ಮಾರುಕಟ್ಟೆಗೆ ಬಂದಿದೆ ಏಳು ಸಾವಿರ ರೂಪಾಯಿ ಮೌಲ್ಯದ ಸ್ಮಾರ್ಟ್ ಫೋನ್ .!
LeTV Y2 Pro ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 599 ಯುವಾನ್ ಅಂದರೆ 7 ಸಾವಿರ ರೂಪಾಯಿ. ಮುಂಬರುವ ವಾರಗಳಲ್ಲಿ ಈ ಫೋನ್ ನ ಪ್ರಿ ಬುಕಿಂಗ್ ಆರಂಭವಾಗಲಿದೆ.
ಬೆಂಗಳೂರು : LeTV ಕೆಲವು ತಿಂಗಳ ಹಿಂದೆ ಚೀನೀ ಮಾರುಕಟ್ಟೆಯಲ್ಲಿ LeTV Y1 Pro ಹೆಸರಿನ ಎಂಟ್ರಿ ಲೆವೆಲ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು ಸಾಕಷ್ಟು ಜನಪ್ರಿಯತೆ ಕೂಡಾ ಪಡೆದಿತ್ತು. ಈಗ ಕಂಪನಿಯು ಈ ಫೋನ್ ಹೊಸ ವರ್ಸನ್ ಬಿಡುಗಡೆ ಮಾಡಿದೆ. ಇದನ್ನು LeTV Y2 ಪ್ರೊ ಎಂದು ಕರೆಯಲಾಗುತ್ತದೆ. ಹೊಸದಾಗಿ ಘೋಷಿಸಲಾದ LeTV Y2 Pro ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 599 ಯುವಾನ್ ಅಂದರೆ 7 ಸಾವಿರ ರೂಪಾಯಿ. ಮುಂಬರುವ ವಾರಗಳಲ್ಲಿ ಈ ಫೋನ್ ನ ಪ್ರಿ ಬುಕಿಂಗ್ ಆರಂಭವಾಗಲಿದೆ. ಇದರ ವಿನ್ಯಾಸವು ಸಂಪೂರ್ಣವಾಗಿ ಐಫೋನ್ 13 ಅನ್ನು ಹೋಲುತ್ತದೆ.
LeTV Y2 Pro ಬೆಲೆ :
LeTV Y2 Pro ಅನ್ನು ಮೂರು ಬಣ್ಣದ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ. ಮ್ಯಾಜಿಕ್ ನೈಟ್ ಬ್ಲಾಕ್, ಎಲೆಕ್ಟ್ರಿಕ್ ಬ್ಲೂ ಮತ್ತು ಸಮ್ಮರ್ ಆರೆಂಜ್ ಎಂಬ ಮೂರೂ ಬಣ್ಣಗಳಲ್ಲಿ ಈ ಫೋನ್ ಲಭ್ಯವಿರುತ್ತದೆ. 4GB RAM + 32GB ಸ್ಟೋರೇಜ್ ಮಾದರಿಯ ಫೋನ್ ಬೆಲೆ 7,087 ರೂ. ಆದರೆ 4GB RAM + 128GB ಸ್ಟೋರೇಜ್ ಮಾದರಿಯ 9,476 ರೂ. 6GB RAM ಮತ್ತು 256GB ಸ್ಟೋರೇಜ್ ಮಾದರಿಯ ಫೋನ್ 11,785 ರೂ.ಗೆ ಲಭ್ಯವಿರಲಿದೆ.
ಇದನ್ನೂ ಓದಿ : WhatsApp ಹೊರ ತಂದಿದೆ ಹೊಸ ವೈಶಿಷ್ಟ್ಯ ..! ರಿಯಾಕ್ಷನ್ ಇಮೋಜಿ ಸಂಖ್ಯೆಗಳಲ್ಲಿ ಹೆಚ್ಚಳ
LeTV Y2 ಪ್ರೊ ವಿನ್ಯಾಸ :
ಸ್ಮಾರ್ಟ್‌ಫೋನ್ ಆಪಲ್ ಐಫೋನ್ 13 ಪ್ರೊನಂತೆ ಕಾಣುವ ವಿನ್ಯಾಸವನ್ನು ಹೊಂದಿದೆ. ಈ ಫೋನ್ ಅನ್ನು ಅನ್‌ಲಾಕ್ ಮಾಡಲು ಫೋನ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಫೇಸ್ ಅನ್‌ಲಾಕ್ ಅನ್ನು ಬಳಸಬಹುದು ಎಂದು ಕಂಪನಿ ಬಹಿರಂಗಪಡಿಸಿದೆ.
LeTV Y2 ಪ್ರೊ ವಿಶೇಷಣಗಳು :
LeTV Y2 Pro 6.5-ಇಂಚಿನ ಡಿಸ್ಪ್ಲೇ ಹೊಂದಿದೆ ಮತ್ತು ಸ್ಪ್ಲಿಟ್-ಸ್ಕ್ರೀನ್ ಆಪರೇಷನ್ ಅನ್ನು ಬೆಂಬಲಿಸುತ್ತದೆ. ಹುಡ್ ಅಡಿಯಲ್ಲಿ, ಫೋನ್ ಆಕ್ಟಾ-ಕೋರ್ ಯುನಿಸೊಕ್ ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಮೆಮೊರಿ ವಿಭಾಗದಲ್ಲಿ, ಇದು 6GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ನೊಂದಿಗೆ ಬರುತ್ತದೆ.
ಇದನ್ನೂ ಓದಿ : ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! ಈ 4 ಆಪ್‌ಗಳಿದ್ದರೆ ತಕ್ಷಣವೇ ಡಿಲೀಟ್ ಮಾಡಿ
LeTV Y2 ಪ್ರೊ ಕ್ಯಾಮೆರಾ ಮತ್ತು ಬ್ಯಾಟರಿ :
ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ ಇದೆ. ಇದರಲ್ಲಿ 13MP ಪ್ರೈಮರಿ ಕ್ಯಾಮೆರಾ ಸೆನ್ಸಾರ್ ಇದೆ. ಸಾಧನವು Android 11 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ ಮತ್ತು Google ನ GMS ಬದಲಿಗೆ Huawei HMS ಸೇವೆಯನ್ನು ಹೊಂದಿದೆ ಮತ್ತು ಫೋನ್ 4000mAh ಬ್ಯಾಟರಿಯಿಂದ ಚಾಲಿತವಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.