ಭಾರತದಲ್ಲಿ ಪಾಸ್‌ವರ್ಡ್ ಹಂಚಿಕೆಯನ್ನು ಕೊನೆಗೊಳಿಸಿದ ನೆಟ್‌ಫ್ಲಿಕ್ಸ್: ಇಲ್ಲಿದೆ ಫುಲ್ ಡೀಟೈಲ್ಸ್
Netflix Ends Password Sharing In India: ಸ್ಟ್ರೀಮಿಂಗ್ ಅಪ್ಲಿಕೇಶನ್ ನೆಟ್‌ಫ್ಲಿಕ್ಸ್ ಭಾರತದಲ್ಲಿ ಮತ್ತು ಇಂಡೋನೇಷ್ಯಾ, ಕ್ರೊಯೇಷಿಯಾ ಮತ್ತು ಕೀನ್ಯಾದಂತಹ ಇತರ ಮಾರುಕಟ್ಟೆಗಳಲ್ಲಿ ಜುಲೈ 20, 2023 ರಿಂದ ಖಾತೆ ಹಂಚಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸುತ್ತದೆ,
Netflix Ends Password Sharing In India: ಆನ್ಲೈನ್ ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ ಭಾರತದಲ್ಲಿ ಪಾಸ್‌ವರ್ಡ್ ಶೇರಿಂಗ್ ಸೌಲಭ್ಯವನ್ನು ಕೊನೆಗೊಳಿಸುವುದಾಗಿ ಘೋಷಿಸಿದೆ. ಈ ಮೂಲಕ ಸ್ನೇಹಿತರ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಬಳಸಿ ತಮ್ಮ ನೆಚ್ಚಿನ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಿದ್ದವರಿಗೆ ಕಂಪನಿ ದೊಡ್ಡ ಹೊಡೆತವನ್ನು ನೀಡಿದೆ.
ಹೌದು, ಸ್ಟ್ರೀಮೀಂಗ್ ಅಪ್ಲಿಕೇಶನ್ ನೆಟ್‌ಫ್ಲಿಕ್ಸ್ ಭಾರತ ಮತ್ತು ಇತರ ಮಾರುಕಟ್ಟೆಗಳಲ್ಲಿ ಖಾತೆ ಹಂಚಿಕೆ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಇನ್ನು ಮುಂದೆ ಪ್ರತಿ ಖಾತೆಯನ್ನು ಒಂದು ಮನೆಯವರು ಮಾತ್ರ ಬಳಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ನೆಟ್‌ಫ್ಲಿಕ್ಸ್, ನೆಟ್‌ಫ್ಲಿಕ್ಸ್ ಖಾತೆಯು ಒಂದು ಮನೆಯ ಬಳಕೆಗಾಗಿ. ಆ ಮನೆಯಲ್ಲಿ ವಾಸಿಸುವ ಪ್ರತಿಯೊಬ್ಬರೂ ಅವರು ಎಲ್ಲೇ ಇದ್ದರೂ - ಮನೆಯಲ್ಲಿ, ಪ್ರಯಾಣದಲ್ಲಿ, ರಜೆಯ ಮೋಜಿನಲ್ಲಿ ಹೀಗೆ ಎಲ್ಲಿದ್ದರೂ ಪ್ರೊಫೈಲ್ ಅನ್ನು ವರ್ಗಾಯಿಸಿ ಮತ್ತು ಪ್ರವೇಶ ಮತ್ತು ಸಾಧನಗಳನ್ನು ನಿರ್ವಹಿಸುವಂತಹ ಹೊಸ ವೈಶಿಷ್ಟ್ಯಗಳ ಲಾಭವನ್ನು ಪಡೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ- ಈ ಟ್ರಿಕ್ ಬಳಸಿದರೆ ಮೊಬೈಲ್ ಇಂಟರ್ನೆಟ್ ಇಲ್ಲದಿದ್ದರೂ ಕಾರ್ಯನಿರ್ವಹಿಸುತ್ತೆ ವಾಟ್ಸಾಪ್!
ಭಾರತದಲ್ಲಿ ತಮ್ಮ ಮನೆಯ ಹೊರಗೆ ಎಂದರೆ ತಮ್ಮ ಕುಟುಂಬಸ್ಥರನ್ನು ಬಿಟ್ಟು ಹೊರಗಿನವರಿಗೆ ನೆಟ್‌ಫ್ಲಿಕ್ಸ್ ಪಾಸ್‌ವರ್ಡ್ ಅನ್ನು ಹಂಚಿಕೊಳ್ಳುತ್ತಿರುವ ಗ್ರಾಹಕರಿಗೆ ಇಂದಿನಿಂದ ಇಮೇಲ್‌ಗಳ ಮೂಲಕ ಮಾಹಿತಿ ನೀಡಲಾಗುವುದು ಎಂದು ಕಂಪನಿ ಹೇಳಿದೆ.
ಈ ಕುರಿತಂತೆ ಹೇಳಿಕೆ ನೀಡಿರುವ ನೆಟ್‌ಫ್ಲಿಕ್ಸ್ , ನಾವು ನಮ್ಮ ಸದಸ್ಯರಿಗೆ ಅನೇಕ ಮನರಂಜನಾ ಆಯ್ಕೆಗಳನ್ನು ಗುರುತಿಸಿದ್ದೇವೆ. ಈ ನಿಟ್ಟಿನಲ್ಲಿ ವಿವಿಧ ರೀತಿಯ ಹೊಸ ಚಲನಚಿತ್ರಗಳು ಮತ್ತು ಟಿವಿ ಶೋಗಳಲ್ಲಿ ಹೆಚ್ಚು ಹೂಡಿಕೆ ಮಾಡುವುದನ್ನು ಮುಂದುವರಿಸುತ್ತೇವೆ. ಗ್ರಾಹಕರ ಅಭಿರುಚಿ, ಮನಸ್ಥಿತಿಗೆ ತಕ್ಕಂತೆ ಅವರ ಭಾಷೆಯಲ್ಲಿಯೇ ಅವರ ನೆಚ್ಚಿನ ಕಾರ್ಯಕ್ರಮವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಲು ಸಾಧ್ಯವಾಗುತ್ತದೆ ಎಂದು ಅದು ಹೇಳಿಕೊಂಡಿದೆ.
ಇದನ್ನೂ ಓದಿ- 10 ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಗೆ ಗೆ 80 ಸೆ.ಮೀ LED Smart TV! ಮುಗಿ ಬಿದ್ದು ಖರೀದಿಸುತ್ತಿರುವ ಗ್ರಾಹಕರು
ನೀವೂ ಕೂಡ ನೆಟ್‌ಫ್ಲಿಕ್ಸ್ ಖಾತೆಯನ್ನು ಹೊಂದಿದ್ದರೆ ಈಗಲೇ ಈ ಕೆಲಸ ಮಾಡಿ:
ನೀವೂ ಕೂಡ ನೆಟ್‌ಫ್ಲಿಕ್ಸ್ ಖಾತೆಯನ್ನು ಹೊಂದಿದ್ದರೆ ನಿಮ್ಮ ಖಾತೆಯಿಂದ ಬೇರೆ ಯಾರಾದರೂ ಲಾಗ್ ಇನ್ ಆಗಿದ್ದಾರೆಯೇ ಎಂಬುದನ್ನೂ ಕೂಡಲೇ ಪರಿಶೀಲಿಸಿ. ಇದಕ್ಕಾಗಿ ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯ ಭದ್ರತೆ ಮತ್ತು ಗೌಪ್ಯತೆ ಸೆಟ್ಟಿಂಗ್ಗಳಿಗೆ ಹೊಡಿ, ಪ್ರವೇಶ ಮತ್ತು ಸಾಧನಗಳನ್ನು ನಿರ್ವಹಿಸಿ ಎಂಬ ಆಯ್ಕೆಗೆ ಹೋಗಿ. ಇಲ್ಲಿ ಯಾವೆಲ್ಲಾ ಸಾಧನಗಳಲ್ಲಿ ನಿಮ್ಮ ಅಕೌಂಟ್ ಲಾಗ್ ಇನ್ ಮಾಡಲಾಗಿದೆ ಎಂಬುದನ್ನೂ ನೀವು ಕಾಣಬಹುದು. ಇದರಲ್ಲಿ ಯಾವ ಸಾಧನಗಳಲ್ಲಿ ನೀವು ನೆಟ್‌ಫ್ಲಿಕ್ಸ್ ಲಾಗ್ ಇನ್ ಬಯಸುವುದಿಲ್ಲವೋ ಅಂತಹ ಸಾಧನಗಳಿಂದ ಸೈನ್ ಔಟ್ ಮಾಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.