Nokia PureBook X14: Smart TV ಬಳಿಕ Laptop ಸೆಗ್ಮೆಂಟ್ ಗೆ ಎಂಟ್ರಿ ನೀಡಿದ Nokia, ತೂಕ ಕೇವಲ 1.1 ಕೆ.ಜಿ
Nokia PureBook X14 - ಸ್ಮಾರ್ಟ್ ಟಿವಿ ಬಳಿಕ Nokia ಇದೀಗ Laptop ವಿಭಾಗಕ್ಕೆ ಎಂಟ್ರಿ ನೀಡಿದೆ.. ನೋಕಿಯಾದ ಮೊದಲ ಲ್ಯಾಪ್‌ಟಾಪ್ ಬಿಡುಗಡೆಯಾಗಿದೆ.
ನವದೆಹಲಿ: Nokia PureBook X14 - ಸ್ಮಾರ್ಟ್ ಟಿವಿ ಬಳಿಕ Nokia ಇದೀಗ Laptop ವಿಭಾಗಕ್ಕೆ ಎಂಟ್ರಿ ನೀಡಿದೆ.. ನೋಕಿಯಾದ ಮೊದಲ ಲ್ಯಾಪ್‌ಟಾಪ್ ಬಿಡುಗಡೆಯಾಗಿದೆ. ನೋಕಿಯಾ ತನ್ನ ಮೊದಲ ಲ್ಯಾಪ್‌ಟಾಪ್ ನೋಕಿಯಾ ಪ್ಯೂರ್‌ಬುಕ್ ಎಕ್ಸ್ 14 ಅನ್ನು ಫ್ಲಿಪ್‌ಕಾರ್ಟ್ ಸಹಯೋಗದೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ನೋಕಿಯಾ ಲ್ಯಾಪ್‌ಟಾಪ್ 14 ಇಂಚಿನ ಫುಲ್ ಎಚ್‌ಡಿ ಡಿಸ್ಪ್ಲೇ ಹೊಂದಿದ್ದು ಕೇವಲ 1.1 ಕೆಜಿ ತೂಕ ಹೊಂದಿದೆ. ಈ ನೋಕಿಯಾ ಲ್ಯಾಪ್‌ಟಾಪ್ ಫ್ಲಿಪ್‌ಕಾರ್ಟ್‌ನಲ್ಲಿ(Flipkart) ಮಾರಾಟಕ್ಕೆ ಲಭ್ಯವಿದೆ.
ನೋಕಿಯಾ ಲ್ಯಾಪ್ ಟಾಪ್ ಬೆಲೆ ಎಷ್ಟು?
Nokia PureBook X14 ಲ್ಯಾಪ್‌ಟಾಪ್‌ನ ಬೆಲೆ 59,990 ರೂ. ಆಗಿದೆ. ಈ ಲ್ಯಾಪ್‌ಟಾಪ್ ಡಿಸೆಂಬರ್ 18 ರಿಂದ ಫ್ಲಿಪ್‌ಕಾರ್ಟ್ ಮೂಲಕ ಪ್ರೀ ಬುಕಿಂಗ್ ಗಾಗಿ ಲಭ್ಯವಾಗಲಿದೆ. ಆದರೆ ಲ್ಯಾಪ್‌ಟಾಪ್‌ನ ಮಾರಾಟ ದಿನಾಂಕವನ್ನು ಕಂಪನಿಯು ಇನ್ನೂ ಹಂಚಿಕೊಂಡಿಲ್ಲ. ಫ್ಲಿಪ್‌ಕಾರ್ಟ್ ಲಿಸ್ಟಿಂಗ್ ನಲ್ಲಿ ಲ್ಯಾಪ್‌ಟಾಪ್‌ನ ಬೆಲೆ 90,000 ರೂ. ತೋರಿಸಲಾಗಿದೆ. ನೋಕಿಯಾ ಲ್ಯಾಪ್‌ಟಾಪ್‌ಗಳನ್ನು ಮ್ಯಾಟ್ ಬ್ಲ್ಯಾಕ್ ಕಲರ್ ಆಯ್ಕೆಯಲ್ಲಿ ನೀವು ಖರೀದಿಸಬಹುದು. ಈ ನೋಕಿಯಾ ಲ್ಯಾಪ್‌ಟಾಪ್ ಅಲ್ಟ್ರಾಲೈಟ್ ಫಾರ್ಮ್ ಫ್ಯಾಕ್ಟರ್ ಮತ್ತು ಅಲ್ಟ್ರಾ- ವಿವಿಡ್ ಪಿಕ್ಚರ್ ಕ್ವಾಲಿಟಿ ಜೊತೆಗೆ ಬರುತ್ತದೆ.
ಇದನ್ನು ಓದಿ-Flipkart Mobile Bonanza Sale: ಭಾರಿ ರಿಯಾಯಿತಿಯೊಂದಿಗೆ ಸ್ಮಾರ್ಟ್‌ಫೋನ್ ಖರೀದಿಸುವ ಅವಕಾಶ
8GB RAM ಹಾಗೂ 512 GB ಸ್ಟೋರೇಜ್
Nokia PureBook X14 ಲ್ಯಾಪ್ ಟಾಪ್ ನಲ್ಲಿ ಇಂಟೆಲ್ ನ 10 ನೆ ತಲೆಮಾರಿನ ಪ್ರಾಸೆಸ್ಸರ್ ಇದ್ದು, Windows 10 ಚಾಲಿತವಾಗಿದೆ. ಲ್ಯಾಪ್ ಟಾಪ್ ನ ಸ್ಕ್ರೀನ್ ನಲ್ಲಿ ಅತ್ಯಂತ ತಿಳುವಾದ ಬೆಜಲ್ಸ್ ಹಾಗೂ ದೊಡ್ಡ ಟಚ್ ಪ್ಯಾಡ್ ನೀಡಲಾಗಿದೆ. ಇದರಲ್ಲಿ ಡಾಲ್ಬಿ ವಿಜನ್ ನೊಂದಿಗೆ 14 ಇಂಚಿನ Full HD IPS ಡಿಸ್ಪ್ಲೇ ನೀಡಲಾಗಿದೆ. ಇದರ ಸ್ಕ್ರೀನ್ ನ ಟ್ರೂ ಬಾಡಿ ರೆಶ್ಯೋ ಶೇ.86 ರಷ್ಟಾಗಿದೆ. ಈ ಲ್ಯಾಪ್ ಟಾಪ್ ನಲ್ಲಿ 8GB RAM ಹಾಗೂ 512 GB ಸಾಮರ್ಥ್ಯದ ಸ್ಟೋರೇಜ್ ನೀಡಲಾಗಿದೆ. ಈ ಲ್ಯಾಪ್ ಟಾಪ್ ಅಗಲ 16.88 mm ಆಗಿದೆ.
ಇದನ್ನು ಓದಿ- ಶೀಘ್ರವೇ ಸರ್ಕಾರ ಜಾರಿಗೆ ತರಲಿದೆ ದೇಸಿ ಇ-ಕಾಮರ್ಸ್ ಪ್ಲಾಟ್ಫಾರ್ಮ್, Amazon ಹಾಗೂ Flipkartಗೆ ಭಾರಿ ಪೈಪೋಟಿ
ಫುಲ್ ಚಾರ್ಜ್ ಮಾಡಿದರೆ 8 ಗಂಟೆ ಕೆಲಸ ಮಾಡುತ್ತದೆ
Nokia PureBook X14 ಲ್ಯಾಪ್ ಟಾಪ್ ನಲ್ಲಿ IR ಸೇನ್ಸರ್ಸ್ ಜೊತೆಗೆ ವೆಬ್ ಕ್ಯಾಮ್ ನೀಡಲಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ಈ ಲ್ಯಾಪ್ ಟಾಪ್ 8 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಲ್ಯಾಪ್ ಟಾಪ್ 65W ಚಾರ್ಜರ್ ನೊಂದಿಗೆ ಬರುತ್ತದೆ. ನೋಕಿಯಾ ಲ್ಯಾಪ್ ಟಾಪ್ ಡ್ಯುಯೆಲ್ ಬ್ಯಾಂಡ್ ವೈ-ಫೈ, ಬ್ಲೂ ಟೂಥ್ 5.1, 2 USB 3.1 ಪೋರ್ಟ್ಸ್ ಹಾಗೂ USB 2.0 ಪೋರ್ಟ್, HDMI ಪೋರ್ಟ್, ಇಥರ್ನೆಟ್ ಜ್ಯಾಕ್, ಆಡಿಯೋ ಔಟ್ ಗಳಂತಹ ಕನೆಕ್ಟಿವಿಟಿ ಆಪ್ಶನ್ ಗಳನ್ನು ಒಳಗೊಂಡಿದೆ.