ಬೆಂಗಳೂರು : WhatsApp ಇತ್ತೀಚಿನ ದಿನಗಳಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಸುಮಾರು 4 ಶತಕೋಟಿ ಜನರು WhatsApp ಅನ್ನು ಬಳಸುತ್ತಾರೆ. WhatsAppನಲ್ಲಿ ತ್ವರಿತ ಸಂದೇಶಗಳನ್ನು ಕಳುಹಿಸಬಹುದು.  ವೀಡಿಯೊ ಕರೆಗಳನ್ನು ಮಾಡಬಹುದು. ಫೋಟೋಗಳು ಮತ್ತು ವೀಡಿಯೊಗಳನ್ನು 


COMMERCIAL BREAK
SCROLL TO CONTINUE READING

ಕೂಡಾ ಹಂಚಿಕೊಳ್ಳಬಹುದು. ಆದರೆ, WhatsAppನಲ್ಲಿ ಕೆಲವು ವಿಷಯಗಳನ್ನು   ಹಂಚಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಈ ವಿಷಯಗಳನ್ನು ಶೇರ್ ಮಾಡಿದರೆ ತೊಂದರೆಗೆ ಸಿಲುಕಿಕೊಳ್ಳಬಹುದು.  


WhatsApp ಕೆಲವು ನಿಯಮಗಳನ್ನು ಮಾಡಿದೆ.ಈ ನಿಯಮಗಳನ್ನು ಉಲ್ಲಂಘಿಸಿದರೆ, ನಿಮ್ಮ WhatsApp ಖಾತೆಯನ್ನು ಮುಚ್ಚಬಹುದು. ಇದರ ಜೊತೆಗೆ ನೀವು ಕಾನೂನು ಸಮಸ್ಯೆಗಳನ್ನು ಎದುರಿಸಬಹುದು. ಆದ್ದರಿಂದ, ವಾಟ್ಸಾಪ್‌ನಲ್ಲಿ ಯಾವುದೇ ವಿಷಯಗಳನ್ನು ಶೇರ್ ಮಾಡುವ ಮೊದಲು ಸರಿಯಾಗಿ ಪರಿಶೀಲಿಸಬೇಕು. ಕೆಲವೊಂದು ವಿಷಯಗಳನ್ನು ಶೇರ್ ಮಾಡಲೇ ಬಾರದು. 


ಇದನ್ನೂ ಓದಿ : ಶೀಘ್ರವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ರತನ್ ಟಾಟಾ ಅವರ ಕನಸಿನ ಕಾರು; ಲುಕ್ ಹೊಸದು, ರೆಟ್ ಹಳೆಯದಂತೆ!


ಅಶ್ಲೀಲ ವಿಷಯ : 
ಅಶ್ಲೀಲವಾಗಿರುವ ಯಾವುದೇ ಚಿತ್ರ ಅಥವಾ ವೀಡಿಯೊವನ್ನು WhatsApp ನಲ್ಲಿ ಎಂದಿಗೂ ಹಂಚಿಕೊಳ್ಳಬೇಡಿ.ಹಾಗೆ ಮಾಡುವುದು ಕಾನೂನುಬಾಹಿರ. ಒಂದು ವೇಳೆ ಹೀಗೆ ಮಾಡಿದರೆ ನಿಮ್ಮ WhatsApp ಖಾತೆಯನ್ನು ಮುಚ್ಚಬಹುದು. 


ದೇಶ ವಿರೋಧಿ ವಿಷಯ : 
ರಾಷ್ಟ್ರವಿರೋಧಿ ಅಥವಾ ದೇಶದ ಏಕತೆಯನ್ನು ಹಾಳು ಮಾಡುವ ಯಾವ ವಿಷಯವನ್ನು ಕೂಡಾ  WhatsApp ನಲ್ಲಿ ಹಂಚಿಕೊಳ್ಳಬೇಡಿ. ಹೀಗೆ ಮಾಡಿದರೆ ಕೂಡಾ WhatsApp ಖಾತೆಯನ್ನು ಮುಚ್ಚಬಹುದು. ಅಥವಾ ಕಾನೂನು ಸಮಸ್ಯೆಗಳನ್ನು ಎದುರಿಸಬಹುದು.


ಮಕ್ಕಳ ಅಶ್ಲೀಲ ಚಿತ್ರ : 
ಮಕ್ಕಳ ಮೇಲಿನ ದೌರ್ಜನ್ಯ ಅಥವಾ ಅಶ್ಲೀಲತೆಯಂತಹ ವಿಷಯಗಳನ್ನು ತಪ್ಪಾಗಿಯೂ WhatsApp ನಲ್ಲಿ ಹಂಚಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ಜೈಲು ಶಿಕ್ಷೆಗೆ ಗುರಿಯಾಗಬಹುದು. 


ಇದನ್ನೂ ಓದಿ : BSNL ಬಂಪರ್ ಆಫರ್: 6 ರೂ. ಗಿಂತ ಕಡಿಮೆ ಬೆಲೆಯಲ್ಲಿ ವರ್ಷವಿಡೀ ಸಿಗುತ್ತೆ ಇಷ್ಟೆಲ್ಲಾ ಲಾಭ, ಈ ಅವಕಾಶ ಇಂದು ಮಾತ್ರ!


ಮಾನನಷ್ಟ ಹಕ್ಕುಗಳ ಬಗ್ಗೆ ಎಚ್ಚರದಿಂದಿರಿ : 
WhatsAppನಲ್ಲಿ ಬೇರೆಯವರ ಫೋಟೋ ಅಥವಾ ವೀಡಿಯೊವನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ. ಬೇರೆಯವರ ಫೋಟೋ ಅಥವಾ ವೀಡಿಯೊವನ್ನು ಶೇರ್ ಮಾಡಿ ಅದು ಅವರ ಖ್ಯಾತಿಗೆ ಧಕ್ಕೆ ತಂದರೆ, ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.