ಬೆಂಗಳೂರು: ಬೇಸಿಗೆ ಕಾಲದಲ್ಲಿ ಬಿಸಿಲಿನ ಬೇಗೆಯ ಜೊತೆಗೆ ಹೆಚ್ಚು ಕಿರಿ ಕಿರಿ ಉಂಟು ಮಾಡುವ ಸಮಸ್ಯೆ ಎಂದರೆ ವಿದ್ಯುತ್ ಬಿಲ್. ವಾಸ್ತವವಾಗಿ, ಈ ಸೀಸನ್ ನಲ್ಲಿ ಎಸಿ, ಕೂಲರ್ ಮತ್ತು ಫ್ಯಾನ್‌ಗಳು ಹೆಚ್ಚು ಓಡುತ್ತವೆ. ದಿನವಿಡೀ ಇವುಗಳ ಚಾಲನೆಯಿಂದಾಗಿ ವಿದ್ಯುತ್ ಬಿಲ್ ಕೂಡ ಅತಿಯಾಗಿಯೇ ಬರುತ್ತದೆ. ಆದರೆ, ಇನ್ನು ಮುಂದೆ ಈ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ನೀವು ನಿಮ್ಮ ಮನೆಯಲ್ಲಿ ಸೌರ ಫಲವನ್ನು ಸ್ಥಾಪಿಸಿದರೆ ದಿನವಿಡೀ ಎಸಿ, ಕೂಲರ್, ಫ್ಯಾನ್ ಬಳಸಿದರೂ ಕೂಡ ಒಂದೇ ಒಂದು ರೂಪಾಯಿಯೂ ವಿದ್ಯುತ್ ಬಿಲ್ ಬರುವುದಿಲ್ಲ. ಹಾಗಿದ್ದರೆ, ಮನೆಯಲ್ಲಿ ಸೌರ ಫಲವನ್ನು ಸ್ಥಾಪಿಸಲು ಏನು ಮಾಡಬೇಕು? ಇದರ ಪ್ರಯೋಜನಗಳೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.


COMMERCIAL BREAK
SCROLL TO CONTINUE READING

ಸೌರಫಲಕಗಳಿಗೆ ತಗುಲುವ ವೆಚ್ಚ:
ವಾಸ್ತವವಾಗಿ, ನೀವು ದೊಡ್ಡ ಗಾತ್ರದ ಸೌರ ಫಲಕ ಎಂದರೆ ಸೋಲಾರ್ ಪ್ಯಾನೆಲ್ ಕೊಳ್ಳಲು  ಒಂದು ಲಕ್ಷದಿಂದ ಒಂದೂವರೆ ಲಕ್ಷ ರೂಪಾಯಿವರೆಗೆ ವೆಚ್ಚವಾಗುತ್ತದೆ. ಆದರೆ, ನೀವು ಒಂದೇ ಬಾರಿಗೆ ಇಷ್ಟು ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ. ಬದಲಿಗೆ, ಸರ್ಕಾರದಿಂದ ಇದಕ್ಕಾಗಿ ಸಹಾಯಧನ ಲಭ್ಯವಿದ್ದು 1.25 ಲಕ್ಷ ರೂ.ಮೌಲ್ಯದ ಸೋಲಾರ್ ಪ್ಯಾನಲ್ ಅನ್ನು ಕೇವಲ 75 ಸಾವಿರಕ್ಕೆ ಖರೀದಿಸಬಹುದಾಗಿದೆ. ಈ ಸೌರಫಲಕಗಳು ನಿಮಗೆ ವಿದ್ಯುತ್ ಬಿಲ್‌ನ ಸಮಸ್ಯೆಯಿಂದ ಪರಿಹಾರ ನೀಡುವುದರ ಜೊತೆಗೆ ಪರಿಸರ ಸ್ನೇಹಿಯೂ ಆಗಿದೆ.


ಇದನ್ನೂ ಓದಿ- ಬರುತ್ತಿದೆ ಅಗ್ಗದ ಬೆಲೆಗೆ ಬೆಸ್ಟ್ ಫ್ಯಾಮಿಲಿ ಫ್ರೆಂಡ್ಲಿ 7 ಸೀಟರ್ ಕಾರುಗಳು: ಇವುಗಳ ಫೀಚರ್’ಗೆ ಫಿದಾ ಆಗದಿವರಿಲ್ಲ!


ಸೋಲಾರ್ ಪ್ಯಾನೆಲ್ ಅನ್ನು ಎಲ್ಲಿ ಸ್ಥಾಪಿಸಬಹುದು?
ಸೋಲಾರ್ ಪ್ಯಾನೆಲ್ ಅನ್ನು ಸ್ಥಾಪಿಸುವುದು ಕೂಡ ತುಂಬಾ ಸುಲಭ. ನೀವು ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಅಥವಾ ಯಾವುದೇ ತೆರೆದ ಸ್ಥಳದಲ್ಲಿ ನೀವು ಸೋಲಾರ್ ಪ್ಯಾನೆಲ್ ಅನ್ನು ಸುಲಭವಾಗಿ ಸ್ಥಾಪಿಸಬಹುದಾಗಿದೆ. ಸರ್ಕಾರದ ಯೋಜನೆಗಳಲ್ಲಿ ಸೌರ ಫಲಕಗಳನ್ನು ನೀಡಲಾಗುತ್ತದೆ. ನಿಮ್ಮ ಮನೆಯಲ್ಲಿ ಸೋಲಾರ್ ಪ್ಯಾನೆಲ್ ಸ್ಥಾಪಿಸಲು ಬಯಸಿದರೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.
>> ಮೊದಲಿಗೆ ಸರ್ಕಾರದ ಯೋಜನೆಗಳಲ್ಲಿ ನೀಡಲಾಗುವ ಸೌರ ಫಲಕಗಳಿಗಾಗಿ ಅರ್ಜಿಯನ್ನು ಸಲ್ಲಿಸಿ.
>>  ಸೌರ ಫಲಕಗಳನ್ನು ಅಳವಡಿಸಲು ಬಯಸುವವರು ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. 
>> 3ಕೆಡಬ್ಲ್ಯೂ ಸೋಲಾರ್ ಪ್ಯಾನಲ್ ಅಳವಡಿಸಲು 72 ಸಾವಿರ ರೂ. ಆದರೆ ಇದರಲ್ಲಿ ಶೇ 40ರಷ್ಟು ಸಬ್ಸಿಡಿ ದೊರೆಯಲಿದೆ.  ಅಂದರೆ ಬೆಲೆ 48 ಸಾವಿರ ರೂ. ವರೆಗೆ ವೆಚ್ಚ ತಗುಲಲಿದೆ.
>>  ಅದೇ ಸಮಯದಲ್ಲಿ, 500KW ಸೌರ ಫಲಕಗಳ ಮೇಲೆ 20 ಪ್ರತಿಶತ ಸಬ್ಸಿಡಿ ಲಭ್ಯವಿರುತ್ತದೆ. ಇದನ್ನು 25 ವರ್ಷಗಳವರೆಗೆ ಬಳಸಬಹುದು. 


ಇದನ್ನೂ ಓದಿ- UPI ಐಡಿಯಲ್ಲಿ ಮಿಸ್ ಆಗಿ ಬೇರೆ ಖಾತೆಗೆ ಹಣ ಹೋಗಿದೆಯೇ? ಅದನ್ನು ಈ ರೀತಿ ಮರಳಿ ಪಡೆಯಿರಿ


ಸೌರ ಫಲಕಕ್ಕಾಗಿ ಅರ್ಜಿ ಸಲ್ಲಿಸಲು ಇವು ಅತ್ಯಗತ್ಯ:
ನೀವು ಸರ್ಕಾರದ ಯೋಜನೆಯನ್ನು ಬಳಸಿಕೊಂಡು ನಿಮ್ಮ ಮನೆಯಲ್ಲಿ ಸೌರ ಫಲಕವನ್ನು ಅಳವಡಿಸಲು ಬಯಸಿದರೆ ಇವು ಅತ್ಯಗತ್ಯ.
* ನೀವು ಖಾಯಂ ನಿವಾಸಿಯಾಗಿರಬೇಕು.
* ಸೋಲಾರ್ ಪ್ಯಾನೆಲ್ ಅಳವಡಿಸಲು, ಪ್ಯಾನ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಮುಂತಾದ ಸರ್ಕಾರಿ ಐಡಿಗಳ ಅಗತ್ಯವಿರುತ್ತದೆ.
* ಸಬ್ಸಿಡಿ ಪಡೆಯಲು ಆದಾಯ ಪ್ರಮಾಣ ಪತ್ರ, ವಿದ್ಯುತ್ ಬಿಲ್ ಸಲ್ಲಿಸಬೇಕಾಗುತ್ತದೆ.
* ನೀವು ಎಲ್ಲಿ ಸೌರ ಫಲಕಗಳನ್ನು ಸ್ಥಾಪಿಸಲು ಬಯಸುತ್ತೀರಿ ಆ ಜಾಗದ ಫೋಟೋವನ್ನು ಕೂಡ ಅರ್ಜಿಯೊಂದಿಗೆ ಲಗತ್ತಿಸಬೇಕಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.