ಎಲೆಕ್ಟ್ರಿಕ್ ಮೋಟರ್ನೊಂದಿಗೆ ಫೆಬ್ರವರಿಯಲ್ಲಿ ಮಾರುಕಟ್ಟೆಗೆ ಕಾಲಿಡುತ್ತಿದೆ ಹೊಸ ಟೊಯೋಟಾ ಗ್ರ್ಯಾಂಡ್ ಹೈಲ್ಯಾಂಡರ್ .!
ಟೊಯೊಟಾ ಮುಂಬರುವ ಹೊಸ ಗ್ರ್ಯಾಂಡ್ ಹೈಲ್ಯಾಂಡರ್ ತ್ರಿ ರೋ ಎಸ್‌ಯುವಿಯ ಮೊದಲ ಟೀಸರ್ ಅನ್ನು ಯುಎಸ್ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿದೆ.
Toyota New SUV : ಟೊಯೊಟಾ ಮುಂಬರುವ ಹೊಸ ಗ್ರ್ಯಾಂಡ್ ಹೈಲ್ಯಾಂಡರ್ ತ್ರಿ ರೋ ಎಸ್‌ಯುವಿಯ ಮೊದಲ ಟೀಸರ್ ಅನ್ನು ಯುಎಸ್ ಮಾರುಕಟ್ಟೆಗಳಿಗೆ ಬಿಡುಗಡೆ ಮಾಡಿದೆ. 2023 ರ ಚಿಕಾಗೋ ಆಟೋ ಶೋನಲ್ಲಿ ಫೆಬ್ರವರಿ 8 ರಂದು ಈ ಮಾದರಿಯನ್ನು ಪ್ರಾರಂಭಿಸಲಾಗುವುದು ಎಂದು ಕಾರು ತಯಾರಕರು ದೃಢಪಡಿಸಿದ್ದಾರೆ. ಹೊಸ ಟೊಯೋಟಾ ಗ್ರ್ಯಾಂಡ್ ಹೈಲ್ಯಾಂಡರ್ ನ ಪ್ರಾಡಕ್ಟ್ ಪೋರ್ಟ್ಫೋಲಿಯೊಗೆ ಪರ್ಪೆಕ್ಟ್ ಅಡಿಶನ್ ಎಂದು ಕಂಪನಿ ಹೇಳಿದೆ. ಇದನ್ನು ಸ್ಟ್ಯಾಂಡರ್ಡ್ ಹೈಲ್ಯಾಂಡರ್ ಮತ್ತು ಗ್ಫುಲ್ ಸೈಜ್ ಸಿಕ್ವೊಯಾ ನಡುವೆ ಇರಿಸಲಾಗುತ್ತದೆ. ಅಂದರೆ, ಈ ಎರಡು ಎಸ್‌ಯುವಿಗಳ ನಡುವೆ ಗ್ರಾಹಕರು ಕಾರು ಖರೀದಿಸಲು ಇಚ್ಚಿಸಿದರೆ ಅವರಿಗೆ ಇದು ಉತ್ತಮ ಆಯ್ಕೆಯಾಗಲಿದೆ.
ಹೇಗಿರಲಿದೆ ಟೊಯೊಟಾ ಗ್ರ್ಯಾಂಡ್ ಹೈಲ್ಯಾಂಡರ್‌ನ ಟೀಸರ್ ಇಮೇಜ್ :
ಟೀಸರ್ ಇಮೇಜ್ ನಲ್ಲಿ ಅದರ ರಿಯರ್ ಪ್ರೊಫೈಲ್ ಅನ್ನು ಅನಾವರಣಗೊಳಿಸಲಾಗಿದೆ. ಇದರಲ್ಲಿ ಎರಡು-ಸ್ಟ್ರಿಪ್ ಟೈಲ್‌ಲ್ಯಾಂಪ್‌ಗಳು, ಮರುವಿನ್ಯಾಸಗೊಳಿಸಲಾದ ಟೈಲ್‌ಗೇಟ್ ಮತ್ತು "ಗ್ರ್ಯಾಂಡ್ ಹೈಲ್ಯಾಂಡರ್" ನೇಮ್ ಪ್ಲೇಟ್ ಅನ್ನು ಕಾಣಬಹುದು. ಇದು ಟಾಪ್ ಪ್ಲಾಟಿನಂ ಟ್ರಿಮ್ ಆಗಿದ್ದು, ಇದು "ಹೈಬ್ರಿಡ್ ಮ್ಯಾಕ್ಸ್" ಪವರ್‌ಟ್ರೇನ್‌ನೊಂದಿಗೆ ಬರಲಿದೆ. ಹೊಸ ಟೊಯೊಟಾ SUV 2.4-ಲೀಟರ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಎಂಜಿನ್ ಜೊತೆಗೆ ಮುಂಭಾಗದಲ್ಲಿ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿರಲಿದೆ. ಇದು ಹೆಚ್ಚಿನ ವಿದ್ಯುತ್ ಉತ್ಪಾದನೆಯನ್ನು ನೀಡುತ್ತದೆ. ಈ ಪವರ್‌ಟ್ರೇನ್ ಸೆಟಪ್‌ನ ಕಂಬೈನ್ಡ್ ಔಟ್ಪುಟ್ 340bhp ಮತ್ತು 542Nm ಆಗಿರಬಹುದು. ಟ್ರಾನ್ಸ್ ಮಿಶನ್ ಗಾಗಿ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೀಡಲಾಗಿದೆ.
ಇದನ್ನೂ ಓದಿ : ನಡುಗುವ ಕೈಗಳನ್ನು ಚಿಟಿಕೆಯಲ್ಲಿ ಬೆಚ್ಚಗಾಗಿಸಲು ಕೈಗೆಟುಕುವ ದರದಲ್ಲಿ ನಿಮ್ಮದಾಗಿಸಿ ಹ್ಯಾಂಡ್ ವಾರ್ಮರ್
ಟೊಯೊಟಾ ಗ್ರ್ಯಾಂಡ್ ಹೈಲ್ಯಾಂಡರ್ ದೊಡ್ಡ SUV ಆಗಿರಲಿದೆ :
ಹೈಲ್ಯಾಂಡರ್‌ಗೆ ಹೋಲಿಸಿದರೆ, ಹೊಸ ಟೊಯೊಟಾ ಗ್ರ್ಯಾಂಡ್ ಹೈಲ್ಯಾಂಡರ್ ಗಾತ್ರದಲ್ಲಿ ದೊಡ್ಡದಾಗಿರಲಿದೆ. ಇದು ಕ್ರಾಸ್‌ಒವರ್-ಇಶ್ ಹ್ಯಾಂಡ್ಲಿಂಗ್ ಡೈನಾಮಿಕ್ಸ್ ಅನ್ನು ಹೊಂದಿರುತ್ತದೆ. ಹೆಚ್ಚಿದ ಉದ್ದ ಮತ್ತು ವಿಸ್ತೃತ ವೀಲ್‌ಬೇಸ್ ಬೂಟ್ ಸ್ಪೇಸ್‌ಗೆ ಧಕ್ಕೆಯಾಗದಂತೆ ಥರ್ಡ್ ರೋನಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ನೀಡಲಾಗಿದೆ. ಇದರ ಹಿಂದಿನ ಓವರ್‌ಹ್ಯಾಂಗ್ ಸ್ಟೋರೇಜ್ ಜಾಗಕ್ಕೆ ಸೇರಿಸುತ್ತದೆ. ಸದ್ಯಕ್ಕೆ ಇದರ ಇಂಟೀರಿಯರ್ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಇದನ್ನೂ ಓದಿ : Call record: ಫೋನಿನಲ್ಲಿ ಮಾತಾಡುವಾಗ ಹೀಗೊಂದು ಸೌಂಡ್ ಬರುತ್ತಿದೆಯೇ? ನಿಮ್ಮ ಕಾಲ್ ರೆಕಾರ್ಡ್ ಆಗ್ತಿದೆ ಎಂದರ್ಥ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.