ನವದೆಹಲಿ: Google Play Store - ಇತ್ತೀಚಿನ ದಿನಗಳಲ್ಲಿ ಮೊಬೈಲ್ ನಲ್ಲಿ ವಿವಿಧ ಆಟಗಳು ಮತ್ತು ಇತರ ವಸ್ತುಗಳನ್ನು ಬಳಸುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಗೂಗಲ್ ಪ್ಲೇ ಸ್ಟೋರ್ನಿಂದ (Google Play Store) ಮೊಬೈಲ್ ಆಪ್ಗಳನ್ನು (Mobile Apps) ಡೌನ್ಲೋಡ್ ಮಾಡುವುದು ಅವುಗಳನ್ನು ಪರಿಶೀಲಿಸದೆ ಹೋದರೆ ಅಪಾಯಕಾರಿಯಾಗಬಹುದು. ನಿಮ್ಮ ಇದರಿಂದ ನಿಮ್ಮ ಫೋನ್ಗೆ ಹಾನಿಯಾಗುವುದರ ಜೊತೆಗೆ ನಿಮ್ಮ ವೈಯಕ್ತಿಕ ಡೇಟಾ ಕೂಡ ಸೋರಿಕೆಯಾಗಬಹುದು.
ಈ ಕಂಪನಿ ಮೊಬೈಲ್ ಆಪ್ ಗಳನ್ನು ಪರಿಶೀಲಿಸಿದೆ
ಝೀ ನ್ಯೂಸ್ ಇಂಗ್ಲಿಷ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ. ಡಿಜಿಟಲ್ ಸುರಕ್ಷತೆ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅವಸ್ಟ್ (Avast) ಈ ಕುರಿತು ಪರಿಶೀಲನೆ ನಡೆಸಿದ್ದು, 19 ಸಾವಿರಕ್ಕೂ ಅಧಿಕ ಮೊಬೈಲ್ ಆಪ್ ಗಳು ನಿಮ್ಮ ವೈಯಕ್ತಿಕ ದತ್ತಾಂಶ ಕಳ್ಳತನ ಮಾಡುತ್ತವೆ ಮತ್ತು ಅವುಗಳಿಂದ ಸ್ಮಾರ್ಟ್ ಫೋನ್ ಗೂ ಹಾನಿ ತಲುಪುತ್ತದೆ ಎಂದು ಹೇಳಿದೆ.
ತನಿಖೆಯಲ್ಲಿ ಬಹಿರಂಗಗೊಂಡ ಸಂಗತಿ
ಈ ಅಸುರಕ್ಷಿತವಾಗಿರುವ ಹೆಚ್ಚಿನ ಮೊಬೈಲ್ ಆಪ್ಗಳಲ್ಲಿ ತಪ್ಪಾದ ಕಾನ್ಫಿಗರೇಶನ್ ಸಮಸ್ಯೆ ಇದೆ ಎಂದು ಅವಸ್ಟ್ ಹೇಳಿದೆ. ಫೈರ್ಬೇಸ್ ಡೇಟಾಬೇಸ್ನಲ್ಲಿ ತಪ್ಪಾದ ಕಾನ್ಫಿಗರೇಶನ್ನಿಂದಾಗಿ 19,300 ಕ್ಕೂ ಹೆಚ್ಚು ಆಂಡ್ರಾಯ್ಡ್ ಆಪ್ಗಳು ತಮ್ಮ ಬಳಕೆದಾರರ ಡೇಟಾವನ್ನು (Personal Data) ಬಹಿರಂಗಪಡಿಸಬಹುದು ಎಂದು ಕಂಪನಿ ಹೇಳಿದೆ. ಕಂಪನಿಯ ಪ್ರಕಾರ, ಆಂಡ್ರಾಯ್ಡ್ ಡೆವಲಪರ್ಗಳು ಬಳಕೆದಾರರ ಡೇಟಾವನ್ನು ಸಂಗ್ರಹಿಸಲು ಫೈರ್ಬೇಸ್ ಪರಿಕರಗಳನ್ನು ಬಳಸುತ್ತಾರೆ ಎಂದಿದೆ.
ವೈಯಕ್ತಿಕ ಮಾಹಿತಿ ಸೋರಿಕೆಯಾಗಬಹುದು
ಈ ತಪ್ಪು ಕಾನ್ಫಿಗರೆಶನ್ (Misconfiguration) ಕಾರಣ ನಿಮ್ಮ ಹೆಸರು, ವಿಳಾಸ, ಸ್ಥಳ ಮತ್ತು ಪಾಸ್ವರ್ಡ್ನಂತಹ ವೈಯಕ್ತಿಕ ಮಾಹಿತಿಯು ಸೋರಿಕೆಯಾಗಬಹುದು ಎಂದು ಅವಾಸ್ಟ್ ಹೇಳಿದೆ. ಕಂಪನಿಯು ತನ್ನ ತನಿಖೆಯ ಫಲಿತಾಂಶಗಳನ್ನು Google ಗೆ ಕಳುಹಿಸಿದೆ. ಇದರಿಂದ ಅವರು ಆಪ್ ಡೆವಲಪರ್ ಅನ್ನು ಸಂಪರ್ಕಿಸಬಹುದು ಮತ್ತು ಅವುಗಳಲ್ಲಿ ಅಗತ್ಯ ಸುಧಾರಣೆಗಳನ್ನು ಮಾಡಬಹುದು ಎಂದಿದೆ.
ಇದನ್ನೂ ಓದಿ-Jio ಗ್ರಾಹಕರಿಗೆ ಭರ್ಜರಿ ಆಫರ್ : ಒಂದು ಬಾರಿ ರೀಚಾರ್ಜ್ ಮಾಡಿ 11 ತಿಂಗಳ Free ಡೇಟಾ-ಅನಿಯಮಿತ ಕಾಲ್ಸ್
ಈ ದೇಶಗಳಿಗೆ ಅತಿ ಹೆಚ್ಚು ಅಪಾಯ
ತಪ್ಪಾಗಿ ಕಾನ್ಫಿಗರೇಶನ್ ಆಗಿರುವ ಮೊಬೈಲ್ ಆಪ್ಗಳಲ್ಲಿ ಬಹುತಕೆ ಆಪ್ ಗಳು ಜೀವನಶೈಲಿ, ಗೇಮಿಂಗ್, ಆಹಾರ ವಿತರಣೆ ಮತ್ತು ಇಮೇಲ್ಗೆ ಸಂಬಂಧಿಸಿವೆ ಎಂದು ಕಂಪನಿ ಹೇಳಿದೆ. ಇಂತಹ ಆಪ್ಗಳನ್ನು ಯುರೋಪ್, ಆಗ್ನೇಯ ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಹೆಚ್ಚು ಡೌನ್ಲೋಡ್ ಮಾಡಲಾಗಿದೆ. ಹೀಗಾಗಿ ಆ ದೇಶಗಳು ಹೆಚ್ಚಿನ ಅಪಾಯ ಎದುರಿಸುವ ಸಾಧ್ಯತೆ ಇದೆ ಎಂದು ಕೂಡ ಅವಾಸ್ಟ್ ಹೇಳಿದೆ.
ಅತಿ ಹೆಚ್ಚು ಹಾನಿ ಉಂಟಾಗುವ ಸಾಧ್ಯತೆ
ಕಂಪನಿಯ ಮಾಲ್ ವೇರ್ ಸಂಶೋಧಕ ವ್ಲಾಡಿಮಿರ್ ಮಾರ್ಟ್ಯಾನೋವ್ಹೇಳುವ ಪ್ರಕಾರ, ಆಪ್ ಗಳಲ್ಲಿ ಇಂತಹ ಮುಕ್ತ ಡೇಟಾ ಲಭ್ಯವಿರುವುದು ಅಪಾಯಕಾರಿ ಎಂದಿದ್ದಾರೆ. ಈ ಕಾರಣದಿಂದಾಗಿ, ಬಳಕೆದಾರರ ವೈಯಕ್ತಿಕ ಮತ್ತು ವ್ಯವಹಾರದ ಡೇಟಾ ಸೋರಿಕೆಯಾಗಬಹುದು. ಈ ಕಾರಣದಿಂದಾಗಿ ಅವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ-Mobile Screen Guard: ಫೋನ್ನಲ್ಲಿ ಸ್ಕ್ರೀನ್ ಗಾರ್ಡ್ ಹಾಕುವ ಮೊದಲು ಈ ಬಗ್ಗೆ ತಪ್ಪದೇ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.