ನವದೆಹಲಿ : ಮೊಟೊರೊಲಾ (Motorola) ಶೀಘ್ರದಲ್ಲೇ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. Moto G Power (2022) ಅನ್ನು Geekbench ಬೆಂಚ್‌ಮಾರ್ಕಿಂಗ್ ಸೈಟ್‌ನಲ್ಲಿ ಗುರುತಿಸಲಾಗಿದೆ. GizNext ಈಗ ಸ್ಮಾರ್ಟ್‌ಫೋನ್‌ನ ಅಧಿಕೃತ ರೆಂಡರ್‌ಗಳು ಮತ್ತು ವಿಶೇಷಣಗಳನ್ನು ಹಂಚಿಕೊಂಡಿದೆ. ಶೀಘ್ರದಲ್ಲೇ ಈ ಫೋನ್ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಲಾಗಿದೆ. Moto G Power (2022) ಬೃಹತ್ 6.5-ಇಂಚಿನ ಸ್ಕ್ರೀನ್ ಹೊಂದಿರಲಿದೆ. ಬೃಹತ್ 50-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಬೃಹತ್ 5000mAH ಬ್ಯಾಟರಿ ಕೂಡಾ ಇರಲಿದೆ. 


COMMERCIAL BREAK
SCROLL TO CONTINUE READING

Moto G Power (2022) ಸ್ಪೆಸಿಫಿಕೆಶನ್ :
Moto G Power (2022) 720 x 1600 ಪಿಕ್ಸೆಲ್‌ಗಳ HD+ ರೆಸಲ್ಯೂಶನ್, 20:9 ಆಸ್ಪೆಕ್ ರೇಶಿಯೋ ,  269ppi ಪಿಕ್ಸೆಲ್ ಸಾಂದ್ರತೆ ಮತ್ತು 90Hz ರಿಫ್ರೆಶ್ರೇಟ್ ಅನ್ನು ನೀಡುವ 6.5-ಇಂಚಿನ TFT ಮ್ಯಾಕ್ಸ್ ವಿಷನ್ ಡಿಸ್ಪ್ಲೇಯನ್ನು ಹೊಂದಿದೆ. ಸೆಲ್ಫಿಗಾಗಿ, 8 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ. 


ಇದನ್ನೂ ಓದಿ : Microsoft Surface Laptop SE: ವಿದ್ಯಾರ್ಥಿಗಳಿಗಾಗಿ ಅತ್ಯಂತ ಅಗ್ಗದ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಮೈಕ್ರೋಸಾಫ್ಟ್


Moto G Power (2022) ಕ್ಯಾಮರಾ :
Moto G Power (2022) ನ ಹಿಂದಿನ ಕ್ಯಾಮೆರಾ ಸೆಟಪ್ 50-ಮೆಗಾಪಿಕ್ಸೆಲ್ ಲೆನ್ಸ್‌ನಿಂದ ಚಾಲಿತವಾಗಿದೆ. ಇದು 2-ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಎಲ್ಇಡಿ ಫ್ಲ್ಯಾಷ್ ಹೊಂದಿದೆ.  ಫೋನ್‌ನಲ್ಲಿರುವ 'M' ಲೋಗೋ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ರೂಪದಲ್ಲಿ ಬರುತ್ತದೆ. 


Moto G Power (2022) ವೈಶಿಷ್ಟ್ಯಗಳು :
Helio G35 ನೊಂದಿಗೆ ಗೀಕ್‌ಬೆಂಚ್‌ನಲ್ಲಿ ಹ್ಯಾಂಡ್‌ಸೆಟ್ ಅನ್ನು ಗುರುತಿಸಲಾಗಿದೆ. ಇದು Helio G37 ನಿಂದ ಚಾಲಿತವಾಗಿದೆ ಎಂದು ಹೇಳಲಾಗುತ್ತದೆ. 4 GB RAM ಮತ್ತು 64 GB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಹೆಚ್ಚುವರಿ ಸ್ಟೋರೇಜ್ ಗಾಗಿ ಮೈಕ್ರೊ SD card slot ಅನ್ನು ಹೊಂದಿದೆ. 


ಇದನ್ನೂ ಓದಿ : Flipkart Offer ! ಕೇವಲ 740 ರೂ.ಗೆ ಖರೀದಿಸಿ Oppo 5G Smartphone


Moto G Power (2022) ಬ್ಯಾಟರಿ : 
Moto G Power (2022) 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಒಳಗೊಂಡಿದೆ. ಇದು ಡ್ಯುಯಲ್ ಸಿಮ್, WiFi, ಬ್ಲೂಟೂತ್, ಎನ್‌ಎಫ್‌ಸಿ, ಜಿಪಿಎಸ್, ಯುಎಸ್‌ಬಿ-ಸಿ ಪೋರ್ಟ್, 3.5 ಎಂಎಂ ಆಡಿಯೊ ಜ್ಯಾಕ್ ಮತ್ತು ಐಪಿ52 ರೇಟೆಡ್ ಚಾಸಿಸ್‌ನಂತಹ ಇತರ ವೈಶಿಷ್ಟ್ಯಗಳನ್ನು ನೀಡುತ್ತದೆ. ಸಾಧನವು 167.24 x 76.54 x 9.36 ಮಿಮೀ ಅಳತೆಗಳನ್ನು ಹೊಂದಿದೆ. ಸೋರಿಕೆಯಲ್ಲಿ ಸ್ಮಾರ್ಟ್‌ಫೋನ್ ಬಿಡುಗಡೆ ದಿನಾಂಕ ಮತ್ತು ಬೆಲೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.