Deadly Mobile Number: ಈ ನಿಗೂಢ ಮೊಬೈಲ್ ಸಂಖ್ಯೆಯ ಕಥೆ ನಿಮಗೆ ಗೊತ್ತಾ?

Deadly Mobile Number - ಇದುವರೆಗೆ ಯಾವ ವ್ಯಕ್ತಿ ಈ ಮೊಬೈಲ್ ಸಂಖ್ಯೆಯನ್ನು ಬಳಸಿದ್ದಾರೋ ಅವರು ಇಂದು ಪ್ರಪಂಚದಲ್ಲಿಯೇ ಇಲ್ಲ. ಕಳೆದ 10 ವರ್ಷಗಳಿಂದ ಈ ಘಟನೆಗಳು ನಡೆಯುತ್ತಲೇ ಬಂದಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಈ ಖತರ್ನಾಕ್ ಮೊಬೈಲ್ ನಂಬರ್ ಕುರಿತು ಚರ್ಚೆಗಳು ಕೇಳಿಬಂದಿವೆ.

Written by - Nitin Tabib | Last Updated : Apr 5, 2021, 10:24 PM IST
  • ಈ ನಂಬರ್ ಅನ್ನು ಇದುವರೆಗೆ ಖರೀದಿಸಿದವರು ಸಾವನ್ನಪ್ಪಿದ್ದಾರೆ.
  • ಜನರು ಇದನ್ನು ಹಾಂಟೆಡ್ ಮೊಬೈಲ್ ನಂಬರ್ ಎಂದು ಕರೆಯುತ್ತಾರೆ.
  • ಪ್ರಸ್ತುತ ಈ ಹಾಂಟೆಡ್ ಸಂಖ್ಯೆಯನ್ನು ಸಸ್ಪೆಂಡ್ ಮಾಡಲಾಗಿದೆ.
Deadly Mobile Number: ಈ ನಿಗೂಢ ಮೊಬೈಲ್ ಸಂಖ್ಯೆಯ ಕಥೆ ನಿಮಗೆ ಗೊತ್ತಾ? title=
Deadly Mobile Number (File Photo)

ನವದೆಹಲಿ: Deadly Mobile Number - ಇದುವರೆಗೆ ನೀವು ಹಲವು ಭಯ ಹುಟ್ಟಿಸುವ ಕ ಸ್ಥಳಗಳ ಬಗ್ಗೆ ಕೇಳಿರಬಹುದು, ಆದರೆ ಭಯಾನಕ ಫೋನ್ ಸಂಖ್ಯೆಯನ್ನು ನೀವು ಎಂದಾದರೂ ಕೇಳಿದ್ದೀರಾ? ಇಂತಹ ಒಂದು ಭಯಂಕರ ಮೊಬೈಲ್ ಸಂಖ್ಯೆ (Haunted phone number) ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ. ಇದನ್ನು ತಿಳಿದು ನಿಮಗೂ ಕೂಡ ಆಶ್ಚರ್ಯವಾಗಲಿದೆ ಮತ್ತು ಈ ಸುದ್ದಿಯನ್ನು ಓಡಿದ ಬಳಿಕ ನೀವು ನಿಮ್ಮ ಮೊಬೈಲ್ ಸಂಖ್ಯೆಯನ್ನು ಎಂದಿಗೂ ಬದಲಾಯಿಸುವುದಿಲ್ಲ ಅಥವಾ ಮೊಬೈಲ್ ಸಂಖ್ಯೆ ಬದಲಾಯಿಸುವ ಮೊದಲು ಸಾವಿರ ಬಾರಿಗೆ ಯೋಚಿಸುವಿರಿ.

ಕಳೆದ 10 ವರ್ಷಗಳಿಂದ ನಡೆಯುತ್ತಿವೆ ಈ ಘಟನೆಗಳು
ಇದುವರೆಗೆ ಯಾವ ವ್ಯಕ್ತಿ ಈ ಮೊಬೈಲ್ ಸಂಖ್ಯೆಯನ್ನು ಬಳಸಿದ್ದಾರೆಯೋ, ಸಾವು ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಂದರೆ, ಈ ಮೊಬೈಲ್ ಸಂಖ್ಯೆ ಬಳಸಿರುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಘಟನೆಗಳು ಒಂದೆರಡು ದಿನಗಳಿಂದ ನಡೆಯುತ್ತಿಲ್ಲ ಮತ್ತು ಕಳೆದ 10 ವರ್ಷಗಳಿಂದ ಈ ಘಟನೆಗಳು ನಡೆಯುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಈ ಅಪಾಯಕಾರಿ ಮೊಬೈಲ್ ನಂಬರ್ ಚರ್ಚೆಗಳು ನಡೆಯುತ್ತಿವೆ. ಈ ಮೊಬೈಲ್ ಸಂಖ್ಯೆಯನ್ನು ಬಳಸಿದವರು ಸಾವನ್ನಪ್ಪಿದ್ದಾರೆ.

ಇದುವರೆಗೆ ಒಟ್ಟು ಮೂರು ಬಾರಿ ಈ ಘಟನೆಗಳು ಸಂಭವಿಸಿವೆ
ಕಳೆದ 10 ವರ್ಷಗಳಲ್ಲಿ ಇಂತಹ ಒಟ್ಟು ಮೂರು ಘಟನೆಗಳು ಸಂಭವಿಸಿವೆ. ಇದುವರೆಗೆ ಮೂವರು ಜನರು ಈ ಮೊಬೈಲ್ ಸಂಖ್ಯೆಯನ್ನು ಖರೀದಿಸಿದ್ದಾರೆ ಹಾಗೂ ಖರೀದಿಸಿದ ಮೂವರು ಕೂಡ ಸಾವನ್ನಪ್ಪಿದ್ದಾರೆ. ಬಲ್ಗೇರಿಯಾದಲ್ಲಿ ಮೊದಲ ಬಾರಿಗೆ ಮೊಬೈಲ್ ಕಂಪನಿಯ ಸಿಇಓವೋಬ್ಬರು ಈ ಮೊಬೈಲ್ ಸಂಖ್ಯೆಯನ್ನು ಖರೀದಿಸಿದ್ದಾರೆ. ಮೊಬೈಲ್ ಕಂಪನಿಯ ಸಿಇಓ ವ್ಲಾಡಿಮೀರ್ ಗೆಸಾನೋವ ಮೊದಲ ಬಾರಿಗೆ 0888888888 ಮೊಬೈಲ್ ಸಂಖ್ಯೆಯನ್ನು ಹೊಂದಿದ್ದರು.

ಪ್ರಾಣಕ್ಕೆ ಅಪಾಯ ತಂದ ಮೊಬೈಲ್ ಸಂಖ್ಯೆ
ಈ ಮೊಬೈಲ್ ಸಂಖ್ಯೆ ಹೊಂದಿದ ಕೆಲ ದಿನಗಳ ಬಳಿಕ ವ್ಲಾಡಿಮಿರ್ ಗೆಸಾನೋವ್ ಅವರಲ್ಲಿ ಕ್ಯಾನ್ಸರ್ (Cancer) ಕಾಣಿಸಿಕೊಂಡಿದೆ ಹಾಗೂ 2001 ರಲ್ಲಿ ಅವರು ಮೃತಪಟ್ಟರು. ಆದರೆ, ಕ್ಯಾನ್ಸರ್ ನಿಂದ ಸಾವನ್ನಪ್ಪಿರುವ ವದಂತಿ ವ್ಲಾಡಿಮೀರ್ ಅವರ ಶತ್ರುಗಳು ಹಬ್ಬಿಸಿದ್ದರು ಎನ್ನಲಾಗುತ್ತದೆ. ಆದರೆ, ಈ ಮೊಬೈಲ್ ಸಂಖ್ಯೆಯ ವ್ಲಾಡಿಮೀರ್ ಸಾವಿಗೆ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಇದನ್ನೂ ಓದಿ- ಜೀವಿತದಲ್ಲೊಮ್ಮೆ ನೋಡಲೇ ಬೇಕು..! ಇದು ದಿಗ್ಭ್ರಮೆಗೊಳಿಸುವ Bending Glass Bridge

ಬಳಿಕ ಈ ಸಂಖ್ಯೆಯನ್ನು ದಿಮಿತ್ರಿವ್ ಹೆಸರಿನ ಕುಖ್ಯಾತ ಡ್ರಗ್ ಡೀಲರ್ ಖರೀದಿಸಿದ್ದಾನೆ. ಬಳಿಕ 2003 ರಲ್ಲಿ ದಿಮಿತ್ರಿವ್ ರಷ್ಯಾ ಮಾಫಿಯಾ ಕೈಯಾರೆ ಹತ್ಯೆಗೀಡಾಗಿದ್ದ. ಈತ 500 ಮಿಲಿಯನ್ ಡಾಲರ್ ಡ್ರಗ್ ದಂಧೆ ಹೊಂದಿದ್ದ. ಸಾವಿನ ವೇಳೆ ಈ ಸಂಖ್ಯೆ ದಿಮಿತ್ರಿವ್ ಬಳಿ ಇತ್ತು. ಇದಾದ ಬಳಿಕ ಕೂಡ ಸಾವುಗಳು ಸಂಭವಿಸಿವೆ.

ಇದನ್ನೂ ಓದಿ-UK School: ವಿಚಿತ್ರ ವಾರ್ನಿಂಗ್! 'ಮಕ್ಕಳ ತಾಯಂದಿರರು ಶಾಲೆಯಲ್ಲಿ ತುಂಡುಡುಗೆ ಧರಿಸುವಂತಿಲ್ಲ'

ಈ ಅಪಾಯಕಾರಿ ನಂಬರ್ ಅನ್ನು ಸಸ್ಪೆಂಡ್ ಮಾಡಲಾಗಿದೆ
ದಿಮಿತ್ರಿವ್ ಸಾವಿನ ಬಳಿಕ ಈ ನಂಬರ್ ಅನ್ನು ಬಲ್ಗೇರಿಯಾ ಮೂಲದ ವ್ಯಾಪಾರಿ ಡಿಸ್ಲೀವ್ ಖರೀದಿಸಿದ್ದ. 2005ರಲ್ಲಿ ಬಲ್ಗೇರಿಯಾ ರಾಜಧಾನಿ ಸೋಫಿಯಾನಲ್ಲಿ ಆತ  ಹತ್ಯೆಗೀಡಾದ. ಆತ ಕೊಕೇನ್ ಟ್ರ್ಯಾಫಿಕಿಂಗ್ ರಾಕೆಟ್ ಕೂಡ ನಡೆಸುತ್ತಿದ್ದ. ಈ ರೀತಿ ಈ ಅಪಾಯಕಾರಿ ನಂಬರ್ ಬಳಸಿವ ಮೂವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಮೂರು ಸಾವುಗಳ ಬಳಿಕ ಈ ನಂಬರ್ ಅನ್ನು 2005 ರಲ್ಲಿ ಸಸ್ಪೆಂಡ್ ಮಾಡಲಾಗಿದೆ.

ಇದನ್ನೂ ಓದಿ-ಈ ದೇಶದಲ್ಲಿ 'Mr, Mrs, Miss' ಬದಲು ಬಳಕೆಯಾಗಲಿದೆ ಹೊಸ ಪದ

Trending News