/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Ola Premium Plus Service : ನೀವು ಕೂಡಾ ಮನೆಯಿಂದ ಹೊರಕ್ಕೆ ಹೋಗುವಾಗ ಓಲಾ ಕ್ಯಾಬ್ ಬಳಸುವವರಾಗಿದ್ದರೆ ಈ ಸುದ್ದಿ ಮುಖ್ಯವಾಗಿದೆ. ಸಾಮಾನ್ಯವಾಗಿ ಓಲಾ ಕ್ಯಾಬ್ ಬುಕ್ ಮಾಡಿದಾಗ  ಚಾಲಕ ರೈಡ್ ಅನ್ನು ಕ್ಯಾನ್ಸಲ್ ಮಾಡುವ ಸಮಸ್ಯೆಯನ್ನು ಬಹುತೇಕ ಪ್ರಯಾಣಿಕರು ಎದುರಿಸುತ್ತಾರೆ. ಮಳೆಗಾಲದಲ್ಲಿ ಅಥವಾ ಕಚೇರಿ ವೇಳೆಯಲ್ಲಿ ಇಂತಹ ಸಮಸ್ಯೆಗಳು ಕಂಡುಬರುತ್ತವೆ. ಆದರೆ, ಇನ್ನು ಮುಂದೆ  ಈ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು, OLA ತನ್ನ ವಿಶೇಷ ಸೇವೆಯನ್ನು ಪ್ರಾರಂಭಿಸಿದೆ. ಇಂದಿನಿಂದಲರ್ ಈ ಸೇವೆ ಜಾರಿಗೆ ಬಂದಿದೆ. ಕಂಪನಿಯು ಓಲಾ ಪ್ರೀಮಿಯಂ ಪ್ಲಸ್ ಸೇವೆಯ ಜಾರಿಗೆ ಮುಂದಾಗಿದೆ. ಬಳಕೆದಾರರು ಪ್ರೈಮ್ ಪ್ಲಸ್ ಮೂಲಕ ಕ್ಯಾಬ್ ಅನ್ನು ಬುಕ್ ಮಾಡಿದಾಗ, ಅವರಿಗೆ 'ಅತ್ಯುತ್ತಮ ಚಾಲಕರನ್ನು ಒದಗಿಸಲಾಗುತ್ತದೆ. ಅಲ್ಲದೆ, ಈ ಸೇವೆಯ ಮೂಲಕ ಯಾವುದೇ  ಕ್ಯಾನ್ಸಲೇಶನ್ ಅಥವಾ  ಡ್ರೈವಿಂಗ್ ಸಮಸ್ಯೆಯನ್ನು ಎದುರಿಸಬೇಕಾಗಿಲ್ಲ. 

ಬೆಂಗಳೂರಿಗರಿಗೆ ಹಿಸ ಸೇವೆ ಆರಂಭಿಸಿದ ಓಲಾ :  
ಸದ್ಯಕ್ಕೆ Ola ಪ್ರೀಮಿಯಂ ಪ್ಲಸ್ ಬೆಂಗಳೂರಿನ ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಿರಲಿದೆ. ಕ್ರಮೇಣ ಈ ಸೇವೆಯನ್ನು ದೇಶದಾದ್ಯಂತ ಹೊರತರುವ ಯೋಜನೆ ಕಂಪನಿಯದ್ದಾಗಿದೆ. ಈ ಸೇವೆಯನ್ನು ದೇಶಾದ್ಯಂತ ಬಿಡುಗಡೆ ಮಾಡುವ ಮೊದಲು ಕಂಪನಿಯು ಪ್ರತಿಕ್ರಿಯೆಯನ್ನು ನೋಡಲು ಬಯಸುತ್ತದೆ.

ಇದನ್ನೂ ಓದಿ : WhatsApp ಮೂಲಕ ಮೆಟ್ರೊ ಟಿಕೆಟ್ ಬುಕಿಂಗ್, ಕೌಂಟರ್ ಬಳಿ ಸರದಿಯಲ್ಲಿ ನಿಲ್ಲಬೇಕಾಗಿಲ್ಲ!

ಓಲಾ ಪ್ರೀಮಿಯಂ ಪ್ಲಸ್ ಸೇವೆ ಪ್ರಾರಂಭ : 
ಓಲಾ ಸಹ-ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ಟ್ವೀಟ್ ಮಾಡುವ ಮೂಲಕ ಕಂಪನಿಯ  ಯೋಜನೆಯ ಬಗ್ಗೆ ಮಾಹಿತಿ ಹಂಚಿ ಕೊಂಡಿದ್ದಾರೆ. "ಓಲಾ ಕ್ಯಾಬ್ಸ್, ಪ್ರೈಮ್ ಪ್ಲಸ್‌ನಿಂದ ಹೊಸ ಪ್ರೀಮಿಯಂ ಸೇವೆಯನ್ನು ಒದಗಿಸುವ ಬಗ್ಗೆ ಪ್ರಯತ್ನ ನಡೆಸುತ್ತಿದೆ. ಇದರ ಅಡಿಯಲ್ಲಿ ಅತ್ಯುತ್ತಮ ಚಾಲಕರು, ಉನ್ನತ ಕಾರುಗಳು, ಮಾತ್ರವಲ್ಲದೆ  ಕ್ಯಾನ್ಸಲೇಶನ್ ಅಥವಾ  ಡ್ರೈವಿಂಗ್ ಸಮಸ್ಯೆಯನ್ನು ಪ್ರಯಾಣಿಕರು ಎದುರಿಸಬೇಕಾಗಿಲ್ಲ  ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಆಯ್ದ ಗ್ರಾಹಕರಿಗೆ ಈ ಸೇವೆ ಇಂದಿನಿಂದಲೇ ಲಭ್ಯವಾಗಲಿದೆ. ಓಲಾ ಆಪ್ ಮೂಲಕ ರೈಡ್ ಬುಕ್ ಮಾಡುವಾಗ ಕಾಣಿಸುವ ಪ್ರೈಮ್ ಪ್ಲಸ್ ಎನ್ನುವ ಹೊಸ ಆಯ್ಕೆಯನ್ನು ಪ್ರದರ್ಶಿಸುವ  ಮೂಲಕ ರೈಡ್ ನ ಸ್ಕ್ರೀನ್ ಶಾಟ್ ಅನ್ನು ಸಹ ಅವರು ಹಂಚಿಕೊಂಡಿದ್ದಾರೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ ? : 
ಸ್ಕ್ರೀನ್‌ಶಾಟ್ ಪ್ರಕಾರ, ಓಲಾ ಪ್ರೈಮ್ ಪ್ಲಸ್ ಸೇವೆಯ ಮೂಲಕ ಕ್ಯಾಬ್ ಬುಕ್ ಮಾಡುವ ವೆಚ್ಚ 455 ರೂ.  ಇದಕ್ಕೆ ವ್ಯತಿರಿಕ್ತವಾಗಿ, ಮಿನಿ ಕ್ಯಾಬ್ ಅನ್ನು ಬುಕ್ ಮಾಡಿದರೆ ಅದೇ ಸವಾರಿ 535 ರೂ. ಪಾವತಿಸಬೇಕಾಗುತ್ತದೆ. ಸಾಮಾನ್ಯವಾಗಿ, ಓಲಾ ಕ್ಯಾಬ್ಸ್ ಮೂಲಕ ರೈಡ್ ಬುಕ್ ಮಾಡುವಾಗ ಮಿನಿ  ಅಗ್ಗದ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ಪ್ರೈಮ್ ಪ್ಲಸ್ ನಲ್ಲಿ ಈ ಬೆಲೆಯಲ್ಲಿ ಕಂಡು ಬರುವ ವ್ಯತ್ಯಾಸದ ಹಿಂದಿನ ಕಾರಣ ಏನು ಎನ್ನುವುದು ತಿಳಿದು ಬಂದಿಲ್ಲ.

ಇದನ್ನೂ ಓದಿ : Tech Tips: ಲ್ಯಾಪ್ ಟಾಪ್ ಪದೇ ಪದೇ ಹ್ಯಾಂಗ್ ಆಗುತ್ತದೆಯೇ? ಈ ಸಲಹೆಗಳನ್ನು ಟ್ರೈ ಮಾಡಿ ನೋಡಿ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

Section: 
English Title: 
from today Ola Premium Plus Service to bengaluru passengers
News Source: 
Home Title: 

ಇನ್ನು ಚಾಲಕ ರೈಡ್ ಕ್ಯಾನ್ಸಲ್ ಮಾಡುವಂತಿಲ್ಲ :  ola ಇಂದಿನಿಂದಲೇ  ಆರಂಭಿಸಿದೆ  Premium Plus Service 

ಇನ್ನು ಚಾಲಕ ರೈಡ್ ಕ್ಯಾನ್ಸಲ್ ಮಾಡುವಂತಿಲ್ಲ :  ola ಇಂದಿನಿಂದಲೇ  ಆರಂಭಿಸಿದೆ  Premium Plus Service
Yes
Is Blog?: 
No
Tags: 
Facebook Instant Article: 
Yes
Highlights: 

OLA ತನ್ನ ವಿಶೇಷ ಸೇವೆಯನ್ನು ಪ್ರಾರಂಭಿಸಿದೆ. 

ಪ್ರೀಮಿಯಂ ಪ್ಲಸ್ ಸೇವೆಯ ಜಾರಿಗೆ ಮುಂದಾಗಿದೆ.

ಇಂದಿನಿಂದಲೇ  ಈ ಸೇವೆ ಜಾರಿಗೆ 

Mobile Title: 
ಇನ್ನು ಚಾಲಕ ರೈಡ್ ಕ್ಯಾನ್ಸಲ್ ಮಾಡುವಂತಿಲ್ಲ: ಇಂದಿನಿಂದಲೇ ola Premium Plus Service ಆರಂಭ
Ranjitha R K
Publish Later: 
No
Publish At: 
Tuesday, May 30, 2023 - 09:55
Created By: 
Ranjitha RK
Updated By: 
Ranjitha RK
Published By: 
Ranjitha RK
Request Count: 
1
Is Breaking News: 
No
Word Count: 
320