NASA: ಭೂಮಿಯಿಂದ ಅತಿಹೆಚ್ಚು ದೂರದಲ್ಲಿರುವ ನಕ್ಷತ್ರ ಕಂಡುಹಿಡಿದ ಅಮೆರಿಕ..!
ಬಾಹ್ಯಾಕಾಶದಲ್ಲಿ ಮಾನವನ ಕಣ್ಣು ಎಂದೇ ಗುರುತಿಸುವ ‘ಹಬಲ್’ ಟೆಲಿಸ್ಕೋಪ್ ಮಹತ್ವದ ಸಾಧನೆ ಮಾಡಿದೆ.
ನವದೆಹಲಿ: ಬಾಹ್ಯಾಕಾಶದಲ್ಲಿ ಮಿನಮಿನ ಮಿನುಗುವ ನಕ್ಷತ್ರಗಳು ನಮ್ಮೆಲ್ಲರ ಗಮನ ಸೆಳೆಯುತ್ತವೆ. ಹೀಗಾಗಿ ವಿಜ್ಞಾನಿಗಳು ನಕ್ಷತ್ರಗಳ ಹಿಂದೆ ಬಿದ್ದು ಸಾವಿರಾರು ವರ್ಷಗಳೇ ಉರುಳಿವೆ. ನಮ್ಮ ಸೂರ್ಯನು ಕೂಡ ಒಂದು ನಕ್ಷತ್ರ. ಹೀಗೆ ಸೂರ್ಯ ನಮಗೆ ಅತ್ಯಂತ ಸಮೀಪದ ನಕ್ಷತ್ರವಾಗಿದ್ದರೆ, ಅತ್ಯಂತ ದೂರದ ನಕ್ಷತ್ರ ಯಾವುದು..? ಅನ್ನೋ ಪ್ರಶ್ನೆಗೆ ಈಗ ಉತ್ತರ ಹುಡುಕಿದ್ದಾರೆ ‘ನಾಸಾ’ ವಿಜ್ಞಾನಿಗಳು(NASA Scientists).
Hubble Telescope) ಮಹತ್ವದ ಸಾಧನೆ ಮಾಡಿದೆ. ಅದೇನೆಂದರೆ ಸುಮಾರು 27 ಬಿಲಿಯನ್ ಲೈಟ್ ಇಯರ್ಸ್, ಅಂದರೆ ಬೆಳಕಿನ ವೇಗದಲ್ಲಿ ಸಾಗಿದರೂ 2 ಸಾವಿರದ 700 ಕೋಟಿ ವರ್ಷ ಸಮಯ ತೆಗೆದುಕೊಳ್ಳುವಷ್ಟು ದೂರದಲ್ಲಿ ಒಂದು ನಕ್ಷತ್ರವನ್ನು ಪತ್ತೆಹಚ್ಚಿದೆ ‘ನಾಸಾ’ ಟೆಲಿಸ್ಕೋಪ್ ‘ಹಬಲ್’.
ಇದನ್ನೂ ಓದಿ: Battery Fan: ವಿದ್ಯುತ್ ಇಲ್ಲದೆ 15 ಗಂಟೆ ಕಾರ್ಯನಿರ್ವಹಿಸುತ್ತೆ ಈ ಫ್ಯಾನ್!
ವಿಜ್ಞಾನ ಲೋಕದ ಸಾಧನೆ
ಬಹುಮುಖ್ಯ ವಿಚಾರ ಏನೆಂದರೆ ಟೆಲಿಸ್ಕೋಪ್(NASA’s Hubble Telescopy) ಮೂಲಕ ವಿಜ್ಞಾನಿಗಳು ಈಗ ನಕ್ಷತ್ರ ಕಂಡು ಹಿಡಿದಿದ್ದರೂ, ಅದು ವಿಶ್ವದ ಆರಂಭಿಕ ದಿನಗಳನ್ನು ವಿಜ್ಞಾನ ಲೋಕಕ್ಕೆ ಪರಿಚಯಿಸುತ್ತಿದೆ. ಅಂದರೆ ಬೆಳಕಿನ ವೇಗದಲ್ಲಿ ನಾವು ಆ ನಕ್ಷತ್ರದ ಕಡೆಗೆ ಸಾಗಿದರೂ, ಆ ನಕ್ಷತ್ರವನ್ನು ನಾವು ತಲುಪುವ ಹೊತ್ತಿಗೆ ಆ ನಕ್ಷತ್ರದ ಆಯಸ್ಸೇ ಮುಗಿದೇ ಹೋಗುತ್ತದೆ. ಹೀಗಾಗಿ ವಿಜ್ಞಾನಿಗಳು ಭೂಮಿ(Earth)ಯಿಂದ ನೋಡುತ್ತಿರುವುದು ಆ ನಕ್ಷತ್ರದ ಬಾಲ್ಯಾವಸ್ಥೆಯನ್ನು. ಈ ಮೂಲಕ ಇಡೀ ಜಗತ್ತೇ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತಹ ಸಾಧನೆಯನ್ನು ಮಾಡಿದೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನಾಸಾ’.
Advanced Equipment) ತೆಗೆದಿರುವ ಫೋಟೋ ಸಹಾಯದಿಂದ ನಕ್ಷತ್ರ ಲೋಕದ ಚಿತ್ರಣವೇ ಬದಲಾಗುವ ಸಾಧ್ಯತೆ ಇದೆ. ಏಕೆಂದರೆ ಈವರೆಗೂ ಬಾಹ್ಯಾಕಾಶ ವಿಜ್ಞಾನಿಗಳಿಗೆ ನಕ್ಷತ್ರಗಳ ಹುಟ್ಟಿನ ಬಗ್ಗೆ ಸ್ಪಷ್ಟ ಚಿತ್ರಣವೇ ಸಿಕ್ಕಿರಲಿಲ್ಲ. ಆದರೆ ಸದ್ಯದ ಸಂಶೋಧನೆ ಹೊಸ ಬದಲಾವಣೆಗೆ ನಾಂದಿ ಹಾಡುವ ಸಾಧ್ಯತೆ ಇದೆ. ಹೀಗಾಗಿ ‘ಹಬಲ್’ ಟೆಲಿಸ್ಕೋಪ್ ಕಳುಹಿಸಿರುವ ಫೋಟೋ ಬಗ್ಗೆ ‘ನಾಸಾ’ ಹೆಚ್ಚಿನ ಅಧ್ಯಯನ ಆರಂಭಿಸಿದೆ.
ಇದನ್ನೂ ಓದಿ: Tesla Cars: ಒಂದೇ ವರ್ಷದಲ್ಲಿ 10 ಲಕ್ಷ ಎಲೆಕ್ಟ್ರಿಕ್ ಕಾರು ಮಾರಾಟ, ಟೆಸ್ಲಾ ದಾಖಲೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.