ಗೀಸರ್ ನೀರಿನಲ್ಲಿರುವ ಬ್ಯಾಕ್ಟೀರಿಯಾ ಸಾಯಬೇಕಾದರೆ ಚಳಿಗಾಲದಲ್ಲಿ ಟೆಂಪರೇಚರ್ ಇಷ್ಟಿರಬೇಕು !
ವಿದ್ಯುತ್ ಉಳಿಸುವ ಸಲುವಾಗಿ, ನೀವು ಮಾಡುವ ಕೆಲಸದಿಂದ ಗೀಸರ್ ನಿಂದ ಬರುವ ನೀರು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.
ಬೆಂಗಳೂರು : ಚಳಿಗಾಲ ಆರಂಭವಾದಂತೆ ನಲ್ಲಿಯಲ್ಲಿ ಬರುವ ನೀರು ಕೂಡಾ ಅತಿಯಾಗಿ ತಂಪಾಗಿರುತ್ತದೆ. ಹೀಗಾದಾಗ ತಣ್ಣೀರು ಸ್ನಾನ ಮಾಡುವುದು ಸುಲಭವಲ್ಲ. ಗೀಸರ್ ಬಳಕೆ ಅಗತ್ಯವಾಗಿರುತ್ತದೆ. ಆದರೆ ವಿದ್ಯುತ್ ದರಕ್ಕೆ ಹೆದರಿ ಜನರು ಗೀಸರ್ ನ ತಾಪಮಾನವನ್ನು ಕಡಿಮೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ವಿದ್ಯುತ್ ಉಳಿತಾಯವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ. ಆದರೆ ಇದು ನಿಜವಲ್ಲ. ವಿದ್ಯುತ್ ಉಳಿಸುವ ಸಲುವಾಗಿ, ನೀವು ಮಾಡುವ ಕೆಲಸದಿಂದ ಗೀಸರ್ ನಿಂದ ಬರುವ ನೀರು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು.
ಅನೇಕ ರೋಗಗಳಿಗೆ ಕಾರಣವಾಗಬಹುದು :
ಚಳಿಗಾಲದಲ್ಲಿ ಗೀಸರ್ ನೀರು ಹೆಚ್ಚಾಗಿ ತಣ್ಣಗಾಗುತ್ತದೆ. ಅಂಥಹ ಪರಿಸ್ಥಿತಿಯಲ್ಲಿ, ಜನರು ವಿದ್ಯುತ್ ಉಳಿಸಲು ಗೀಸರ್ ನ ತಾಪಮಾನವನ್ನು ಕಡಿಮೆ ಮಾಡುತ್ತಾರೆ. ಆದರೆ, ಇದು ಅಪಾಯಕಾರಿಯಾಗಬಹುದು. ಗೀಸರ್ ನೀರಿನಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಅಪಾಯ ಹೆಚ್ಚಾಗಬಹುದು. ಈ ಬ್ಯಾಕ್ಟೀರಿಯಾಗಳು ಮತ್ತು ವೈರಸ್‌ಗಳು ಅನೇಕ ರೀತಿಯ ಕಾಯಿಲೆಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ : ವಾಟ್ಸಾಪ್‌ನಲ್ಲಿ ಇನ್ಮುಂದೆ ಒರಿಜಿನಲ್ ಕ್ವಾಲಿಟಿ ಫೋಟೋಸ್, ವಿಡಿಯೋಸ್ ಶೇರ್ ಮಾಡಬಹುದು
ಗೀಸರ್ ನೀರಿನಲ್ಲಿರುತ್ತದೆ ಈ ಬ್ಯಾಕ್ಟೀರಿಯಾ :
ಗೀಸರ್ ನೀರು ವಿಶೇಷ ರೀತಿಯ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಇದನ್ನು ಲೀಜಿಯೋನೆಲ್ಲಾ ಎಂದು ಕರೆಯಲಾಗುತ್ತದೆ. ಈ ಬ್ಯಾಕ್ಟೀರಿಯಾ ಚಳಿಗಾಲದಲ್ಲಿ ಗೀಸರ್ ನೀರಿನಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ. ಗೀಸರ್ ನೀರು 50 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಿದ್ದರೆ ಈ ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯುತ್ತದೆ.
ಸೇಫ್ ಕಿಡ್ಸ್ ಕೆನಡಾ ಅಭಿಯಾನ :
2000 ರ ದಶಕದ ಆರಂಭದಲ್ಲಿ ಕೆನಡಾದಲ್ಲಿ ಲೀಜಿಯೋನೆಲ್ಲಾ ಪ್ರಕರಣಗಳು ಹೆಚ್ಚಾದವು. ಈ ಕಾಯಿಲೆಯಿಂದ ಅನೇಕ ಜನರು ಸಾವನ್ನಪ್ಪಿದರು. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಕೆನಡಾ ಸರ್ಕಾರವು 'ಸೇಫ್ ಕಿಡ್ಸ್ ಕೆನಡಾ ಅಭಿಯಾನ'ವನ್ನು ಪ್ರಾರಂಭಿಸಿತು. ಮನೆಗಳಲ್ಲಿ ಬಳಸುವ ನೀರಿನ ತಾಪಮಾನವನ್ನು ಕಡಿಮೆ ಮಾಡದಂತೆ ಜನರಿಗೆ ಅರಿವು ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿತ್ತು. ಅಭಿಯಾನದ ಪ್ರಕಾರ, ಮನೆಗಳಲ್ಲಿ ಗೀಸರ್ ನೀರಿನ ತಾಪಮಾನವು 49 ರಿಂದ 60 ಡಿಗ್ರಿಗಳ ನಡುವೆ ಇರಬೇಕು. ಹಾಗಾದಾಗ ಲೀಜಿಯೋನೆಲ್ಲಾ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಬಹುದು.
ಇದನ್ನೂ ಓದಿ : 35KM ಮೈಲೇಜ್ ನೀಡುವ 5 ಸೀಟರ್ ಕಾರು: ಅದ್ಭುತ ವೈಶಿಷ್ಟ್ಯದ ಜೊತೆ ಅತೀ ಕಡಿಮೆ ಬೆಲೆಯಲ್ಲಿ ಲಭ್ಯ- ಖರೀದಿಗೆ ಇದು ಬೆಸ್ಟ್ ಟೈಂ
ಎಷ್ಟಿರಬೇಕು ಗೀಸರ್ ನ ಟೆಂಪರೇಚರ್ :
ಗೀಸರ್ ತಾಪಮಾನ ಎಷ್ಟಿರಬೇಕು ಎನ್ನುವುದು ಪ್ರಮುಖ ಪ್ರಶ್ನೆಯಾಗಿದೆ. ಚಳಿಗಾಲದಲ್ಲಿ ಗೀಸರ್ ತಾಪಮಾನವನ್ನು 60 ರಿಂದ 65 ಡಿಗ್ರಿಗಳಲ್ಲಿ ಇಡಬೇಕು. ಇದು ಲೀಜಿಯೋನೆಲ್ಲಾ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ತಡೆಯಬಹುದು. ಬೇಸಿಗೆಯಲ್ಲಿ, ಗೀಸರ್ ತಾಪಮಾನವನ್ನು 50 ರಿಂದ 55 ಡಿಗ್ರಿಗಳಲ್ಲಿ ಇರಿಸಬಹುದು. ಆದರೆ, ಗೀಸರ್ 70-75 ಡಿಗ್ರಿಗಿಂತ ಹೆಚ್ಚು ತಾಪಮಾನದಲ್ಲಿ ಕೆಲಸ ಮಾಡಬಾರದು. ಇದು ಗೀಸರ್‌ನ ಟ್ಯಾಂಕ್ ಮತ್ತು ಪೈಪ್‌ಗಳಿಗೆ ಹಾನಿಯನ್ನು ಉಂಟುಮಾಡಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ