Netflix: ನೀವೂ ಕೂಡ ನೆಟ್‌ಫ್ಲಿಕ್ಸ್ ಚಂದಾದಾರರಾಗಿದ್ದರೆ ಈ ಸುದ್ದಿ ನಿಮಗೆ ಮಹತ್ವದ್ದಾಗಿದೆ. ನೆಟ್‌ಫ್ಲಿಕ್ಸ್ ಚಂದಾದಾರರಿಗೆ ಮಾತ್ರವಲ್ಲ, ಸ್ನೇಹಿತರ ಐಡಿ ಬಳಸಿ ಉಚಿತವಾಗಿ ನೆಟ್‌ಫ್ಲಿಕ್ಸ್ ಬಳಸುವವರಿಗೆ ಶಾಕಿಂಗ್ ಸುದ್ದಿ ಇದಾಗಿದೆ. ನೆಟ್‌ಫ್ಲಿಕ್ಸ್ ಚಂದಾದಾರರು ಇನ್ನು ಮುಂದೆ ನೀವು ನಿಮ್ಮ ನೆಟ್‌ಫ್ಲಿಕ್ಸ್  ಖಾತೆಯ  ಪಾಸ್‌ವರ್ಡ್ ಅನ್ನು ಯಾರೊಂದಿಗಾದರೂ ಶೇರ್ ಮಾಡುವ ಮುನ್ನ ಖಂಡಿತವಾಗಿಯೂ ಒಮ್ಮೆ ಯೋಚಿಸಿ. ಇಲ್ಲದಿದ್ದರೆ, ನಷ್ಟವಾಗಬಹುದು. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ನೆಟ್‌ಫ್ಲಿಕ್ಸ್ ಹೊಸ ಆರ್ಥಿಕ ವರ್ಷದ ಮೊಲದ ತ್ರೈಮಾಸಿಕದಿಂದ ನೆಟ್‌ಫ್ಲಿಕ್ಸ್ ಚಂದಾದಾರರಿಕೆ ನಿಯಮಗಳಲ್ಲಿ ಮಹತ್ವದ ಬದಲಾವಣೆ ಮಾಡಲು ಹೊರಟಿದೆ. ಇದರನ್ವಯ ನೆಟ್‌ಫ್ಲಿಕ್ಸ್ ಈ ವರ್ಷದ ಏಪ್ರಿಲ್‌ನಿಂದ ಪಾಸ್‌ವರ್ಡ್ ಹಂಚಿಕೆ ಕುರಿತಂತೆ ಹೊಸ ನಿಯಮವನ್ನು ಜಾರಿಗೆ ತರಲಿದೆ.  ಇದು ನೆಟ್‌ಫ್ಲಿಕ್ಸ್ ಚಂದಾದಾರರ ಮೇಲೆ ನೇರ ಪರಿಣಾಮ ಬೀರಲಿದೆ.


ಇದನ್ನೂ ಓದಿ- ಎರಡು ಬಂಬಾಟ್ ಯೋಜನೆಗಳನ್ನು ಬಿಡುಗಡೆಗೊಳಿಸಿದ ಭಾರ್ತಿ ಏರ್ಟೆಲ್


ನೆಟ್‌ಫ್ಲಿಕ್ಸ್ ಕಂಪನಿಯು, ಹೊಸ ಆರ್ಥಿಕ ವರ್ಷ ಎಂದರೆ, 2023ರ ಏಪ್ರಿಲ್ ತಿಂಗಳಿನಿಂದ ತನ್ನ ವ್ಯವಹಾರವನ್ನು ಸುಧಾರಿಸುವ ದೃಷ್ಟಿಯಿಂದ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಸರಳವಾಗಿ ಹೇಳುವುದಾದರೆ, ಮೊದಲೆಲ್ಲಾ ನೆಟ್‌ಫ್ಲಿಕ್ಸ್ ಚಂದಾದಾರರು ತಮ್ಮ ಖಾತೆಯ ಪಾಸ್‌ವರ್ಡ್ ಅನ್ನು ಇತರರೊಂದಿಗೆ ಹಂಚಿಕೊಳ್ಳಬಹುದಾಗಿತ್ತು. ಒಂದೇ ಖಾತೆಯಲ್ಲಿ ಹಲವರು ಇದನ್ನು ಬಳಸಬಹುದಾಗಿತ್ತು. ಆದರೆ, ಏಪ್ರಿಲ್‌ನಿಂದ ಇದು ಸಾಧ್ಯವಾಗುವುದಿಲ್ಲ. ನೆಟ್‌ಫ್ಲಿಕ್ಸ್ ಏಪ್ರಿಲ್ 2023 ರಿಂದ ಪ್ಯಾಡ್ ಹಂಚಿಕೆ ವೈಶಿಷ್ಟ್ಯವನ್ನು ಹೊರತರುವುದಾಗಿ ಘೋಷಿಸಿದೆ ಮತ್ತು ಅಪ್ಲಿಕೇಶನ್‌ಗೆ ಆಯ್ಕೆಯನ್ನು ಸೇರಿಸುತ್ತದೆ. 


ಇದನ್ನೂ ಓದಿ- ಯೂಟ್ಯೂಬ್‌ನಲ್ಲಿ ವೀಡಿಯೊ ಲೈಕ್ ಮಾಡಿದರೂ ಹಣ ಸಿಗುತ್ತಾ?


ನೆಟ್‌ಫ್ಲಿಕ್ಸ್ ಪ್ಯಾಡ್ ಹಂಚಿಕೆ ವೈಶಿಷ್ಟ್ಯವೆಂದರೆ, ಪ್ಲಾಟ್‌ಫಾರ್ಮ್ ಸದಸ್ಯರಿಗೆ ತಮ್ಮ ಖಾತೆಯನ್ನು ಯಾವ ಸಾಧನಗಳನ್ನು ಬಳಸುತ್ತಿದೆ ಎಂಬುದನ್ನು ಪರಿಶೀಲಿಸುವ ಆಯ್ಕೆಯನ್ನು ಒದಗಿಸುತ್ತದೆ ಮತ್ತು ಪ್ರೊಫೈಲ್‌ಗಳನ್ನು ಹೊಸ ಖಾತೆಗೆ ವರ್ಗಾಯಿಸುವ ಆಯ್ಕೆಯನ್ನು ಸಹ ಹೊಂದಿರುತ್ತದೆ. ಒಂದು ಖಾತೆಯು ಒಬ್ಬ ಬಳಕೆದಾರರಿಗೆ ಮಾತ್ರ ಎಂದು ಕಂಪನಿ ಹೇಳುತ್ತದೆ. ಖಾತೆಯ ಪಾಸ್ ವರ್ಡ್ ಬೇರೆಯವರಿಗೆ ನೀಡಿದರೆ ಹಣ ಪಾವತಿಸಬೇಕಾಗುತ್ತದೆ.  ಹಾಗಾಗಿ, ಮುಂದಿನ ದಿನಗಳಲ್ಲಿ ನಿಮ್ಮ ನೆಟ್‌ಫ್ಲಿಕ್ಸ್ ಖಾತೆಯ ಪಾಸ್‌ವರ್ಡ್ ಅನ್ನು ಇತರರೊಂದಿಗೆ ಶೇರ್ ಮಾಡುವ ಮುನ್ನ ಒಮ್ಮೆ ಯೋಚಿಸುವುದು ಅಗತ್ಯವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.