ನವದೆಹಲಿ : ಈಗ ಯಾವುದೇ ರೀತಿಯ ಬಿಲ್ ಪಾವತಿಸಬೇಕಾದರೂ ಪೇಮೆಂಟ್ ಆ್ಯಪ್ (Payment App) ಮೂಲಕವೇ ನಡೆದು ಹೋಗುತದೆ. ಪ್ರತಿಯೊಂದು ಪೇಮೆಂಟ್ ಆ್ಯಪ್ ಗಳು ಕೂಡ ಕ್ಯಾಶ್ ಬ್ಯಾಕ್ (Cash Back), ರಿವಾರ್ಡ್ ಪಾಯಿಂಟ್ ಗಳನ್ನ ನೀಡುವ ಮೂಲಕ ಹೆಚ್ಚು ಹೆಚ್ಚು ಗ್ರಾಹಕರನ್ನು ತನ್ನತ್ತ ಆಕರ್ಷಿಸುತ್ತಿದೆ. ಈಗಾಗಲೇ ಅನೇಕ ಪೇಮೆಂಟ್ ಆ್ಯಪ್ ಗಳು ಅಸ್ತಿತ್ವದಲ್ಲಿದೆ.  ಈ ಸಾಲಿಗೆ ಈಗ ಮತ್ತೊಂದು ಹೊಸ ಆ್ಯಪ್ ಸೇರ್ಪಡೆಯಾಗಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇದು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ. 


COMMERCIAL BREAK
SCROLL TO CONTINUE READING

OnePlus ತರುತ್ತಿದೆ ಹೊಸ Payment App :
ಚೀನಾದ ಮೊಬೈಲ್ ತಯಾರಕ ಒನ್‌ಪ್ಲಸ್ (Oneplus)ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಪೇಮೆಂಟ್ ಆ್ಯಪ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ಡಿಜಿಟಲ್ ಪೇಮೆಂಟ್ (digital Payment) ಮಾರುಕಟ್ಟೆಗೆ ಪ್ರವೇಶಿಸಲು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ ಎನ್ನಲಾಗಿದೆ. 


ಇದನ್ನೂ ಓದಿ : Deadly Mobile Number: ಈ ನಿಗೂಢ ಮೊಬೈಲ್ ಸಂಖ್ಯೆಯ ಕಥೆ ನಿಮಗೆ ಗೊತ್ತಾ?


ಭಾರತದಲ್ಲಿ ಹೊಸ ಟ್ರೇಡ್‌ಮಾರ್ಕ್ ಗಳಿಸಿದ OnePlus :
ವರದಿಯ ಪ್ರಕಾರ, ಭಾರತದಲ್ಲಿ ಹೊಸ ಪೇಮೆಂಟ್  ಅಪ್ಲಿಕೇಶನ್ ಅನ್ನು ಪ್ರಾರಂಭಿಸುವ ಮೊದಲು OnePlusನ  ವಿಶೇಷ ಟ್ರೇಡ್‌ಮಾರ್ಕ್ ಫೀಚರ್  ಸಾಕಷ್ಟು ಚರ್ಸೆಗೆ ಕಾರಣವಾಗಿದೆ. ಕಂಪನಿಯು ತನ್ನ ಆಪರೇಟಿಂಗ್ ಸಿಸ್ಟಮ್ OxygenOSನಲ್ಲಿ   ಈ ಹೊಸ ವೈಶಿಷ್ಟ್ಯಕ್ಕಾಗಿ ಅರ್ಜಿ ಸಲ್ಲಿಸಿದೆ.  ಲಭ್ಯ ಮಾಹಿತಿ ಪ್ರಕಾರ, ಒನ್‌ಪ್ಲಸ್‌ಗೆ ಹೊಸ ಟ್ರೇಡ್‌ಮಾರ್ಕ್ ಸಿಕ್ಕಿದೆ ಎನ್ನಲಾಗಿದೆ.


ಹೊಸ ಅಪ್ಲಿಕೇಶನ್‌ನ  ಹೆಸರು OnePlus Pay ಆಗಿರಲಿದೆ :
ಒನ್‌ಪ್ಲಸ್‌ನ ಹೊಸ ಪೇಮೆಂಟ್ ಅಪ್ಲಿಕೇಶನ್‌ಗೆ OnePlus Pay ಎಂದು ಹೆಸರಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಅಪ್ಲಿಕೇಶನ್ ಪ್ರಸ್ತುತ ಮಾರುಕಟ್ಟೆಯಲ್ಲಿನ Google Pay, Paytm, PhonePe ಮತ್ತು WhatsApp Payment ನಂತಹ ದೊಡ್ಡ ಅಪ್ಲಿಕೇಶನ್‌ಗಳೊಂದಿಗೆ ಸ್ಪರ್ಧಿಸಾಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. 


ಇದನ್ನೂ ಓದಿ: Samsung Galaxy M51 ಮೇಲೆ ಸಿಗುತ್ತಿದೆ 6 ಸಾವಿರ ರೂಪಾಯಿಗಳ ರಿಯಾಯಿತಿ


ಶೀಘ್ರದಲ್ಲೇ ಆರಂಭವಾಗಲಿದೆ  ಹೊಸ App :
ಒನ್‌ಪ್ಲಸ್‌ನ ಈ ಹೊಸ ಅಪ್ಲಿಕೇಶನ್ ಈ ತಿಂಗಳಿನಿಂದ ಆರಂಭವಾಗಲಿದೆ ಎನ್ನಲಾಗಿದೆ. ಆದರೆ, ಈ ಕುರಿತು ಕಂಪನಿ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.