ಬೆಂಗಳೂರು : ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಭಾರತದಲ್ಲಿ ಅತ್ಯಂತ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್‌ಗಳಾಗಿವೆ. ಗ್ರಾಹಕರು ಏನೋ ಆರ್ಡರ್ ಮಾಡಿದರೆ, ಇನ್ಯಾವುದೋ ವಸ್ತು ಡೆಲಿವೆರಿ ಆಗಿರುವ ಅನೇಕ ಉದಾಹರಣೆಗಳು ಎರಡೂ ವೆಬ್‌ಸೈಟ್‌ಗಳಲ್ಲಿ ಇವೆ. ಒಂಡು ಕಡೆ ಗ್ರಾಹಕರಿಗೆ ಐಫೋನ್ ಬದಲು ಸಾಬೂನು ಸಿಕ್ಕರೆ, ಇನ್ನೊಂದೆಡೆ ಇಟ್ಟಿಗೆ ಸಿಕ್ಕಿದೆ. ಈ ಆನ್‌ಲೈನ್ ಡೆಲಿವರಿ ವಂಚನೆಯ ವಿರುದ್ಧ ಹೋರಾಡಲು, ವೆಬ್‌ಸೈಟ್‌ಗಳು  ಒನ್ ಟೈಮ್ ಪಾಸ್‌ವರ್ಡ್  ಡೆಲಿವೆರಿ ಪ್ರಕ್ರಿಯೆಯನ್ನು ಪರಿಚಯಿಸಿವೆ.


COMMERCIAL BREAK
SCROLL TO CONTINUE READING

OTP ಡೆಲಿವೆರಿ ಎಂದರೇನು ? :
ಇದು ಗ್ರಾಹಕರಿಗೆ ಉತ್ತಮವಾಗಿದೆ. ಈ ಪ್ರಕ್ರಿಯೆಯಲ್ಲಿ, ಗ್ರಾಹಕರು ತಾವು ರಿಸೀವ್ ಮಾಡಿದ ಸರಕನ್ನು ಪರಿಶೀಲಿಸಿದ ನಂತರವೇ ಡೆಲಿವೆರಿ  ಏಜೆಂಟ್‌ನೊಂದಿಗೆ OTP ಅನ್ನು ಮಾಡುವಂತೆ ಹೇಳಲಾಗುತ್ತದೆ. ಈ ಮೂಲಕ ಕಂಪನಿಗಳು ವಿತರಣಾ ಪ್ರಕ್ರಿಯೆಯನ್ನು ಸುರಕ್ಷಿತವಾಗಿರಿಸಲು ಪ್ರಯತ್ನಿಸುತ್ತಿವೆ. ಆದರೆ, ಮತ್ತೊಂದೆಡೆ  ವಂಚಕರು ಇಲ್ಲೂ ಸ್ಕ್ಯಾಮ್ ಮಾಡುತ್ತಿದ್ದಾರೆ. 


ಇದನ್ನೂ ಓದಿ : ಬಂಪರ್ ಆಫರ್ .! ಕೇವಲ 5,490 ರೂ.ಗೆ ಖರೀದಿಸಿ Thomson ವಾಶಿಂಗ್ ಮೆಷಿನ್


ಏನಿದು ಹೊಸ ಹಗರಣ ? : 
ಹೊಸ ಹಗರಣಗಳ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇಲ್ಲಿ ವಂಚಕರು ಡೆಲಿವರಿ ಏಜೆಂಟ್‌ಗಳಂತೆ ಪೋಸ್ ಕೊಡುತ್ತಾರೆ. ಡೆಲಿವರಿ ಮಾಡುವ ನೆಪದಲ್ಲಿ ಬಂದು ಜನರಿಂದ OTP ಸಂಗ್ರಹಿಸುತ್ತಾರೆ. ಕೆಲವರು ಸರಕು ನೋಡದೆ ಓಟಿಪಿ ನೀಡಲು ನಿರಾಕರಿಸುತ್ತಾರೆ. ಇನ್ನು ಕೆಲವರು ಸರಕು ಚೆಕ್ ಮಾಡುವ ಮೊದಲೇ  OTP ನೀಡಿ ಬಿಡುತ್ತಾರೆ. ಹೀಗೆ ನೀಡಿದ ಓಟಿಪಿ  ಬಳಸಿ,  ಸ್ಕ್ಯಾಮರ್‌ಗಳು ಫೋನ್ ಅನ್ನು ಕ್ಲೋನ್ ಮಾಡುತ್ತಾರೆ. ಈ ಮೂಲಕ ಬ್ಯಾಂಕ್ ಖಾತೆ ಮತ್ತು ಡೇಟಾದ ಅಕ್ಸೆಸ್ ಪಡೆದುಕೊಳ್ಳುತ್ತಾರೆ. 


ಅನೇಕ ಬಾರಿ ಸ್ಕ್ಯಾಮರ್‌ಗಳು ಉದ್ದೇಶಿತ ವ್ಯಕ್ತಿಯ ನೆರೆಹೊರೆಯವರನ್ನೂ ಸಂಪರ್ಕಿಸುತ್ತಾರೆ.  ಹೀಗೆ ಮಾಡಿ ವ್ಯಕ್ತಿಗೆ ಕರೆ ಮಾಡಿ OTP ನೀಡುವಂತೆ ಅಥವಾ ಪಾವತಿ ಮಾಡುವಂತೆ ಕೋರುತ್ತಾರೆ. ಆ ಸಮಯದಲ್ಲಿ ವ್ಯಕ್ತಿಯು ನೆರೆಯವರಿಗೆ  ಕಿರಿಕಿರಿಯಾಗಬಾರದು ಎನ್ನುವ ಉದ್ದೇಶದಿಂದ OTP ಕೊಟ್ಟು ಬಿಡುತ್ತಾರೆ. 


ಇದನ್ನೂ ಓದಿ : WhatsApp New Feature: ಇನ್ಮುಂದೆ ಈ ಕೆಲ್ಸಾ ಮಾಡಿದ್ರೆ ನಿಮ್ಮ ವಾಟ್ಸ್ ಆಪ್ ಖಾತೆ ಬ್ಲಾಕ್


ಈ ರೀತಿ ಜಾಗರೂಕರಾಗಿರಿ : 
OTP ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಂದೇಹವಿದ್ದರೆ ತಕ್ಷಣ ಕಸ್ಟಮರ್ ಕೇರ್‌ಗೆ ಕರೆ ಮಾಡಿ.
ಡೆಲಿವರಿ ಬಾಯ್ ಪಿನ್ ಕೇಳುತ್ತಿದ್ದರೆ, ಆ ವ್ಯಕ್ತಿಯ ಗುರುತನ್ನು ಪರಿಶೀಲಿಸಿ. ಸರಕುಗಳನ್ನು ವಿತರಿಸುವ ಮೊದಲು ಕಂಪನಿಗಳು ಆಗಾಗ್ಗೆ ವಿವರಗಳನ್ನು ಕಳುಹಿಸುತ್ತವೆ. 
ಪಾರ್ಸೆಲ್ ತೆರೆಯುವ ಮೊದಲು ಹಣವನ್ನು ಪಾವತಿಸಬೇಡಿ. 
ಯಾರಾದರೂ ಲಿಂಕ್ ಕಳುಹಿಸಿದರೆ, ಅದರ ಮೇಲೆ ಕ್ಲಿಕ್ ಮಾಡಬೇಡಿ.



https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.