ಮುಂದಿನ ವಾರ ಮಾರುಕಟ್ಟೆಗೆ ಬರುತ್ತಿದೆ Motorola Edge 50 Pro!ವೈಶಿಷ್ಟ್ಯ ಮತ್ತು ಬೆಲೆ ಎಷ್ಟಿದೆ ಗೊತ್ತಾ ?
The Motorola Edge 50 Pro Launch:Motorola Edge 50 Pro ಏಪ್ರಿಲ್ 3 ರಂದು ಭಾರತಕ್ಕೆ ಕಾಲಿಡಲಿದೆ. Flipkartನಲ್ಲಿಯೂ ಇದು ಮಾರಾಟಕ್ಕೆ ಲಭ್ಯವಿರಲಿದೆ.
The Motorola Edge 50 Pro Launch : Motorola ತನ್ನ Motorola Edge 50 Pro ನ ಫಾಲೋ ಅಪ್ ಡಿವೈಸ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧವಾಗಿದೆ.ಈ ಫೋನ್ ಯಾವಾಗ ಬಿಡುಗಡೆ ಎನ್ನುವುದನ್ನು ಕಂಪನಿ ತನ್ನ X ಖಾತೆಯಲ್ಲಿ ಹಂಚಿಕೊಂಡಿದೆ. ಇದರ ಪ್ರಕಾರ Motorola Edge 50 Pro ಏಪ್ರಿಲ್ 3 ರಂದು ಭಾರತಕ್ಕೆ ಕಾಲಿಡಲಿದೆ. Flipkartನಲ್ಲಿಯೂ ಇದು ಮಾರಾಟಕ್ಕೆ ಲಭ್ಯವಿರಲಿದೆ. Motoನ ಡಿಜಿಟಲ್ ಮತ್ತು ಆಫ್‌ಲೈನ್ ನಲ್ಲಿ ಎಲ್ಲಿ ಲಭ್ಯವಿರುತ್ತದೆ ಎನ್ನುವುದರ ಜೊತೆಗೆ ಈ ಡಿವೈಸ್ ನ ಕುರಿತಾದ ಹೆಚ್ಚಿನ ಮಾಹಿತಿಯನ್ನು ಫ್ಲಿಪ್‌ಕಾರ್ಟ್‌ನಲ್ಲಿನ ಮೈಕ್ರೋಸೈಟ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಅಸಾಧಾರಣ ವಿನ್ಯಾಸ: ಈ ಫೋನ್ ಎರಡು ರೂಪಾಂತರಗಳೊಂದಿಗೆ ಮೂರು ಬಣ್ಣಗಳಲ್ಲಿ ಬರಲಿದೆ. ಕಪ್ಪು ಮತ್ತು ನೇರಳೆ ಬಣ್ಣದ ಫೋನ್ ಸಿಲಿಕೋನ್ ವೇಗನ್ ಲೆದರ್ ಜೊತೆಗೆ ಮೆಟಲ್ ಫ್ರೇಮ್ ನೊಂದಿಗೆ ಬರಲಿದೆ. ಮೂರನೆಯ ಆಯ್ಕೆಯು ಪರ್ಲ್ ಫಿನಿಶ್ ಹೊಂದಿರುವ ಕ್ರೀಂ ಶೇಡ್ ನದ್ದಾಗಿದೆ. ಈ ಫೋನ್ IP68 ಅಂಡರ್ ವಾಟರ್ ಪ್ರೊಟೆಕ್ಷನ್ ನೊಂದಿಗೆ ಬರುತ್ತದೆ.
ಇದನ್ನೂ ಓದಿ : WhatsApp Feature: ವಾಟ್ಸಾಪ್‌ನಲ್ಲಿ ಬರಲಿದೆ ಹೊಸ ಪ್ರೈವೆಸಿ ಫೀಚರ್, ಏನಿದರ ವೈಶಿಷ್ಟ್ಯ?
ಪ್ರೊಸೆಸರ್: ಈ ಫೋನ್ ಸ್ನಾಪ್ಡ್ರಾಗನ್ 7 Gen 3 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಇದು 12GB RAM ಹೊಂದಿರುವ ಸಾಧ್ಯತೆಯಿದೆ.
ವೈರ್‌ಲೆಸ್ ಚಾರ್ಜಿಂಗ್: ಈ ಪೋನ್ 4500 mAh ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಮೊಟೊರೊಲಾ ಟರ್ಬೊಪವರ್ ಚಾರ್ಜಿಂಗ್‌ನ 125W ಜೊತೆಗೆ 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ನೀಡುವ ಮೊದಲ IP68-ಪ್ರಮಾಣೀಕೃತ ಸಾಧನವಾಗಿದೆ ಎಂದು Moto ಹೇಳಿಕೊಂಡಿದೆ. ಬಾಕ್ಸ್‌ನಲ್ಲಿ 68W ಚಾರ್ಜರ್ ಇರುತ್ತದೆ ಎನ್ನುವುದನ್ನು ಮೈಕ್ರೋಸೈಟ್ ಹೇಳುತ್ತದೆ.
Pantone ನಿಂದ ಅನುಮೋದನೆ : 144Hz ರಿಫ್ರೆಶ್ ರೇಟ್, 2,000 nits ಗರಿಷ್ಠ ಹೊಳಪು, HDR10+ ಮತ್ತು SGS-ಪ್ರಮಾಣೀಕೃತ ನೀಲಿ ಬೆಳಕಿನ ರಕ್ಷಣೆಯೊಂದಿಗೆ 1.5K ಕರ್ವ್ದ್ ಪೋಲೆಡ್ ಡಿಸ್ಪ್ಲೇ ಇರಲಿದೆ.
ಇದನ್ನೂ ಓದಿ : Holi 2024 Tips: ಬಣ್ಣ ಆಡುವಾಗ ಫೋನ್ ಪೋರ್ಟ್ ಒಳಗೆ ಬಣ್ಣ ಸೇರಿದೆಯಾ? ನಿಮಿಷಾರ್ಧದಲ್ಲಿ ಈ ರೀತಿ ಸ್ವಚ್ಛ ಮಾಡಿ
ಕ್ಯಾಮೆರಾ : AI-ಚಾಲಿತ 50MP ಪ್ರೈಮರಿ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿರುತ್ತದೆ. ಹಿಂಭಾಗದ ಶೂಟರ್ 30X ಹೈಬ್ರಿಡ್ ಜೂಮ್‌ನೊಂದಿಗೆ ಟೆಲಿಫೋಟೋ OIS ಕ್ಯಾಮ್ ಮತ್ತು 50MP ಸೆಲ್ಫಿ ಶೂಟರ್ ಜೊತೆಗೆ 13MP ಮ್ಯಾಕ್ರೋ + ಅಲ್ಟ್ರಾವೈಡ್ ಕ್ಯಾಮ್ ಅನ್ನು ಒಳಗೊಂಡಿದೆ. Motorola Edge 50 Pro ಭಾರತದಲ್ಲಿ ಏಪ್ರಿಲ್ 3, 2024 ರಂದು ಬಿಡುಗಡೆಯಾಗಲಿದೆ. ಇದರ ಬೆಲೆ 30,000-35,000ರ ನಡುವೆ ಇರಲಿದೆ ಎನ್ನಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ