ನವದೆಹಲಿ: Nokia Rumour - ವಿಶ್ವದ ವಿವಿಧ ಕಂಪನಿಗಳು ನಿತ್ಯ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ವಿವಿಧ ಪ್ರದೇಶಗಳಲ್ಲಿ ಬಿಡುಗಡೆ ಮಾಡುತ್ತವೆ. ಇವುಗಳಲ್ಲಿನ ಕೆಲ ಸ್ಮಾರ್ಟ್ ಫೋನ್ ಗಳ ಮಾಹಿತಿ ಬಿಡುಗಡೆಗೂ ಮುನ್ನವೇ ಬಳಕೆದಾರರ ಬಳಿ ತಲುಪುತ್ತದೆ.  ಇನ್ನೂ ಕೆಲ ಸ್ಮಾರ್ಟ್ ಫೋನ್ ಗಳು ಸದ್ದಿಲ್ಲದೆ ಲಾಂಚ್ ಆಗುತ್ತವೆ. ಕೆಲವು ಕೆಲ ಸ್ಮಾರ್ಟ್ ಫೋನ್ ಗಳ ಮಾಹಿತಿಗಳು ನಮಗೆ ಅಧಿಕೃತವಾಗಿ ಅಲ್ಲದೆ ಟಿಪ್‌ಸ್ಟರ್‌ಗಳು ಮತ್ತು ಲೀಕ್ ಮೂಲಕ ಸಿಗುತ್ತವೆ. ಪ್ರಸ್ತುಗ  ನಾವು ಮಾತನಾಡುತ್ತಿರುವುದು ನೋಕಿಯಾ ಸ್ಮಾರ್ಟ್ಫೋನ್  ಕುರಿತು. ಈ ಸ್ಮಾರ್ಟ್ ಫೋನ್ ಮಾಹಿತಿಯನ್ನು ನೋಕಿಯಾ ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ, ಆದರೆ, ಈ ಸ್ಮಾರ್ಟ್ ಫೋನ್ ಮಾಹಿತಿ ಮಾಧ್ಯಮಗಳಿಗೆ ಲೀಕ್ ಆಗಿದೆ.,  Nokia G50 5G ಈ ತಿಂಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ. ಹಾಗಾದರೆ ಬನ್ನಿ ಈ ಫೋನ್ ನ ಸಂಭಾವ್ಯ ವೈಶಿಷ್ಟ್ಯಗಳು ಎಂದು ಮತ್ತು ಇದರ ಸಂಭಾವ್ಯ ಬೆಲೆ ಎಷ್ಟಿರಲಿದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

Nokia G50 5G
ನೋಕಿಯಾ ಈ ಸ್ಮಾರ್ಟ್‌ಫೋನ್‌ನ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ, ಆದರೆ , ಈ ವರ್ಷದ ಆಗಸ್ಟ್‌ನಲ್ಲಿ, Winfuture.de ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಕೆಲವು ವೈಶಿಷ್ಟ್ಯಗಳನ್ನು ಮತ್ತು ಮಾಹಿತಿಯನ್ನು ಹಂಚಿಕೊಂಡಿದೆ. ಆದರೆ ಇದೀಗ ವಿಶ್ವಾಸಾರ್ಹ ಟಿಪ್‌ಸ್ಟರ್ ರೋಲ್ಯಾಂಡ್ ಕ್ವಾಂಡ್ಟ್ ನೋಕಿಯಾ ಜಿ 50 5 ಜಿ ಬೆಲೆ ಮತ್ತು ವೈಶಿಷ್ಟ್ಯಗಳನ್ನು ಅಂದಾಜಿಸಿದೆ.


ನೋಕಿಯಾ ಕಂಪನಿಯ ಈ ಸ್ಮಾರ್ಟ್ ಫೋನ್ ವಿವರಗಳು ಇಲ್ಲಿವೆ
8.85 ಎಂಎಂ ಅಗಲ ಮತ್ತು 190 ಗ್ರಾಂ ತೂಕದ ಈ ಫೋನ್ 6.82 ಇಂಚಿನ ಐಪಿಎಸ್ ಪ್ಯಾನೆಲ್‌ನೊಂದಿಗೆ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ ಇದು ಗ್ರಾಹಕರಿಗೆ 720 x 1,640 ಪಿಕ್ಸೆಲ್‌ಗಳ ಪೂರ್ಣ ಎಚ್‌ಡಿ + ರೆಸಲ್ಯೂಶನ್ ನೀಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್ಫೋನ್ 4GB RAM ಮತ್ತು 128GB ಆಂತರಿಕ ಶೇಖರಣಾ ಸಾಮರ್ಥ್ಯ ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.


ಈ ಫೋನ್ ತುಂಬಾ Secure ಆಗಿರಲಿದೆ ಎನ್ನಲಾಗಿದೆ
Android 11 OS ಆಧಾರಿತ ಈ ಫೋನ್ ಎರಡು ವರ್ಷಗಳ ವಾರಂಟಿ ಸಪೋರ್ಟ್ ನೊಂದಿಗೆ ಬರುವ ಸಾಧ್ಯತೆ ಇದೆ. ಇದಲ್ಲದೆ ಕಂಪನಿಯ ವತಿಯಿಂದ ಎರಡು ವರ್ಷಗಳ ಸಾಫ್ಟ್ವೆಯರ್ ಅಪ್ಡೇಟ್ ಹಾಗೂ ಮೂರು ವರ್ಷಗಳ ಸಿಕ್ಯೋರಿಟಿ ಅಪ್ಡೇಟ್ಸ್ ಕೂಡ ಸಿಗುವ ಸಾಧ್ಯತೆ ವರ್ತಿಸಲಾಗುತ್ತಿದೆ.


ಕ್ಯಾಮರಾ ವೈಶಿಷ್ಟ್ಯಗಳು ಈ ರೀತಿ ಇರುವ ಸಾಧ್ಯತೆ
ಟ್ರಿಪಲ್ ಕ್ಯಾಮರಾ ಸೆಟ್ ಅಪ್ ನೊಂದಿಗೆ ಈ ಫೋನ್ (Smartphone) ಬಿಡುಗಡೆಯಾಗುವ ಸಾದ್ಯತೆ ಇದ್ದು, ಇದರಲ್ಲಿ 48 ಎಂಪಿ ಪ್ರೈಮರಿ ಕ್ಯಾಮರಾ, 5ಎಂಪಿ ಅಲ್ಟ್ರಾವೈಡ್  ಹಾಗೂ 2 ಎಂಪಿ ಡೆಪ್ತ್ ಸೆನ್ಸರ್ ಕ್ಯಾಮರಾ ಶಾಮೀಲಾಗಿವೆ. ಇದರಲ್ಲಿ 30fps 1080p ವಿಡಿಯೋ ರೆಕಾರ್ಡಿಂಗ್ ಗಾಗಿ ಸಪೋರ್ಟ್ ಕೂಸ ಸಿಗಲಿದೆ.


ಉಳಿದ ವೈಶಿಷ್ಟ್ಯಗಳು ಈ ರೀತಿ ಇರುವ ಸಾಧ್ಯತೆ ಇದೆ
4,850mAh ಬ್ಯಾಟರಿಯೊಂದಿಗೆ, ಬಳಕೆದಾರರು 3.5mm ಹೆಡ್‌ಫೋನ್ ಜ್ಯಾಕ್, USB ಟೈಪ್-ಸಿ ಪೋರ್ಟ್, ಬದಿಯಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ವೈಫೈ 5, ಬ್ಲೂಟೂತ್ 5.0 ಮತ್ತು NFC ಬೆಂಬಲದಂತಹ ವೈಶಿಷ್ಟ್ಯಗಳನ್ನು ಸಹ ಬಳಕೆದಾರರು ಪಡೆಯಬಹುದು. ಇದು ಸ್ನಾಪ್‌ಡ್ರಾಗನ್ 480 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ-ಕಾನೂನು ಬಾಹಿರವಾಗಿ ಹಲವು ದೇಶಗಳಲ್ಲಿ ತಾತ್ಕಾಲಿಕ ನೌಕರರಿಗೆ ಕಡಿಮೆ ವೇತನ ನೀಡುತ್ತಿದ್ದ ಗೂಗಲ್


Nokia G50 5G ಸ್ಮಾರ್ಟ್ ಫೋನ್ ಸಂಭಾವ್ಯ ಬೆಲೆ
ಸೋರಿಕೆಯಾಗಿರುವ (Nokia Leaked Information) ಮಾಹಿತಿ ಪ್ರಕಾರ, ಈ ಸ್ಮಾರ್ಟ್ಫೋನ್ ಬೆಲೆ 259 ಅಥವಾ 269 ಯುರೋ (ಅಂದರೆ 22,499 ರೂ. ಅಥವಾ 23,368) ರೂ. ನಿಗದಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ನೋಕಿಯಾ ಜಿ 50 5 ಜಿ ಓಷಿಯನ್ ಬ್ಲೂ ಮತ್ತು ಮಿಡ್ನೈಟ್ ಸನ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರಬಹುದು ಎಂದು ಟಿಪ್ಸ್ಟರ್ ಹೇಳಿದೆ.


ಇದನ್ನೂ ಓದಿ-Mobile Using Tips : ನೀವು ಕೂಡ ಈ 10 ತಪ್ಪುಗಳನ್ನು ಮಾಡಿದರೆ ನಿಮ್ಮ ಮೊಬೈಲ್ ನಲ್ಲಿ ಬೆಂಕಿ ಹೊತ್ತಿಕೊಳ್ಳಬಹುದು!


ಪ್ರಸ್ತುತ ಈ ಫೋನ್ ಕುರಿತು ಕಂಪನಿ ವತಿಯಿಂದ ಅಧಿಕೃತ ಮಾಹಿತಿ ಬಿಡುಗಡೆ ಬಿಡುಗಡೆಗೆ ನಿರೀಕ್ಷೆ ವ್ಯಕ್ತಪಡಿಸಲಾಗುತ್ತಿದೆ. ಈ ಮಾಹಿತಿಯಲ್ಲಿ  ಈ ಫೋನಿನ ಅದಿಕೃತ ವೈಶಿಷ್ಟ್ಯಗಳು, ಅದರ ಅಧಿಕೃತ ಬೆಲೆ ಮತ್ತು ಅಧ್ಕ್ರುತವಾಗಿ ಎಲ್ಲಿ ಬಿಡುಗಡೆ ಮಾಡಲಾಗುವುದು ಎಂಬ ಎಲ್ಲ ಮಾಹಿತಿ ಸಿಗಲಿದೆ.


ಇದನ್ನೂ ಓದಿ-ಕಡಿಮೆ ಬೆಲೆಯಲ್ಲಿ Micromax ಬಿಡುಗಡೆ ಮಾಡುತ್ತಿದೆ ಅದ್ಭುತ ಸ್ಮಾರ್ಟ್ಫೋನ್, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ