iPhone at Cheapest Price: ನೀವು ಫ್ಲಿಪ್ಕಾರ್ಟ್, ಅಮೆಜಾನ್ನಂತಹ ಆನ್ಲೈನ್ ಶಾಪಿಂಗ್ ಆಪ್ ಗಳ ಮೂಲಕ 128GB ಮಾದರಿಯ iPhone 12 ಖರೀದಿಸಲು ಬಯಸಿದರೆ ₹ 58000 ಪಾವತಿಸಬೇಕಾಗುತ್ತದೆ. ಆದರೆ, ಇದೇ ಮಾದರಿಯ ಐಫೋನ್ ಅನ್ನು ಕೇವಲ ₹ 10000ಗೆ ಖರೀದಿಸಬಹುದು. ಅದು ಹೇಗೆ ಸಾಧ್ಯ? ಎಲ್ಲಿಂದ ಇದನ್ನು ಖರೀದಿಸಬಹುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಕೇವಲ 10000 ರೂಪಾಯಿಗಳಲ್ಲಿ ಐಫೋನ್ 12 ಅನ್ನು ಎಲ್ಲಿ ಖರೀದಿಸಬಹುದು?
ಫೇಸ್ಬುಕ್ ಮಾರ್ಕೆಟ್ಪ್ಲೇಸ್ನಲ್ಲಿ ತುಂಬಾ ಅಗ್ಗದ ದರದಲ್ಲಿ ಐಫೋನ್ಗಳನ್ನು ಖರೀದಿಸಬಹುದಾಗಿದೆ. ವಾಸ್ತವವಾಗಿ, ಫೇಸ್ಬುಕ್ ಮಾರ್ಕೆಟ್ಪ್ಲೇಸ್ನಲ್ಲಿ ಐಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವ ಹಲವು ಮಾರಾಟಗಾರರಿದ್ದಾರೆ. ಇವುಗಳಲ್ಲಿ ಐಫೋನ್ 12 ಕೂಡ ಸೇರಿದೆ. ಮಾರುಕಟ್ಟೆಯಲ್ಲಿ ಇನ್ನೂ ಕೂಡ ಅತಿ ಹೆಚ್ಚು ಬೇಡಿಕೆ ಹೊಂದಿರುವ ಐಫೋನ್ 12 ಅನ್ನು ಖರೀದಿಸಲು ಬಯಸಿದರೆ ಮಾರುಕಟ್ಟೆಯ ಬೆಲೆಗಿಂತ ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಇಲ್ಲಿ ಐಫೋನ್ ಖರೀದಿಸಬಹುದು ಎಂಬ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆದರೆ, ಈ ಐಫೋನ್ಗಳು ನಿಜವಾಗಿಯೂ ಅಸಲಿ ಫೋನ್ಗಳೇ?
ಇದನ್ನೂ ಓದಿ- FASTag ರಿಚಾರ್ಜ್ ಮಾಡುವಾಗ ಎಚ್ಚರ! ಇಲ್ಲವೇ, ಪಂಗನಾಮ ಗ್ಯಾರಂಟಿ
ವಾಸ್ತವವಾಗಿ, ಫೇಸ್ಬುಕ್ ಮಾರ್ಕೆಟ್ಪ್ಲೇಸ್ನಲ್ಲಿ ಮಾರಾಟವಾಗುತ್ತಿರುವ ಐಫೋನ್ಗಳು ಅಸಲಿ ಐಫೋನ್ಗಳಲ್ಲ. ಬದಲಿಗೆ ಅಸಲಿ ಐಫೋನ್ಗಳಂತೆ ಕಾಣುವ ಫೋನ್ಗಳಾಗಿವೆ. ಅವುಗಳ ವಿನ್ಯಾಸ ನೋಡಿ ಜನರು ಅವುಗಳನ್ನು ಅಸಲಿ ಐಫೋನ್ಗಳು ಎಂದು ನಂಬಿ ಮೋಸ ಹೋಗುತ್ತಿದ್ದಾರೆ. ಇಲ್ಲಿ ಖರೀದಿಸುವ ಐಫೋನ್ಗಳಿಗೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ಅವು ಯಾವಾಗ ಬೇಕಾದರೂ ಕೆಟ್ಟು ಹೋಗಬಹುದು.
ಇದನ್ನೂ ಓದಿ- Chinese Apps Ban : ಚೀನಾಗೆ ಮತ್ತೆ ಬಿಗ್ ಶಾಕ್ ನೀಡಿದ ಭಾರತ : 232 ಚೈನೀಸ್ ಆ್ಯಪ್'ಗಳು ಬ್ಯಾನ್!
ಸಾಮಾನ್ಯ ಐಫೋನ್ಗಳಿಗಿಂತ ತುಂಬಾ ವಿಭಿನ್ನವಾಗಿರುವ ಈ ಐಫೋನ್ಗಳು ಮರಾ ಅಥವಾ ಡಿಸ್ಪ್ಲೇ ಯಾವುದೇ ವಿಷಯದಲ್ಲಿ ನಿಜವಾದ ಐಫೋನ್ಗಳಿಗೆ ಎಲ್ಲಿಯೂ ಸರಿದೂಗುವುದಿಲ್ಲ. ಅಗ್ಗದ ಬೆಲೆಯಲ್ಲಿ ಐಫೋನ್ ಖರೀದಿ ಹೆಸರಿನಲ್ಲಿ ಮೋಸ ಹೋಗುವ ಬದಲು 10,000 ರೂಪಾಯಿಗಳಲ್ಲಿ ಒಂದು ಉತ್ತಮ ಗುಣಮಟ್ಟದ ಸ್ಮಾರ್ಟ್ಫೋನ್ ಅನ್ನು ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.