ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ!
Good News: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯನ್ನು ಬಹುಮಟ್ಟಿಗೆ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹೆಮ್ಮೆಯ `ನಮ್ಮ ಮೆಟ್ರೊ` ಇದೀಗ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ.
Namma Metro Passengers: ಬೆಂಗಳೂರು ಮೆಟ್ರೋ ನಿಗಮ ನಮ್ಮ ನಿಮ್ಮೆಲ್ಲರ ಹೆಮ್ಮೆಯ "ನಮ್ಮ ಮೆಟ್ರೋ" ಸುರಕ್ಷಿತ ವೇಗ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯ ನಡುವೆಯೂ ಪ್ರಯಾಣಿಕರನ್ನು ಆರಾಮದಾಯಕವಾಗಿ ವೇಗವಾಗಿ ಗಮ್ಯಸ್ಥಾನ ತಲುಪಿಸುವಲ್ಲಿ ಪರಿಣಾಮಕಾರಿ ಸಾರಿಗೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಮಂಡಳಿ (BMRCL) ಇದೀಗ ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದು, ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಒದಗಿಸುವುದಾಗಿ ತಿಳಿಸಿದೆ.
ಏನಿದು ನಮ್ಮ ಮೆಟ್ರೋದ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್? ಇದರ ಪ್ರಯೋಜನವೇನು? ಇದನ್ನು ಎಲ್ಲಿ ಹೇಗೆ ಪಡೆಯಬಹುದು ಮತ್ತು ಅದಕ್ಕಾಗಿ ಎಷ್ಟು ಶುಲ್ಕವನ್ನು ಪಾವತಿಸಬೇಕು ಎಂಬಿತ್ಯಾದಿ ಮಾಹಿತಿಯನ್ನು ತಿಳಿಯಲು ಮುಂದೆ ಓದಿ...
ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್:
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್‌ಗಳ ಸೌಲಭ್ಯವನ್ನು ಒದಗಿಸುತ್ತದೆ. ಪ್ರಯಾಣಿಕರು ತಮ್ಮ ಲಗೇಜ್ ಇಟ್ಟು ಬೇರೆಡೆ ತೆರಳಬೇಕಾದರೆ ಇದಕ್ಕಾಗಿ ಸ್ನೇಹಿತರು, ಸಂಬಂಧಿಕರ ಮನೆಯನ್ನು ಹುಡುಕುವ ಅಗತ್ಯವಿಲ್ಲ. ಈ ಲಾಕರ್‌ಗಳಲ್ಲಿ ನಿಮ್ಮ ಲಗೇಜ್ ಇಟ್ಟು ಆರಾಮಾಗಿ ನಿಮ್ಮ ಕೆಲಸ ಮುಗಿಸಿ ಬರಬಹುದು.
ಇದನ್ನೂ ಓದಿ- ಎಚ್ಚರ..! ಎಚ್ಚರ! UPI Refund ಹೆಸರಿನಲ್ಲಿ ಖಾಲಿಯಾದೀತು ಖಾತೆ..!
ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಹೇಗೆ ಕಾರ್ಯ ನಿರ್ವಹಿಸುತ್ತದೆ?
ನಮ್ಮ ಮೆಟ್ರೋ ಪ್ರಯಾಣಿಕರು ಸೇಫ್ ಕ್ಲಾಕ್ ಸಂಸ್ಥೆಯ ಸ್ಮಾರ್ಟ್ ಡಿಜಿಟಲ್ ಲಾಕರ್ನಲ್ಲಿ ತಮ್ಮ ಲಗೇಜ್ ಇಟ್ಟು ನಿಶ್ಚಿಂತೆಯಿಂದ ತಮ್ಮ ಕೆಲಸ ಮುಗಿಸಿ ಬರಬಹುದು. ಪ್ರಯಾಣಿಕರು ಕಿಯೋಸ್ಟ್‌ನಲ್ಲಿನ ಆಯ್ಕೆಗಳನ್ನು ಭರ್ತಿ ಮಾಡಿ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ಇದರಲ್ಲಿ ಒಂದು ಓಟಿಪಿ ಬರುತ್ತದೆ. ಇದನ್ನು ಕಿಯೋಸ್ಟ್‌ನಲ್ಲಿ ನಮೂದಿಸಿದ ಕೂಡಲೇ ಪ್ರಯಾಣಿಕರಿಗೆ ತಮ್ಮ ಬ್ಯಾಗ್‌ಗಳನ್ನು ಇಡಲು ಡಿಜಿಟಲ್ ಲಾಕರ್ ಲಭ್ಯವಾಗುತ್ತದೆ. ವಿಶೇಷವೆಂದರೆ ಪ್ರಯಾಣಿಕರೇ ಬಂದು ಮತ್ತೆ ಓಟಿಪಿ ನಮೂದಿಸಿ ಈ ಲಾಕ್ ತೆರೆಯುವವರೆಗೂ "ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್" ತೆರೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಪ್ರಯಾಣಿಕರು ಸೇಫ್ ಲಾಕ್ ನಲ್ಲಿ ಇಟ್ಟಿರುವ ತಮ್ಮ ಲಗೇಜ್ ಬಗ್ಗೆ ಚಿಂತಿಸುವ ಅಗತ್ಯವಿರುವುದಿಲ್ಲ.
ಸ್ಮಾರ್ಟ್ ಡಿಜಿಟಲ್ ಲಾಕರ್ಗೆ ತಗಲುವ ವೆಚ್ಚ:
ಗಮನಾರ್ಹವಾಗಿ ಈ ಸ್ಮಾರ್ಟ್ ಡಿಜಿಟಲ್ ಲಾಕರ್ನಲ್ಲಿ ಸಾಮಾನ್ಯ ಗಾತ್ರದ 4ರಿಂದ 5 ಬ್ಯಾಗ್‌ಗಳನ್ನು ಇಡಬಹುದಾಗಿದೆ. ಈ ಲಾಕರ್ನಲ್ಲಿ 6 ಗಂಟೆಗಳ ಕಾಲ 2-3 ಬ್ಯಾಗ್‌ಗಳನ್ನು ಇಡಲು 70 ರೂ. ಶುಲ್ಕ ಪಾವತಿಸಬಹುದು. ಇದೇ ಸಮಯದಲ್ಲಿ ನಾಲ್ಕೈದು ಬ್ಯಾಗ್‌ಗಳನ್ನು ಇಡಲು 100 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಅದೇ ರೀತಿ 12 ಗಂಟೆಗಳ ಕಾಲ ಲಗೇಜ್ ಇಡಲು 120 ರೂ. ಗಳಿಂದ 160 ರೂ.ಗಳವರೆಗೆ ಪಾವತಿಸಬೇಕಾಗಬಹುದು.
BSNLನಿಂದ 84 ದಿನಗಳ ರೀಚಾರ್ಜ್ ಯೋಜನೆಯಲ್ಲಿ ಹೆಚ್ಚುವರಿ ಡೇಟಾ ಕೊಡುಗೆ..!
ನಮ್ಮ ಮೆಟ್ರೋ ಆರಂಭಿಸಿರುವ ಸೇಫ್ ಲಾಕ್ ನ ಸ್ಮಾರ್ಟ್ ಡಿಜಿಟಲ್ ಲಗೇಜ್ ಲಾಕರ್ ಸೌಲಭ್ಯ ಸದ್ಯ ನೇರಳೆ ಮತ್ತು ಗ್ರೀನ್ ಮೆಟ್ರೋಗಳನ್ನು ಲಿಂಕ್ ಮಾಡುವ ಮೆಜೆಸ್ಟಿಕ್ ನಿಲ್ದಾಣ ಹೊರತುಪಡಿಸಿ ಚಿಕ್ಕಪೇಟೆ ಹಾಗೂ ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣಗಳಲ್ಲಿ ಮಾತ್ರ ಲಭ್ಯವಿದೆ. ಶೀಘ್ರದಲ್ಲೇ ಈ ಸೇವೆಯನ್ನು ನಮ್ಮ ಮೆಟ್ರೋದ ಎಲ್ಲಾ ನಿಲ್ದಾಣಗಳಲ್ಲೂ ಪರಿಚಯಿಸಲು ಸೇಫ್ ಲಾಕ್ ಸಂಸ್ಥೆ ಯೋಜನೆ ರೂಪಿಸಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ