Portable Hand Warmer: ದೇಶದಲ್ಲಿ ಪ್ರಸ್ತುತ ಚಳಿಗಾಲ ಆರಂಭವಾಗಿದೆ. ಚಂಡಮಾರುತದ ಪ್ರಭಾವದಿಂದಾಗಿ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಗುತ್ತಿದ್ದು, ಚಳಿಯ ತೀವ್ರತೆಯೂ ಹೆಚ್ಚಾಗಿದೆ. ಚಳಿಯಿಂದ ರಕ್ಷಣೆ ಪಡೆಯಲು ಸ್ವೆಟರ್‌ಗಳು ಮತ್ತು ಜಾಕೆಟ್‌ಗಳನ್ನು ಧರಿಸುತ್ತೇವೆ. ಸಾಮಾನ್ಯವಾಗಿ, ತೀವ್ರ ಚಳಿಯ ಸಂದರ್ಭದಲ್ಲಿ ಕೆಲವರು ಕೈಗವಸುಗಳನ್ನು ಸಹ ಧರಿಸುತ್ತಾರೆ. ಆದಾಗ್ಯೂ ಕೈಗಳು ನಡುಗುವುದನ್ನು ಮಾತ್ರ ತಡೆಯಲು ಸಾಧ್ಯವಾಗುವುದಿಲ್ಲ. ಆದರೆ, ತಂತ್ರಜ್ಞಾನ ಯುಗದಲ್ಲಿ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. 400ರೂ.ಗಳು ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ನೀಡಲಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಹ್ಯಾಂಡ್ ವಾರ್ಮರ್ ಸಾಧನಗಳು ಕೈಗೆಟುಕುವ ದರದಲ್ಲಿ ಲಭ್ಯವಿವೆ. ಆಟಿಕೆಯಂತೆ ಕಾಣುವ ಪೋರ್ಟಬಲ್ ಹ್ಯಾಂಡ್ ವಾರ್ಮರ್ ಅನ್ನು ನಿಮ್ಮ ಜೇಬು ಅಥವಾ ಬ್ಯಾಗ್‌ನಲ್ಲಿ ಸುಲಭವಾಗಿ ಎಲ್ಲಿ ಬೇಕಾದರೂ ಸಾಗಿಸಬಹುದಾಗಿದೆ. ಇದರಲ್ಲಿ ಸಣ್ಣ ಬಲ್ಬ್ ಕೂಡ ಉರಿಯುತ್ತದೆ. ಈ ಸಾಧನವು ಚಿಟಿಕೆಯಲ್ಲಿ ನಿಮ್ಮ ಕೈಗಳನ್ನು ಬೆಚ್ಚಗಾಗಿಸುತ್ತದೆ. ಅಂತಹ ಪೋರ್ಟಬಲ್ ಹ್ಯಾಂಡ್ ವಾರ್ಮರ್ ಗಳಲ್ಲಿ ಬೆನ್ ಕಂಪನಿಯ ಪೋರ್ಟಬಲ್ ಹ್ಯಾಂಡ್ ವಾರ್ಮರ್ ಕೂಡ ಒಂದು. ಇದರ ಬೆಲೆ, ವೈಶಿಷ್ಟ್ಯಗಳನ್ನು ತಿಳಿಯಿರಿ.
ಇದನ್ನೂ ಓದಿ- ಪ್ರಬಲ ಭೂಕಂಪಕ್ಕೂ ಅಲುಗಾಡದ ವಿಶ್ವದ ಅತ್ಯಂತ ಬಲವಾದ ಹಾಸಿಗೆ ಇದುವೇ
ಪೋರ್ಟಬಲ್ ಹ್ಯಾಂಡ್ ವಾರ್ಮರ್ ವೈಶಿಷ್ಟ್ಯಗಳು:
ವಾಸ್ತವವಾಗಿ, ಎರಡು ಬಗೆಯ ಬೆನ್ ಹ್ಯಾಂಡ್ ಪೋರ್ಟಬಲ್ ಹ್ಯಾಂಡ್ ವಾರ್ಮರ್ ಗಳು ಲಭ್ಯವಿದೆ. ಅದರಲ್ಲಿ ಒಂದು ಕಡಿಮೆ ಸಾಮರ್ಥ್ಯದ ವಾರ್ಮರ್ ಆಗಿದ್ದರೆ, ಇನ್ನೊಂದು ಹೆಚ್ಚಿನ ಸಾಮರ್ಥ್ಯದ ವಾರ್ಮರ್ ಆಗಿದೆ. ಕಡಿಮೆ ಸಾಮರ್ಥ್ಯದ ವಾರ್ಮರ್ ನಲ್ಲಿ ಬಳಕೆದಾರರು 45 ರಿಂದ 50 ಡಿಗ್ರಿ ತಾಪಮಾನವನ್ನು ಪಡೆಯುತ್ತಾರೆ. ಅಂತೆಯೇ, ಹೆಚ್ಚಿನ ಸಾಮರ್ಥ್ಯದ ವಾರ್ಮರ್ ನಲ್ಲಿ 50 ರಿಂದ 55 ಡಿಗ್ರಿಗಳವರೆಗೆ ತಾಪಮಾನ ಲಭ್ಯವಾಗಲಿದೆ. ಇದು 2400mAh ನ ಶಕ್ತಿಶಾಲಿ ಬ್ಯಾಟರಿಯನ್ನು ಸಹ ಹೊಂದಿದೆ. ಇದು ಸುಮಾರು 3.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ ಮತ್ತು 6 ರಿಂದ 8 ಗಂಟೆಗಳವರೆಗೆ ಬಳಸಬಹುದಾಗಿದೆ.
ಇದನ್ನೂ ಓದಿ- ಅತ್ಯಂತ ಅಗ್ಗದ ಬೆಲೆಯ LED ನೈಟ್ ಲ್ಯಾಂಪ್ ಇದು ! ಹೋಲ್ಡರ್ ನ ಅಗತ್ಯವೂ ಇಲ್ಲ
ಭಾರತದಲ್ಲಿ ಬೆನ್ ಪೋರ್ಟಬಲ್ ಹ್ಯಾಂಡ್ ವಾರ್ಮರ್ ಬೆಲೆ:
ಭಾರತದಲ್ಲಿ ಬೆನ್ ಪೋರ್ಟಬಲ್ ಹ್ಯಾಂಡ್ ವಾರ್ಮರ್‌ನ ಎಂಆರ್ಪಿ ಬೆಲೆ 899 ರೂ. ಆಗಿದೆ. ಆದರೆ, ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಅಮೆಜಾನ್ ನಲ್ಲಿ ಈ ಸಾಧನದ ಮೇಲೆ 56% ಡಿಸ್ಕೌಂಟ್ ನೀಡಲಾಗುತ್ತಿದ್ದು, ಇದನ್ನು ಕೇವಲ 399 ರೂ.ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ ನೀವು ಈ ಸಾಧನವನ್ನು ಆಫ್‌ಲೈನ್ ಮಾರುಕಟ್ಟೆಯಿಂದಲೂ ಖರೀದಿಸಬಹುದಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.