Top-5 Car Accessories You Must Have : ಮಾರುಕಟ್ಟೆಯಲ್ಲಿ ವಿಧದ ಕಾರುಗಳ ಬಿಡಿಭಾಗಗಳು ಲಭ್ಯವಿವೆ. ಕೆಲವು ಬಿಡಿಭಾಗಗಳು ಕಾರಿನ ವಿನ್ಯಾಸವನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡಲು ಬಳಸಿದರೆ ಇನ್ನು ಕೆಲವು ಸೌಕರ್ಯವನ್ನು ಹೆಚ್ಚಿಸುತ್ತದೆ. ಆದ್ದರಿಂದ, ನಿಮ್ಮ ಕಾರಿನಲ್ಲಿ ಈ 5 ಪರಿಕರಗಳನ್ನು ಅಳವಡಿಸಿಕೊಳ್ಳಲೇಬೇಕು. 


COMMERCIAL BREAK
SCROLL TO CONTINUE READING

1. ಹೆಡ್-ಅಪ್ ಡಿಸ್ಪ್ಲೇ :
ಇತ್ತೀಚಿನವರೆಗೂ, ಹೆಡ್-ಅಪ್ ಡಿಸ್ಪ್ಲೇಗಳು ಉನ್ನತ-ಮಟ್ಟದ ಪ್ರೀಮಿಯಂ  ಲಕ್ಸುರಿ ಮತ್ತು ಪರ್ಫಾಮೆನ್ಸ್ ಕಾರುಗಳಲ್ಲಿ ಮಾತ್ರ ಲಭ್ಯವಿದ್ದವು. ಆದರೆ ಈಗ ಈ ತಂತ್ರಜ್ಞಾನವನ್ನು ಯಾವ ಕಾರಿಗೆ ಬೇಕಾದರೂ ಅಳವಡಿಸಿಕೊಳ್ಳಬಹುದಾಗಿದೆ. ಈಗ ಹೆಡ್-ಅಪ್ ಡಿಸ್ಪ್ಲೇಗಳನ್ನು ಆಫ್ಟರ್ ಮಾರ್ಕೆಟ್ ಕೂಡಾ ಅಳವಡಿಸಬಹುದಾಗಿದೆ. ಇದನ್ನು ಕಾರಿಗೆ ಅಳವಡಿಸುವ ಮೂಲಕ ಚಾಲಕ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಮತ್ತೆ ಮತ್ತೆ ನೋಡಬೇಕಾಗಿರುವುದಿಲ್ಲ.


ಇದನ್ನೂ ಓದಿ : ಸನ್’ರೂಫ್ ಜೊತೆ ಸೂಪರ್ ಮೈಲೇಜ್… ದೇಶದಲ್ಲಿಯೇ ಅತೀ ಅಗ್ಗದ ಕಾರಿದು! CNG ಆಯ್ಕೆಯೂ ಲಭ್ಯವಿದೆ


2. ವೆಂಟಿಲೇಟೆಡ್  ಸೀಟ್ : 
ಬೇಸಿಗೆಯಲ್ಲಿ ಕಾರಿನಲ್ಲಿ ವೆಂಟಿಲೇಟೆಡ್ ಸೀಟ್ ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ. ವೆಂಟಿಲೇಟೆಡ್ ಸೀಟ್ ಪ್ರೀಮಿಯಂ ವೈಶಿಷ್ಟ್ಯಗಳಲ್ಲಿ ಬರುತ್ತದೆ. ಆದರೆ, ಈಗ ಹಳೆಯ ಕಾರಿನಲ್ಲಿಯೂ ವೆಂಟಿಲೇಟೆಡ್ ಸೀಟಿನ ಆನಂದವನ್ನು ಪಡೆಯಬಹುದು. ಲಾಂಗ್ ಡ್ರೈವ್‌ ಸಂದರ್ಭಗಳಲ್ಲಿ ವೆಂಟಿಲೇಟೆಡ್  ಸೀಟ್ ಹೆಚ್ಚು ಉಪಯೋಗಕ್ಕೆ ಬರುತ್ತದೆ. 


3. ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS) : 
ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS)ಬಹಳ ಉಪಯುಕ್ತ ವೈಶಿಷ್ಟ್ಯವಾಗಿದೆ. ಟೈರ್ ಒತ್ತಡವನ್ನು ದೂರದಿಂದಲೇ  ಮಾನಿಟರಿಂಗ್ ಮಾಡಲು ಇದು ಸಹಾಯ ಮಾಡುತ್ತದೆ. ಇದನ್ನು ಕಾರಿಗೆ ಹಾಕಿಸಿದರೆ ಟೈರ್ ಪ್ರೆಶರ್ ಅನ್ನು ಪದೇ ಪದೇ ಮ್ಯಾನ್ಯುವಲಿಯಾಗಿ ಚೆಕ್ ಮಾಡುವ ಅಗತ್ಯ ಇರುವುದಿಲ್ಲ.  ಇದರ ವೆಚ್ಚ್ ಕೂಡಾ ಬಹಳ ಕಡಿಮೆ.   


ಇದನ್ನೂ ಓದಿ : ಮಾರುಕಟ್ಟೆಗೆ ಬಂತು ಸೂಪರ್ ಇವಿ Simple ONE! ಬೆಲೆ ಕಡಿಮೆ, ವೈಶಿಷ್ಟ್ಯ ಸೂಪರ್


4. ಡ್ಯಾಶ್‌ಕ್ಯಾಮ್ : 
ಡ್ಯಾಶ್‌ಕ್ಯಾಮ್‌ಗಳು ಕಾರಿಗೆ ಸುರಕ್ಷತಾ ಪರಿಕರವಾಗಿ  ಕಾರ್ಯನಿರ್ವಹಿಸುತ್ತವೆ. ಅನೇಕ ಅಪಘಾತ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಡ್ಯಾಶ್‌ಕ್ಯಾಮ್ ಫೂಟೇಜ್ ಪ್ರಮುಖ ಪಾತ್ರ ವಹಿಸಿದೆ. ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಡ್ಯಾಶ್‌ಕ್ಯಾಮ್‌ಗಳು ಲಭ್ಯವಿವೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ  ಅವುಗಳಲ್ಲಿ ಯಾವುದನ್ನು ಬೇಕಾದರೂ ಆರಿಸಿ ನಿಮ್ಮ ಕಾರಿಗೆ ಅಳವಡಿಸಿಕೊಳ್ಳಬಹುದು.  


5. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ :
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಕಾರುಗಳು ದೊಡ್ಡ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್‌ಗಳನ್ನು ಹೊಂದಿದ್ದು, ಅವು ಸಾಕಷ್ಟು ಉಪಯುಕ್ತವಾಗಿವೆ. ಈಗ ಮಾರುಕಟ್ಟೆಯಲ್ಲಿ ಆಫ್ಟರ್‌ಮಾರ್ಕೆಟ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯೂನಿಟ್‌ಗಳು ಲಭ್ಯವಿದೆ. ಇದು  ಆಂಡ್ರಾಯ್ಡ್ ಆಧಾರಿತ ಓಎಸ್ ನೊಂದಿಗೆ ಬರುತ್ತದೆ. 


ಇದನ್ನೂ ಓದಿ : ಬಲೆನೋಗೆ ಪರ್ಯಾಯ ಈ ಕಾರು ! ಫೈವ್ ಸ್ಟಾರ್ ಸೇಫ್ಟಿ ರೇಟಿಂಗ್ ಇರುವ ಈ ಕಾರಿನ ಬೆಲೆ ಕೂಡಾ ಕಡಿಮೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.