Tips and Tricks: ಮರೆತು ಹೋಗಿರುವ WiFi Password ಅನ್ನು ಮತ್ತೆ ಕಂಡು ಹಿಡಿಯುವುದು ಹೇಗೆ ? ಇಲ್ಲಿದೆ ಸುಲಭ ಉಪಾಯ

ನೀವು ಆಂಡ್ರಾಯ್ಡ್ 10 ಮತ್ತು ಅದಕ್ಕಿಂತ ಹೆಚ್ಚಿನ ಆವೃತಿಯನ್ನು ಬಳಸುತ್ತಿದ್ದರೆ, ಅದರಲ್ಲಿ  ಸೇವ್ಡ್  ನೆಟ್‌ವರ್ಕ್‌ನ ವೈಫೈ ಪಾಸ್‌ವರ್ಡ್ ಅನ್ನು ನೋಡುವುದು ಸುಲಭ. ಇದಕ್ಕಾಗಿ, ಡಿವೈಸ್ ಅನ್ನು ರೂಟ್ ಮಾಡುವ ಅಗತ್ಯವಿರುವುದಿಲ್ಲ.   

Written by - Ranjitha R K | Last Updated : Sep 6, 2021, 03:22 PM IST
  • ಮರೆತುಹೋದ ವೈಫೈ ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳುವುದು ಹೇಗೆ
  • ಆಂಡ್ರಾಯ್ಡ್ 10 ಮತ್ತು ನಂತರದ ಆವೃತಿಯಲ್ಲಿ ಕ್ಯೂಆರ್ ಕೋಡ್‌ನೊಂದಿಗೆ ಪಾಸ್‌ವರ್ಡ್ ಹಂಚಿಕೊಳ್ಳಿ
  • ಆಂಡ್ರಾಯ್ಡ್ 9 ಮತ್ತು ಹಿಂದಿನ ಸಾಧನಗಳಲ್ಲಿ ವೈಫೈ ಪಾಸ್‌ವರ್ಡ್ ಅನ್ನು ಹೇಗೆ ಪಡೆಯುವುದು
Tips and Tricks:  ಮರೆತು ಹೋಗಿರುವ WiFi Password ಅನ್ನು ಮತ್ತೆ ಕಂಡು ಹಿಡಿಯುವುದು ಹೇಗೆ ? ಇಲ್ಲಿದೆ ಸುಲಭ ಉಪಾಯ  title=
ಮರೆತುಹೋದ ವೈಫೈ ಪಾಸ್‌ವರ್ಡ್ ಅನ್ನು ನೆನಪಿಟ್ಟುಕೊಳ್ಳುವುದು ಹೇಗೆ (file photo)

ನವದೆಹಲಿ : ಇಂದು ಎಲ್ಲಾ ಕೆಲಸಗಳು ಬೆರಳ ತುದಿಯಲ್ಲೇ ನಡೆದು ಹೋಗುತ್ತದೆ. ಆದರೆ ಇದಕ್ಕೆ ಇಂಟರ್ನೆಟ್ (Internet) ಅಗತ್ಯವಿದೆ. ಹೌದು ಈಗ ಎಲ್ಲಾ ಕೆಲಸಗಳಿಗೂ ಇಂಟರ್ನೆಟ್ ಅಗತ್ಯ. ನಮ್ಮ ಸ್ಮಾರ್ಟ್‌ಫೋನ್‌ಗಳು ಡೇಟಾ ಪ್ಯಾಕ್‌ಗಳನ್ನು ಹೊಂದಿದ್ದರೂ, ವೈಫೈ (WiFi)ಸಿಕ್ಕಿ ಬಿಟ್ಟರೆ ಅದರ ಖುಷಿಯೇ ಬೇರೆ. ವೈಫೈ ಬೇಕಾದರೆ, ಪಾಸ್‌ವರ್ಡ್ ಬಳಸಬೇಕು. ಒಮ್ಮೊಮ್ಮೆ ವೈಫೈ ಪಾಸ್‌ವರ್ಡ್ (WiFi Password) ಮರೆತು ಹೋಗುತ್ತದೆ. ಒಂದು ವೇಳೆ, ವೈಫೈ ಪಾಸ್‌ವರ್ಡ್ ಮರೆತು ಹೋದರೆ ಆಗ ಏನು ಮಾಡುವುದು?   

ಸೇವ್ ಮಾಡಿದ ಪಾಸ್‌ವರ್ಡ್ ಸೌಲಭ್ಯ : 
ನೀವು ಆಂಡ್ರಾಯ್ಡ್ 10 ಮತ್ತು ಅದಕ್ಕಿಂತ ಹೆಚ್ಚಿನ ಆವೃತಿಯನ್ನು ಬಳಸುತ್ತಿದ್ದರೆ, ಅದರಲ್ಲಿ  ಸೇವ್ಡ್  ನೆಟ್‌ವರ್ಕ್‌ನ ವೈಫೈ ಪಾಸ್‌ವರ್ಡ್ ಅನ್ನು ನೋಡುವುದು ಸುಲಭ. ಇದಕ್ಕಾಗಿ, ಡಿವೈಸ್ ಅನ್ನು ರೂಟ್ ಮಾಡುವ ಅಗತ್ಯವಿರುವುದಿಲ್ಲ. 

ಇದನ್ನೂ  ಓದಿ : Tecno Pova 2: 7,000mAh ಬ್ಯಾಟರಿಯೊಂದಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ಫೋನ್ ಖರೀದಿಸಲು ಉತ್ತಮ ಅವಕಾಶ

ಆಂಡ್ರಾಯ್ಡ್ 9 ಮತ್ತು ಕೆಳಗಿನ ಆವೃತಿಗಳಲ್ಲಿ ವೈಫೈ ಪಾಸ್‌ವರ್ಡ್ ಅನ್ನು ಹೇಗೆ ನೋಡುವುದು?
ನಿಮ್ಮ ಸ್ಮಾರ್ಟ್‌ಫೋನ್ (Smartphone) ಆಂಡ್ರಾಯ್ಡ್ 9 ಅಥವಾ ಕಡಿಮೆ ಆವೃತಿಯಾಗಿದ್ದರೆ, ಸೇವ್ಡ್ ವೈಫೈ ಪಾಸ್‌ವರ್ಡ್‌ಗಳನ್ನು ವೀಕ್ಷಿಸಲು ಸುಲಭ ಮಾರ್ಗವಿದೆ. ಇದಕ್ಕಾಗಿ,  ನೆಟ್ವರ್ಕ್ ಗಾಗಿ ವೈಫೈ ಕ್ರೆಡೆನ್ಶಿಯಲ್ ಹೊಂದಿರುವ ಫೈಲ್ ನಿಮ್ಮ ಫೋನ್ ಸ್ಟೋರೇಜ್ ನ (phone storage) ಪ್ರೋಟೆಕ್ಟೆಡ್  ಡೈರೆಕ್ಟರಿಯಲ್ಲಿರುವುದರಿಂದ ನಿಮ್ಮ ಡಿವೈಸ್ ಅನ್ನು ರೂಟ್ ಮಾಡಬೇಕಾಗುತ್ತದೆ.

ಫೋನ್ ಅನ್ನು ರೂಟ್ ಮಾಡಿದ ನಂತರ, ರೂಟ್ ಬ್ರೌಸಿಂಗ್ ಅನ್ನು ಬೆಂಬಲಿಸುವ ಫೈಲ್ ಎಕ್ಸ್‌ಪ್ಲೋರರ್ ಅಪ್ಲಿಕೇಶನ್ ಸಹಾಯದಿಂದ /data/misc/wifi ಗೆ ಹೋಗಿ ಮತ್ತು wpa_supplicant.conf ಅನ್ನು ತೆರೆಯಿರಿ. ಇಲ್ಲಿ ನೀವು ನಿಮ್ಮ ನೆಟ್‌ವರ್ಕ್‌ನ ಹೆಸರು  ಮತ್ತು ಅದರ ಪಾಸ್‌ವರ್ಡ್ ಅನ್ನು ನೋಡಬಹುದು.  

ಇದನ್ನೂ  ಓದಿ : Whatsapp ಇನ್ಮುಂದೆ ಈ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡುವುದಿಲ್ಲ, ಇಲ್ಲಿದೆ ಫುಲ್ ಲಿಸ್ಟ್

ಆಂಡ್ರಾಯ್ಡ್ 10 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯೊಂದಿಗೆ ವೈಫೈ ಅನ್ನು ಹೇಗೆ ಹಂಚಿಕೊಳ್ಳುವುದು ?
ಆಂಡ್ರಾಯ್ಡ್ 10 ಅಥವಾ ಅದಕ್ಕಿಂತ ಹೆಚ್ಚಿನ ಫೋನ್‌ನಲ್ಲಿ ವೈಫೈ ಪಾಸ್‌ವರ್ಡ್  (WiFi Password) ನೋಡಲು, ನೀವು ಮೊದಲು ಸೆಟ್ಟಿಂಗ್‌ಗಳಿಗೆ ಹೋಗಬೇಕು. ಅದರ ನಂತರ ನೆಟ್ವರ್ಕ್ ಮತ್ತು ಇಂಟರ್ನೆಟ್ ಆಯ್ಕೆಯನ್ನು ಹುಡುಕಿ ಮತ್ತು ವೈಫೈ ಟ್ಯಾಪ್ ಮಾಡಿ. ಇಲ್ಲಿ ನೀವು ನಿಮ್ಮ ಪ್ರಸ್ತುತ ವೈಫೈ ನೆಟ್‌ವರ್ಕ್‌ಗಳನ್ನು ಪಟ್ಟಿಯ ಮೇಲ್ಭಾಗದಲ್ಲಿ ಕಾಣಬಹುದು. ಅದನ್ನು ಆಯ್ಕೆ ಮಾಡಿ ನಂತರ ಶೇರ್ ಬಟನ್ ಆಯ್ಕೆ ಮಾಡಿ. ಇದರ ನಂತರ, ಬಳಕೆದಾರರು ಮುಂದುವರಿಯಲು ತಮ್ಮ ಫೋನಿನ ಪಿನ್ ಅಥವಾ ಬೆರಳಚ್ಚು ನಮೂದಿಸಬೇಕು. ಇಷ್ಟು ಮಾಡಿದ ನಂತರ, ನಿಮ್ಮ ವೈಫೈ ಪಾಸ್‌ವರ್ಡ್ ಅನ್ನು ನೀವು ಕ್ಯೂಆರ್ ಕೋಡ್ ಅಡಿಯಲ್ಲಿ ಕಾಣಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News