ಈ ಬಿರು ಬೇಸಿಗೆಯಲ್ಲಿ ಮೂರು ಹೊತ್ತು ಫ್ಯಾನ್ ಚಾಲನೆಯಲ್ಲಿದ್ದರೂ ಸಹ ತಂಪಾದ ಹವಾ ಬರುತ್ತಿಲ್ಲ ಎಂದು ಕೆಲವರು ದೂರುತ್ತಾರೆ. ಹಾಗಂತ, ಕೂಲರ್, ಎಸಿ ಕೊಳ್ಳುವ ಬಗ್ಗೆ ಯೋಚಿಸಲು ಬಜೆಟ್ ದೊಡ್ಡ ಸಮಸ್ಯೆ ಆಗುತ್ತದೆ. ಇವೆಲ್ಲದರಿಂದ ಪರಿಹಾರ ಪಡೆಯಲು ತುಂಬಾ ಪ್ರಯೋಜನಕಾರಿ ವಾಟರ್ ಸ್ಪ್ರಿಂಕ್ಲರ್ ಫ್ಯಾನ್. ಈ ಫ್ಯಾನ್ ಎಸಿಯಂತೆ ಹವಾ ನೀಡಬಲ್ಲ ಫ್ಯಾನ್ ಆಗಿದೆ.
ಏನಿದು ವಾಟರ್ ಸ್ಪ್ರಿಂಕ್ಲರ್ ಫ್ಯಾನ್?
ಕಡಿಮೆ ಬಜೆಟ್‌ನಲ್ಲಿ ಲಭ್ಯವಿರುವ ಎಸಿಯಂತಹ ಹವಾ ನೀಡಬಲ್ಲ, ಸಾಮಾನ್ಯ ಟೇಬಲ್ ಫ್ಯಾನ್ ಅಥವಾ ಸೀಲಿಂಗ್ ಫ್ಯಾನ್‌ಗಿಂತ ಕೊಂಚ ಭಿನ್ನವಾಗಿದ್ದು, ಈ ಫ್ಯಾನ್ ನೀರಿನ ಸಿಂಚನದೊಂದಿಗೆ ತಂಪಾದ ಹವಾ ನೀಡುತ್ತದೆ. ಇದನ್ನು ಐಸ್ ಫ್ಯಾನ್ ಎಂತಲೂ ಕರೆಯುವುದುಂಟು.
ಇದನ್ನೂ ಓದಿ- ವಾಟ್ಸಾಪ್‌ನಲ್ಲಿ 60 ಸೆಕೆಂಡ್‌ಗಳ ಶಾರ್ಟ್ ವಿಡಿಯೋ ಕಳಿಸುವ ಅವಕಾಶ
ಮಾರುಕಟ್ಟೆಯಲ್ಲಿ ಹಲವು ಬಗೆಯ ವಾಟರ್ ಸ್ಪ್ರಿಂಕ್ಲರ್ ಫ್ಯಾನ್‌ಗಳು ಲಭ್ಯವಿವೆ. ಇದು ನೀರಿನ ಹನಿಗಳ ಮಿಶ್ರಣದೊಂದಿಗೆ ಗಾಳಿಯನ್ನು ನೀಡುತ್ತದೆ. ಈ ಫ್ಯಾನ್ ಶಕ್ತಿಯುತ ಕೂಲರ್ ಆಗಿದ್ದು, ಇದು ಬಿಸಿ ಗಾಳಿಯನ್ನು ಸಹ ತಂಪಾಗಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದನ್ನೂ ಓದಿ- ಕಡಿಮೆ ವಿದ್ಯುತ್ ಬಳಕೆ; ಭಾರೀ ಅಗ್ಗದ ಬೆಲೆಯಲ್ಲಿ.. ಬೇಸಿಗೆಯಲ್ಲೂ ಕಾಶ್ಮೀರದ ಅನುಭವ ನೀಡುತ್ತೆ ಈ ಪುಟ್ಟ Air Cooler
ವಾಟರ್ ಸ್ಪ್ರಿಂಕ್ಲರ್ ಫ್ಯಾನ್‌ನಲ್ಲಿ ಫ್ಯಾನ್ ರೆಕ್ಕೆಗಳು ಮಾತ್ರವಲ್ಲದೆ ಇದನ್ನು ನೀರಿನ ಟ್ಯಾಪ್‌ಗೆ ಸಂಪರ್ಕಿಸಲಾಗಿದ್ದು ಇದು ಸಣ್ಣ ರಂಧ್ರಗಳನ್ನು ಹೊಂದಿದ್ದು ಅದು ನೀರಿನ ಶವರ್ ಅನ್ನು ಉತ್ಪಾದಿಸುತ್ತದೆ. ನೀರಿನ ಟ್ಯಾಪ್ ಆನ್ ಮಾಡಿ ಫ್ಯಾನ್ ಹಾಕಿದಾಗ ಗಲೈಯ ಜೊತೆಗೆ ತಂಪಾದ ನೀರಿನ ಸಿಂಚನವಾಗುತ್ತದೆ. ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಸ್ಪ್ರಿಂಕ್ಲರ್‌ಗಳ ಸಂಖ್ಯೆಯನ್ನು ಸರಿಹೊಂದಿಸಬಹುದಾದ್ದರಿಂದ ನಿಮಗೆ ಅಗತ್ಯವಾದಷ್ಟು ತಂಪಾದ ಹವಾವನ್ನು ಪಡೆಯಬಹುದು.
ಲಭ್ಯತೆ:
ಈ ವಾಟರ್ ಸ್ಪ್ರಿಂಕ್ಲರ್ ಫ್ಯಾನ್ ಅಮೆಜಾನ್‌ನಲ್ಲಿ 2,587 ರೂ.ಗಳಿಗೆ ಲಭ್ಯವಾಗಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.