AC Bed Sheet Cooling Gel Mattress: ದಿನೇ ದಿನೇ ಹಣದುಬ್ಬರ ಹೆಚ್ಚಾಗುತ್ತಲೇ ಇದೆ. ಈ ನಡುವೆ ಎಸಿ-ಕೂಲರ್ ಬಳಕೆಯಿಂದಾಗಿ ವಿದ್ಯುತ್ ಬಿಲ್ ಹೆಚ್ಚಾಗುವ ಚಿಂತೆಯೂ ಜನಸಾಮಾನ್ಯರನ್ನು ಹೆಚ್ಚು ಬಾಧಿಸುತ್ತಿದೆ. ಆದರೆ, ಬೇಸಿಗೆಯಲ್ಲಿ ನೀವು ನೆಮ್ಮದಿಯಿಂದ ನಿದ್ರೆ ಮಾಡಲು ಎಸಿ-ಕೂಲರ್ ಬೇಕೇ ಆಗಿಲ್ಲ!  ಬೇಸಿಗೆಯಲ್ಲಿ ಆರಾಮದಾಯಕ ನಿದ್ರೆಗಾಗಿ ಎಸಿ-ಕೂಲರ್ ಬದಲಿಗೆ ಕೂಲಿಂಗ್ ಬೆಡ್ ಶೀಟ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಅದುವೇ ಎಸಿ ಬೆಡ್ ಶೀಟ್ ಅಥವಾ ಕೂಲಿಂಗ್ ಜೆಲ್ ಮ್ಯಾಟ್ರೆಸ್. 


COMMERCIAL BREAK
SCROLL TO CONTINUE READING

ಏನಿದು  ಎಸಿ ಬೆಡ್ ಶೀಟ್ ಅಥವಾ ಕೂಲಿಂಗ್ ಜೆಲ್ ಮ್ಯಾಟ್ರೆಸ್? 
ಸಾಮಾನ್ಯವಾಗಿ ಕೂಲಿಂಗ್ ಜೇಲ್ ಮ್ಯಾಟ್ರೆಸ್  ಅನ್ನು ಎಸಿ ಬೆಡ್ ಶೀಟ್ ಎಂದೇ ಕರೆಯಲಾಗುತ್ತದೆ. ಇದನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಎರಡೂ ಕಡೆ ಬಹಳ ಸುಲಭವಾಗಿ ಖರೀದಿಸಬಹುದಾಗಿದೆ. ಸಾಮಾನ್ಯವಾಗಿ ಇದರ ಬೆಲೆ ಸುಮಾರು 1,500 ರೂಪಾಯಿಗಳಷ್ಟಿರುತ್ತದೆ. ಆದರೆ, ನೀವು ಇದನ್ನು ಜನಪ್ರಿಯ ಈ-ಕಾಮರ್ಸ್ ಸೈಟ್ ಅಮೆಜಾನ್‌ನಿಂದ ತುಂಬಾ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. 


ಇದನ್ನೂ ಓದಿ- ಎಸಿಯಂತಹ ತಂಪಾದ ಹವಾ ಪಡೆಯಲು ಇಂದೇ ಮನೆಗೆ ತನ್ನಿ ವಾಟರ್ ಸ್ಪ್ರಿಂಕ್ಲರ್ ಫ್ಯಾನ್


ಬೆಡ್ ಶೀಟ್ ಕೂಲಿಂಗ್ ಅನ್ನು ಹೇಗೆ ನೀಡಬಲ್ಲದು ಎಂದು ನೀವು ಯೋಚಿಸುತ್ತಿದ್ದರೆ ಇದು ಜೆಟ್ ತಂತ್ರಜ್ಞಾನವನ್ನು ಬಾಳಾಯಿ ಕೂಲಿಂಗ್ ನೀಡುತ್ತದೆ. ಈ ಬೆಡ್ ಶೀಟ್ ಅನ್ನು ಸಾಕೆಟ್‌ಗೆ ಪ್ಲಗ್ ಮಾಡಿದಾಗ, ಅದು ನಿಮಿಷಗಳಲ್ಲಿ ಬೆಡ್ ಶೀಟ್ ಅನ್ನು ತಂಪಾಗಿಸುತ್ತದೆ. ಈ ಬೆಡ್ ಶೀಟ್ ನ ಬಹು ಮುಖ್ಯ ವೈಶಿಷ್ಟ್ಯವೆಂದರೆ ಇದು ಯಾವುದೇ ರೀತಿಯ ಸದ್ದು, ಗದ್ದಲವಿಲ್ಲದೇ, ಕಂಪಿಸದೆ ತನ್ನ ಕೆಲಸವನ್ನು ಮಾಡುವ ಸಾಮರ್ಥ್ಯವನ್ನು ಹೊಂದಿದೆ. 


ಇದನ್ನೂ ಓದಿ- WhatsApp New Scam: ವಾಟ್ಸಾಪ್ ನಲ್ಲಿ ಈ ಮೊಬೈಲ್ ನಂಬರ್‌ಗಳಿಂದ ಕರೆ ಬಂದರೆ ಹುಷಾರ್!


ಎಸಿ ಬೆಡ್ ಶೀಟ್ ಅಥವಾ ಕೂಲಿಂಗ್ ಜೆಲ್ ಮ್ಯಾಟ್ರೆಸ್ ಸ್ವಚ್ಛಗೊಳಿಸುವಾಗ ಇರಲಿ ಎಚ್ಚರ: 
ಒಂದೊಮ್ಮೆ ಕೂಲಿಂಗ್ ಬೆಡ್ ಶೀಟ್ ಕೊಳಕಾಗಿದ್ದರೆ ಅದನ್ನು ಒಂದು ಒಣ ಬಟ್ಟೆಯಿಂದ ಸ್ವಚ್ಛಗೊಳಿಸಬಹುದು. ಆದರೆ, ಅಪ್ಪಿತಪ್ಪಿಯೂ ಒದ್ದೆ ಬಟ್ಟೆಯನ್ನು ಬಳಸಿ ಇದನ್ನು ಸ್ವಚ್ಛಗೊಳಿಸಬಾರದು. ಒದ್ದೆಯಾದ ಬಟ್ಟೆ ಬಳಸಿ ಈ ಬೆಡ್ ಶೀಟ್ ಕ್ಲೀನ್ ಮಾಡುವುದರಿಂದ ಅದು ಹಾನಿಗೊಳಗಾಗಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.