ಎಚ್ಚರ! ನೀವೂ ಟಾಯ್ಲೆಟ್ ನಲ್ಲಿ ಮೊಬೈಲ್ ಫೋನ್ ಬಳಸುತ್ತೀರಾ? ಈ ವರದಿ ತಪ್ಪದೆ ಓದಿ!

Phone In Toilet: 10 ರಲ್ಲಿ 6 ಜನರು ತಮ್ಮ ಫೋನ್ ಅನ್ನು ವಾಶ್‌ರೂಮ್‌ಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಅವರಲ್ಲಿ ಬಹುತೇಕರು ಯುವಕರಾಗಿದ್ದಾರೆ ಎನ್ನಲಾಗಿದೆ.  

Written by - Nitin Tabib | Last Updated : Jul 19, 2023, 05:20 PM IST
  • ಶೌಚಾಲಯದಲ್ಲಿ ಫೋನ್ ಬಳಸುವುದರಿಂದ, ಅನೇಕ ವೈರಸ್‌ಗಳು ಅದರ ಮೇಲೆ ಅಂಟಿಕೊಳ್ಳುತ್ತವೆ,
  • ಇಂತಹ ಪರಿಸ್ಥಿತಿಯಲ್ಲಿ, ನಾವು ಹೊರಗೆ ಹೋಗಿ ಕೈಗಳನ್ನು ಸ್ವಚ್ಛಗೊಳಿಸುತ್ತೇವೆ, ಆದರೆ ಫೋನ್ ಅನ್ನು ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ,
  • ಇದರಿಂದಾಗಿ ಈ ಸೂಕ್ಷ್ಮಜೀವಿಗಳು ಕೈಗಳಿಂದ ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಈ ಕಾರಣದಿಂದಾಗಿ, ಹೊಟ್ಟೆಯ ತೊಂದರೆಗಳು ಉಂಟಾಗಬಹುದು.
ಎಚ್ಚರ! ನೀವೂ ಟಾಯ್ಲೆಟ್ ನಲ್ಲಿ ಮೊಬೈಲ್ ಫೋನ್ ಬಳಸುತ್ತೀರಾ? ಈ ವರದಿ ತಪ್ಪದೆ ಓದಿ! title=

ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲಿ ನೋಡಿದರೂ ಎಲ್ಲರ ಕೈಯಲ್ಲೂ  ನಿಮಗೆ ಮೊಬೈಲ್ ಫೋನ್ ಕಾಣಸಿಗುತ್ತದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಬೆಳಗ್ಗಿನ ಸಮಯ ಆರಂಭವಾಗುವುದು ಫೋನಿನಿಂದಲೇ. ಜನರು ಫೋನ್‌ಗೆ ಅಡಿಕ್ಟ್ ಆಗಿದ್ದಾರೆ, ಮೊಬೈಲ್  ಇಲ್ಲದೆ ಸ್ವಲ್ಪ ಸಮಯ ಕಳೆಯುವುದು ಕೂಡ ಕಷ್ಟ ಎಂಬಂತ ಕಾಲ ಇದು, ಅಷ್ಟೇ ಯಾಕೆ ಕೆಲವರಂತೂ  ತಮ್ಮ ಫೋನ್‌ಗಳನ್ನು ವಾಶ್‌ರೂಮ್‌ಗೆ ಸಹ ತೆಗೆದುಕೊಂಡು ಹೋಗುತ್ತಾರೆ.

ಹಿಂದಿನ ಕಾಲದಲ್ಲಿ ವಾಶ್ ರೂಂನಲ್ಲಿ ಓದಲು ದಿನಪತ್ರಿಕೆ, ನಿಯತಕಾಲಿಕೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು, ಆದರೆ ಇಂದು ಫೋನ್ ಅದರ ಸ್ಥಾನವನ್ನು ಪಡೆದುಕೊಂಡಿದೆ, ಆದರೆ ನಿಮ್ಮ ಈ ಅಭ್ಯಾಸವು ನಿಮಗೆ ಅನಾರೋಗ್ಯವನ್ನುಂಟುಮಾಡುತ್ತದೆ ಮತ್ತು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು  ನಿಮಗೆ ತಿಳಿದಿದೆಯೇ? .

ಇದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಆರೋಗ್ಯ ತಜ್ಞರ ಪ್ರಕಾರ, ಟಾಯ್ಲೆಟ್‌ಗೆ ಕೊಂಡೊಯ್ದ ನಂತರ ವೈರಸ್-ಬ್ಯಾಕ್ಟೀರಿಯಾಗಳು ಫೋನ್‌ನಲ್ಲಿ ಅಂಟಿಕೊಳ್ಳುವ ಸಾಧ್ಯತೆ ಇದೆ, ಅದು ನಿಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು. ಆಸನದ ಮೇಲೆ ಹಲವು ವಿಧದ ವೈರಸ್-ಬ್ಯಾಕ್ಟೀರಿಯಾಗಳಿರಬಹುದು ಮತ್ತು ವಾಶ್‌ರೂಮ್‌ನಲ್ಲಿರುವ ಬಕೆಟ್-ಮಗ್‌ನಂತಹ ವಸ್ತುಗಳು ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ವಾಶ್ ರೂಂನಲ್ಲಿ ಅದನ್ನು ಮುಟ್ಟಿದಾಗ ಸುತ್ತಮುತ್ತಲಿನ ಬ್ಯಾಕ್ಟೀರಿಯಾಗಳು ಮೊಬೈಲ್ ಫೋನ್ ಗೆ ಅಂಟಿಕೊಳ್ಳುತ್ತವೆ.

ಒಂದು ಅಧ್ಯಯನದಲ್ಲಿ, ಫೋನ್‌ನಲ್ಲಿ E.coli ಮತ್ತು ಇತರ ಸೂಕ್ಷ್ಮಜೀವಿಗಳ ಉಪಸ್ಥಿತಿಯನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಸರಾಸರಿ ಸ್ಮಾರ್ಟ್‌ಫೋನ್ ಪರದೆಯು ಟಾಯ್ಲೆಟ್ ಸೀಟ್‌ಗಿಂತ ಹೆಚ್ಚಿನ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ ಎಂದು ಯುಕೆ ಸಂಶೋಧನಾ ಅಧ್ಯಯನವು ಕಂಡುಹಿಡಿದಿದೆ.

ಆಘಾತಕಾರಿ ಅಂಕಿಅಂಶಗಳು ಮುನ್ನೆಲೆಗೆ ಬಂದಿವೆ
NordVPN ನಡೆಸಿದ ಸಂಶೋಧನೆಯಲ್ಲಿ ಆಘಾತಕಾರಿ ಅಂಕಿ ಅಂಶಗಳು ಹೊರಬಿದ್ದಿವೆ. 10 ರಲ್ಲಿ 6 ಜನರು ತಮ್ಮ ಫೋನ್ ಅನ್ನು ವಾಶ್‌ರೂಮ್‌ಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ಅವರಲ್ಲಿ ಹೆಚ್ಚಿನವರು ಯುವಕರಾಗಿದ್ದಾರೆ ಎನ್ನಲಾಗಿದೆ. ಈ ಸಂಶೋಧನೆಯಲ್ಲಿ ಭಾಗವಹಿಸಿದವರಲ್ಲಿ ಶೇಕಡಾ 61.6 ರಷ್ಟು ಜನರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಟಾಯ್ಲೆಟ್ ಸೀಟ್ ಮೇಲೆ ಕುಳಿತು ಪರಿಶೀಲಿಸುವುದಾಗಿ ಒಪ್ಪಿಕೊಂಡಿದ್ದಾರೆ. ಇದರೊಂದಿಗೆ, ಮೂರನೇ ಒಂದು ಭಾಗದಷ್ಟು ಜನರು ಅಂದರೆ 33.9% ಜನರು ಸ್ನಾನಗೃಹದಲ್ಲಿ ಪ್ರಸ್ತುತ ವಿದ್ಯಮಾನಗಳನ್ನು ಓದುತ್ತಾರೆ. ಇದೇ ವೇಳೆ, ನಾಲ್ಕನೇ ಒಂದು ಭಾಗ ಅಂದರೆ 24.5% ಜನರು ತಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಗೆ ಸಂದೇಶ ಕಳುಹಿಸುತ್ತಾರೆ.

ಮಲಬದ್ಧತೆಯ ಅಪಾಯ
ಶೌಚಾಲಯದಲ್ಲಿ ಫೋನ್ ಬಳಸುವುದರಿಂದ, ಅನೇಕ ವೈರಸ್‌ಗಳು ಅದರ ಮೇಲೆ ಅಂಟಿಕೊಳ್ಳುತ್ತವೆ, ಇಂತಹ ಪರಿಸ್ಥಿತಿಯಲ್ಲಿ, ನಾವು ಹೊರಗೆ ಹೋಗಿ ಕೈಗಳನ್ನು ಸ್ವಚ್ಛಗೊಳಿಸುತ್ತೇವೆ, ಆದರೆ ಫೋನ್ ಅನ್ನು ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಈ ಸೂಕ್ಷ್ಮಜೀವಿಗಳು ಕೈಗಳಿಂದ ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಈ ಕಾರಣದಿಂದಾಗಿ, ಹೊಟ್ಟೆಯ ತೊಂದರೆಗಳು ಉಂಟಾಗಬಹುದು. 

ಸೋಂಕಿನ ಅಪಾಯ
ಶೌಚಾಲಯ ಅಥವಾ ಸ್ನಾನಗೃಹವು ಮನೆಯ ಕೆಲ ಸ್ಥಳಗಳಾಗಿದ್ದು, ಅಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಸಾರ್ವಕಾಲಿಕವಾಗಿ ವಾಸಿಸುತ್ತವೆ. ಟಾಯ್ಲೆಟ್ ಬಳಸಿದ ನಂತರ ಕೈ ತೊಳೆಯುವುದು ತುಂಬಾ ಮುಖ್ಯ, ಆದರೆ ನೀವು ಫೋನ್ ಅನ್ನು ಇಲ್ಲಿಗೆ ಕೊಂಡೊಯ್ದು ಅದನ್ನು ಸ್ಯಾನಿಟೈಜ್ ಮಾಡದೆ ಬಳಸಿದರೆ ಅದು ಸೋಂಕಿಗೆ ಕಾರಣವಾಗಬಹುದು.

ಇದನ್ನೂ ಓದಿ-ಖಾತೆಯಲ್ಲಿ 10 ಸಾವಿರ ರೂ.ಗಳೂ ಬ್ಯಾಲೆನ್ಸ್ ಹೊಂದಿರದ ವ್ಯಕ್ತಿಗೆ 9 ಕೋಟಿ ನೀಡಿದ ಏ‌ಟಿ‌ಎಮ್!

ಪೈಲ್ಸ್ ಸಮಸ್ಯೆ
ಫೋನ್ ಅನ್ನು ಶೌಚಾಲಯಕ್ಕೆ ತೆಗೆದುಕೊಂಡು, ನಾವು ಹೆಚ್ಚು ಸಮಯ ಕಳೆಯುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ, ದೀರ್ಘಕಾಲ ಕುಳಿತುಕೊಳ್ಳುವುದು ಗುದನಾಳದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ, ಇದು ಪೈಲ್ಸ್ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ-ಕೃತಕ ಸಿಹಿಹಾರಕದಿಂದ ಕ್ಯಾನ್ಸರ್ ಬರುತ್ತದೆಯೇ? ಯೆಸ್..ಯೆಸ್.. ನೋ..ನೋ ಎಂದ ಡಬ್ಲೂಹೆಚ್ಓ!

ಸ್ನಾಯು ಬಿಗಿತ
ಫೋನಿನ ಕಾರಣ, ನಾವು ಸ್ನಾನಗೃಹದಲ್ಲಿ ದೀರ್ಘಕಾಲ ಕುಳಿತುಕೊಳ್ಳುತ್ತೇವೆ, ಇದು ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನಮ್ಮ ಸ್ನಾಯುಗಳು ಬಿಗಿಯಾಗುತ್ತವೆ. ಈ ಕಾರಣದಿಂದಾಗಿ, ಮೊಣಕಾಲುಗಳಲ್ಲಿ ನೋವು ಸಹ ಸಂಭವಿಸಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News