ಬೆಂಗಳೂರು : Moto E13 ಸ್ಮಾರ್ಟ್ಫೋನ್ ಭಾರತದಲ್ಲಿ ಬಿಡುಗಡೆಯಾಗಿದೆ. ಶಕ್ತಿಯುತ ಪ್ರೊಸೆಸರ್ ನೊಂದಿಗೆ ದೀರ್ಘಕಾಲೀನ ಬ್ಯಾಟರಿಯೊಂದಿಗೆ ಈ ಫೋನ್ ಬರುತ್ತಿದೆ. ಫೋನ್ 4GB RAM ಅನ್ನು ಹೊಂದಿದೆ. ಮೈಕ್ರೋ SD ಕಾರ್ಡ್ ಸಹಾಯದಿಂದ  ಸ್ಟೋರೇಜ್ ಅನ್ನು ಹೆಚ್ಚಿಸುವ ಆಯ್ಕೆಯನ್ನು ಕೂಡಾ ನೀಡಲಾಗಿದೆ. ಕಂಪನಿಯು ಪ್ರೀಮಿಯಂ ವಿನ್ಯಾಸದೊಂದಿಗೆ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ. ಇದು HD+ IPS LCD ಡಿಸ್ಪ್ಲೇಯನ್ನು  ಹೊಂದಿದೆ. 


COMMERCIAL BREAK
SCROLL TO CONTINUE READING

Moto E13 ವೈಶಿಷ್ಟ್ಯ : 
1.5000mAh ಬ್ಯಾಟರಿ
2. ಆಂಡ್ರಾಯ್ಡ್ 12 ಓಎಸ್
3. 10W ಚಾರ್ಜಿಂಗ್ ಬೆಂಬಲ
4. UNISOC T606 ಪ್ರೊಸೆಸರ್
5. 6.5 ಇಂಚಿನ ಡಿಸ್ಪ್ಲೇ


ಮೊಟೊರೊಲಾ ಸ್ಮಾರ್ಟ್‌ಫೋನ್ 6.5 ಇಂಚಿನ HD+IPS LCD ಡಿಸ್ಪ್ಲೇಯನ್ನು ಹೊಂದಿದೆ. ಫೋನ್ ಸೊಗಸಾದ ಮತ್ತು ಪ್ರೀಮಿಯಂ ವಿನ್ಯಾಸದೊಂದಿಗೆ ಬರುತ್ತದೆ. ಇದು Android13 ಆಧಾರಿತ Go ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ.


ಇದನ್ನೂ ಓದಿ : ಅದ್ಭುತ ವೈಶಿಷ್ಟ್ಯಗಳೊಂದಿಗೆ ಇಂದು ಸಂಜೆ ಮಾರುಕಟ್ಟೆಗೆ ಕಾಲಿಡುತ್ತಿದೆ OnePlus Cloud 11


ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಕಾರ್ಯಕ್ಷಮತೆಗಾಗಿ, UNISOC T606 ಪ್ರೊಸೆಸರ್ ಅನ್ನು ನೀಡಲಾಗಿದೆ. ಈ Motorola ಫೋನ್ 64GB  ಸ್ಟೋರೇಜ್ ಅನ್ನು ಹೊಂದಿದ್ದು, ಮೈಕ್ರೋ SD ಕಾರ್ಡ್ ಸಹಾಯದಿಂದ 1TBಗೆ ಹೆಚ್ಚಿಸಬಹುದು. 


10W ಚಾರ್ಜಿಂಗ್ ಸಪೋರ್ಟ್ ನೊಂದಿಗೆ  ಬರುವ ಈ ಫೋನ್ 5000mAh ಬ್ಯಾಟರಿಯನ್ನು ಹೊಂದಿದೆ. ಚಾರ್ಜ್ ಮಾಡಲು ಫೋನ್‌ನಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ನೀಡಲಾಗಿದೆ. ಇದು 8.5 ಮಿಮೀ ದಪ್ಪ ಮತ್ತು 180 ಗ್ರಾಂ ತೂಕವಿದೆ. ಸಂಪರ್ಕಕ್ಕಾಗಿ, ಫೋನ್ ಡ್ಯುಯಲ್ ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ 5.0 ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ. 


ಇದನ್ನೂ ಓದಿ : ಜಿಯೋ ಬಳಕೆದಾರರಿಗೆ ಬಂಪರ್: ಈ ಯೋಜನೆಗಳಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಫುಲ್ ಫ್ರೀ


ಕ್ಯಾಮರಾ ಸೆಟಪ್ ಹೇಗಿದೆ? :
ಫೋನ್ 13MP AI  ರಿಯರ್  ಕ್ಯಾಮೆರಾವನ್ನು ಹೊಂದಿದೆ. ಹ್ಯಾಂಡ್‌ಸೆಟ್‌ನಲ್ಲಿ ಸೆಲ್ಫಿ ಮತ್ತು ವೀಡಿಯೊ ಕಾಲ್ ಗಾಗಿ 5MP ಫ್ರಂಟ್ ಕ್ಯಾಮೆರಾವನ್ನು  ಒದಗಿಸಲಾಗಿದೆ. 


ಫೋನ್ ಬೆಲೆ : 
Moto E13 ಅನ್ನು ಅರೋರಾ ಗ್ರೀನ್, ಕಾಸ್ಮಿಕ್ ಬ್ಲಾಕ್ ಮತ್ತು ಕ್ರೀಮ್ ವೈಟ್  ಹೀಗೆ  ಮೂರು ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಫೆಬ್ರವರಿ 15 ರಿಂದ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಮಾರಾಟಕ್ಕೆ ಲಭ್ಯವಿರುತ್ತದೆ. ಕಂಪನಿಯು ಇದನ್ನು  6,999 ರೂಪಾಯಿ ಆರಂಭಿಕ ಬೆಲೆಯಲ್ಲಿ ಪರಿಚಯಿಸಿದೆ. ಇದು ಫೋನ್‌ನ 2GB RAM ರೂಪಾಂತರದ ಬೆಲೆಯಾಗಿದೆ. 4GB RAM ಹೊಂದಿರುವ  ಫೋನ್ ಗೆ 7,999  ರೂ. ಪಾವತಿಸಬೇಕಾಗುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.