New Android Malware Alert! ಅಂಡ್ರಾಯಿಡ್ ಸ್ಮಾರ್ಟ್ ಫೋನ್ ಬಳಕೆದಾರರು ನಿರಂತರವಾಗಿ ಮಾಲ್ವೇಯರ್ ಅಪಾಯ ಎದುರಿಸುತ್ತಲೇ ಇದ್ದಾರೆ. ಈ ಮಾಲ್ವೇಯರ್ ಗಳಲ್ಲಿ ಒಂದಾದ ಜೋಕರ್ ಮಾಲ್ವೇಯರ್ ಗೂಗಲ್ ಪ್ಲೇ ಸ್ಟೋರ್ ಗೆ ತಲುಪುತ್ತಿದ್ದಂತೆ ತನ್ನ ಗುರುತನ್ನೇ ಬದಲಾಯಿಸುತ್ತದೆ ಮತ್ತು ಲಕ್ಷಾಂತರ ಅಂಡ್ರಾಯಿಡ್ ಫೋನ್ ಬಳಕೆದಾರರನ್ನು ಗುರಿಯಾಗಿರುತ್ತದೆ. ಆದರೆ ಇದೀಗ ಹೊಸ ಸಮಸ್ಯೆ ಎಂದರೆ. ಜೋಕರ್ ನಂತರ ಅದರ ಗರ್ಲ್ ಫ್ರೆಂಡ್ ಎಂದೇ ಹೇಳಲಾಗುತ್ತಿರುವ ಹಾರ್ಲೆ ಮಾಲ್ವೇಯರ್ ಕೂಡ ಪ್ರಕಟಗೊಂಡಿದ್ದು, ಇದು ಹಲವು ವಿಧಗಳಲ್ಲಿ ಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ಡಿಸಿ ಕಾಮಿಕ್ಸ್ ಯುನಿವರ್ಸ್ ನಲ್ಲಿ ಬ್ಯಾಟ್ಮ್ಯಾನ್ ಸರಣಿಯ ಖಳನಾಯಕನ ಪಾತ್ರದ ಹೆಸರು 'ಜೋಕರ್' ಆಗಿರುತ್ತದೆ. ಜೋಕರ್ ಗೆಳತಿಯ ಹೆಸರು 'ಹಾರ್ಲೆ ಕ್ವೀನ್' ಈ ಅತ್ಯಂತ ಜನಪ್ರೀಯ ಪಾತ್ರಗಳ ಹೆಸರನ್ನೇ ಹೊಸ ಮಾಲ್ವೇಯರ್ಗಳಿಗೆ ಇಡಲಾಗಿದೆ. MakeUseOf ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಇದೀಗ Harley ಹೆಸರಿನ ಮಾಲ್ವೇಯರ್ ಅಂಡ್ರಾಯಿಡ್ ವ್ಯವಸ್ಥೆಯನ್ನು ತಲುಪಿದ್ದು, ಇದು ಗೂಗಲ್ ಪ್ಲೇ ಸ್ಟೋರ್ ನಿಂದ ಸ್ಥಾಪಿಸಲಾಗುವ ಆಪ್ ಗಳ ಮೂಲಕ ಮೊಬೈಲ್ ಅನ್ನು ಪ್ರವೇಶಿಸುತ್ತದೆ.


ಜೋಕರ್ ಮಾಲ್ವೇಯರ್ ಗಿಂತ ಈ ಮಾಲ್ವೇಯರ್ ಹೇಗೆ ಭಿನ್ನವಾಗಿದೆ
ಈ ಎರಡೂ ಮಾಲ್ವೇಯರ್ ಗಳ ನಡುವಿನ ವ್ಯತ್ಯಾಸದ ಕುರಿತು ಹೇಳುವುದಾದರೆ, ಒಂದೆಡೆ ಸಾಧನದಲ್ಲಿ ನಿಜವಾಗಿ ಕಾಣುವ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿದ ನಂತರ ಜೋಕರ್ ಮಾಲ್‌ವೇರ್ ದುರುದ್ದೇಶಪೂರಿತ ಕೋಡ್ ಅನ್ನು ಡೌನ್‌ಲೋಡ್ ಮಾಡಿದರೆ. ಮತ್ತೊಂದೆಡೆ, ಹಾರ್ಲೆ ಮಾಲ್ವೇರ್ ಸ್ವತಃ ದುರುದ್ದೇಶಪೂರಿತ ಕೋಡ್ ಅನ್ನು ಹೊತ್ತು ತರುತ್ತದೆ ಮತ್ತು ಅದನ್ನು ನಿಯಂತ್ರಿಸುವ ಅವಶ್ಯಕತೆ ಬೀಳುವುದಿಲ್ಲ.


ಇದನ್ನೂ ಓದಿ-Nobel Prize 2022: ಸ್ವಾಂಟೆ ಪಾಬೊ ಅವರಿಗೆ ವೈದ್ಯಕೀಯ ಶಾಸ್ತ್ರದ ನೊಬೆಲ್ ಪ್ರಶಸ್ತಿ


ಹಾರ್ಲೆ ಮಾಲ್ವೇಯರ್ ಯಾವ ರೀತಿ ಹಾನಿ ತಲುಪಿಸುತ್ತದೆ
ಹಾರ್ಲೆ ಮಾಲ್ವೇರ್ ಬಳಕೆದಾರರಿಗೆ ಅವರ ಅರಿವಿಲ್ಲದೆ ಪೇಮೆಂಟ್ ಚಂದಾದಾರಿಕೆ ಸೇವೆಗಳಿಗೆ ಸೈನ್-ಅಪ್ ಮಾಡಲು ಕಾರಣವಾಗುತ್ತದೆ. ಒಂದೊಮ್ಮೆ ಇದು ನಿಮ್ಮ ಡಿವೈಸ್ ನ ಭಾಗವಾದರೆ, ನಿಮ್ಮನ್ನು ಅದು ಕದ್ದು ಮುಚ್ಚಿ ದುಬಾರಿ ಚಂದಾದಾರಿಕೆ ಯೋಜನೆಗಳಿಗೆ ನಿಮಗೆ ಅರಿವಿಲ್ಲದಂತೆ ಚಂದಾದಾರರನ್ನಾಗಿ ಮಾಡುತ್ತದೆ, ಅಷ್ಟೇ ಅಲ್ಲ ಬಳಕೆದಾರರ ಹೆಸರಿನಲ್ಲಿ ಬಿಲ್ ಕೂಡ ಬರುತ್ತದೆ ಮತ್ತು ಬಿಲ್ ಕುರಿತು ಬಳಕೆದಾರರಿಗೆ ಅರಿವಿಲ್ಲದಂತೆ ಅವರ ಖಾತೆಯನ್ನು ಕೂಡ ಖಾಲಿ ಮಾಡುತ್ತದೆ. ಈ ಮಾಲ್ವೇರ್ SMS ಅಥವಾ ಫೋನ್ ಕರೆ ಪರಿಶೀಲನೆಯ ಸಹಾಯದಿಂದ ಸೈನ್ ಅಪ್ ಮಾಡುತ್ತದೆ ಮತ್ತು ಫೋನ್ ಕರೆಗಳನ್ನು ಸಹ ನಿರ್ವಹಿಸಬಹುದು.


ಇದನ್ನೂ ಓದಿ-ಖಾತೆಯಲ್ಲಿ ಹಣವಿಲ್ಲದಿದ್ದರೂ ಚಿಂತಿಸಬೇಕಿಲ್ಲ, ಜೀರೋ ಬ್ಯಾಲೆನ್ಸ್ ಅಕೌಂಟ್ ನಲ್ಲಿಯೂ ಮಾಡಿಸಬಹುದು EMI


ಇದರಿಂದ ಬಚಾವಾಗುವ ಮಾರ್ಗ ಯಾವುದು?
ಕ್ಯಾಸ್ಪರ್ಸ್ಕಿ ಪ್ರಕಾರ, ಹಾರ್ಲೆ ಮಾಲ್ವೇರ್ 190 ಕ್ಕೂ ಹೆಚ್ಚು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಕಂಡುಬಂದಿದೆ ಮತ್ತು ಈ ಅಪ್ಲಿಕೇಶನ್‌ಗಳನ್ನು ಲಕ್ಷಾಂತರ ಬಾರಿ ಡೌನ್‌ಲೋಡ್ ಮಾಡಲಾಗಿದೆ. ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವಾಗ ಎಚ್ಚರಿಕೆ ವಹಿಸುವುದು ಮಾಲ್‌ವೇರ್ ಅನ್ನು ತಪ್ಪಿಸುವ ಒಂದು ಉತ್ತಮ ಮಾರ್ಗವಾಗಿದೆ. ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮೊದಲು ಆ ಆಪ್ ನ ವಿಮರ್ಶೆಗಳನ್ನು ಪರಿಶೀಲಿಸಿ. ಸಂದೇಹವಿದ್ದಲ್ಲಿ ನೀವು ಅಪ್ಲಿಕೇಶನ್ ಅನ್ನು ಸಹ ವರದಿ ಮಾಡಬಹುದು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.