ್ತಿರುವ ಚಂದ್ರನ ವೇಗ ಇದೀಗ ನಿಧಾನವಾಗಿದೆ ಎಂದು ವರದಿ ಹೇಳಿದೆ. ಈ ಕಾರಣದಿಂದಾಗಿ ಭೂಮಿಯ ಮೇಲಿನ ದಿನಗಳ ಅವಧಿ ಹೆಚ್ಚುತ್ತಿದೆ. ಇದರ ನಂತರ, ಚಂದ್ರನು ಭೂಮಿಯಿಂದ ಕ್ರಮೇಣ ದೂರ ಸರಿಯುತ್ತಿದ್ದಂತೆ, ಭೂಮಿಯ ಮೇಲಿನ ದಿನಗಳ ಉದ್ದ ಹೆಚ್ಚಾಗಲಿದೆ. ವಿಜ್ಞಾನಿಗಳು ಹೇಳುವಂತೆ ಸುಮಾರು 600 ದಶಲಕ್ಷ ವರ್ಷಗಳ ನಂತರ, ಚಂದ್ರನು ತುಂಬಾ ದೂರದಲ್ಲಿದ್ದು ಅದು ನಕ್ಷತ್ರವಾಗುತ್ತದೆ ಮತ್ತು ಅದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.


ಇದನ್ನೂ ಓದಿ-Monday Remedies: ಜಾತಕದಲ್ಲಿ ಅಶುಭ ಚಂದ್ರ ಒತ್ತಡ ಹಾಗೂ ಕಾಯಿಲೆಯ ಕಾರಕ, ಸೋಮವಾರ ಈ ಉಪಾಯಗಳನ್ನು ಅನುಸರಿಸಿ


ಮರೆಯಾಗಲಿದ್ದಾನೆ ಚಂದ್ರ
ಇಂತಹ ಪರಿಸ್ಥಿತಿಯಲ್ಲಿ ಭೂಮಿಯ ಮೇಲೆ ಸೂರ್ಯ ಹಾಗೂ ಚಂದ್ರ ಗ್ರಹಣಗಳಂತಹ ಘಟನೆಗಳು ನಿಂತುಹೋಗಲಿವೆ. ಚಂದ್ರ ನಿಧಾನಕ್ಕೆ ಸೂರ್ಯನ ಹತ್ತಿರಕ್ಕೆ ಜಾರುವ ಕಾರಣ ಸೂರ್ಯನ ಶಾಖದಿಂದ ಕರಗಲಿದ್ದಾನೆ ಮತ್ತು ಕೆಲ ಶತಕೋಟಿ ವರ್ಷಗಳ ನಂತರ ಚಂದ್ರ ವಿಶ್ವದಿಂದಲೇ ಕಣ್ಮರೆಯಾಗಲಿದ್ದಾನೆ.


ಇದನ್ನೂ ಓದಿ-Viral Video: ಭೂಮಿಗಪ್ಪಳಿಸಿದ Asteroid, ಬಾಹ್ಯಾಕಾಶ ತಲುಪಿದ ಡೈನೋಸಾರ್ಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.