ನವದೆಹಲಿ : ನೀವು ಕ್ರಿಕೆಟ್ ಅಭಿಮಾನಿಯಾ ? ಮುಂಬರುವ ಕ್ರಿಕೆಟ್ ಮ್ಯಾಚ್ ಗಳನ್ನು ಉಚುತವಾಗಿ ವೀಕ್ಷಿಸಲು ಬಯಸುತ್ತೀರಾ ? ಹಾಗಾದರೆ ನಿಮಗೊಂದು ಅಗತ್ಯ ಮಾಹಿತಿ ಇಲ್ಲಿದೆ.   ಈಗ ನೀವು Disney+ Hotstarನ ಉಚಿತ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದು. ಪ್ರಮುಖ ಟೆಲಿಕಾಂ ಕಂಪನಿಗಳಾದ Jio, Airtel ಮತ್ತು  Vi ತಮ್ಮ ರೀಚಾರ್ಜ್ ಕೂಪನ್‌ಗಳೊಂದಿಗೆ Disney+ Hotstarನ ಉಚಿತ ಚಂದಾದಾರಿಕೆಯನ್ನು ನೀಡುತ್ತಿವೆ. 


COMMERCIAL BREAK
SCROLL TO CONTINUE READING

Jioದ  ಪ್ಲಾನ್ ನೊಂದಿಗೆ ಸಿಗುತ್ತಿದೆ  ಫ್ರೀ Disney+ Hotstar :
ನೀವು ಜಿಯೋ ಗ್ರಾಹಕರಿದ್ದರೆ, Disney+ Hotstarನ  ಫ್ರೀ ಸಬ್ ಸ್ಕ್ರಿಪ್ಶನ್ ಪಡೆದುಕೊಳ್ಳಬಹುದು. ಜಿಯೋ ಅನೇಕ ರಿಜಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿದ್ದು, ಈ ಪ್ಲಾನ್ ಗಳೊಂದಿಗೆ  Disney+ Hotstar ಉಚಿತವಾಗಿ ಪಡೆಯಬಹುದು. ಜಿಯೋ ಮಾಸಿಕ 401 ರೂ ಯೋಜನೆ ಮತ್ತು 2,599 ರೂ.ಗಳ ವಾರ್ಷಿಕ ಯೋಜನೆಯೊಂದಿಗೆ Disney+ Hotstar ಅನ್ನು ಒಂದು ವರ್ಷಗಳವರೆಗೆ ಉಚಿತವಾಗಿ ವೀಕ್ಷಿಸಬಹುದು.  ಈಗಾಗಲೇ  Long Term ಪ್ಲಾನ್ ಅನ್ನು ಹಾಕಿಸಿಕೊಂಡಿದ್ದರೆ, 612 ಮತ್ತು 1,208 ರೂಗಳ 4G Data ಡಾಟಾ ಟಾಪ್ಅಪ್ Recharge  ಮಾಡಿಕೊಂಡರೆ, Disney+ Hotstar ಚಂದಾದಾರಿಕೆಯನ್ನು ಪಡೆಯಬಹುದು.


ಇದನ್ನೂ ಓದಿ : Samsung ಈ ಫೋನ್ 10,000 ರೂಪಾಯಿ ಅಗ್ಗದ ದರದಲ್ಲಿ ಲಭ್ಯ, ಹೊಸ ಬೆಲೆ, ಕೊಡುಗೆಗಳ ಬಗ್ಗೆ ಇಲ್ಲಿದೆ ಮಾಹಿತಿ


Airtel ನಲ್ಲೂ ಸಿಗುತ್ತಿದೆ Disney+ Hotstar  ಫ್ರೀ ಸಬ್ ಸ್ಕ್ರಿಪ್ಶನ್ : 
ಹೌದು, Airtel ಕೂಡಾ ತನ್ನ ಗ್ರಾಹಕರಿಗೆ Disney+ Hotstarನ   ಉಚಿತ ಚಂದಾದಾರಿಕೆಯನ್ನು ನೀಡುತ್ತಿದೆ. ಮಾಹಿತಿಯ ಪ್ರಕಾರ, ನೀವು ಏರ್‌ಟೆಲ್‌ನ 401 ರೂಪಾಯಿ ರೀಚಾರ್ಜ್ ಪ್ಲಾನ್ ನೊಂದಿಗೆ  Disney+ Hotstar ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದು. ಈ ಪ್ಲಾನ್ ನಲ್ಲಿ ಪ್ರತಿದಿನ 3 GB ಡೇಟಾವನ್ನು ನೀಡಲಾಗುತ್ತಿದೆ. ಈ ಪ್ಯಾಕ್‌ನ Validity 28 ದಿನಗಳವರೆಗೆ ಇರುತ್ತದೆ. .


Viಯ  ರೀಚಾರ್ಜ್ ಪ್ಲಾನ್ ಗಳೊಂದಿಗೆ ಸಿಗಲಿದೆ Disney+ Hotstar: 
ಫ್ರೀ ಸಬ್ ಸ್ಕ್ರಿಪ್ಶನ್ ನೀಡುವಲ್ಲಿ Vi  ಕೂಡಾ ಹಿಂದೆ ಬಿದ್ದಿಲ್ಲ. ಕಂಪನಿಯು ಇತ್ತೀಚೆಗೆ ಇಂತಹ ಅನೇಕ ರೀಚಾರ್ಜ್ ಪ್ಲಾನ್ ಗಳನ್ನು ಆರಂಭಿಸಿದೆ. ಈ ಪ್ಲಾನ್ ಗಳನ್ನು ಹಾಕಿಸಿಕೊಂಡರೆ, Disney+ Hotstar ಉಚಿತವಾಗಿ ಸಿಗಲಿದೆ. Vi ಯ 401, ರೂ. 601, 501 ಮತ್ತು 801 ರೂಗಳ ರಿಚಾರ್ಜ್ ಪ್ಲಾನ್ ನೊಂದಿಗೆ ಉಚಿತ ಚಂದಾದಾರಿಕೆಗಳನ್ನು ಪಡೆಯಬಹುದು.


ಇದನ್ನೂ ಓದಿ : ಇನ್ಮುಂದೆ ಮತ್ತಷ್ಟು ಸ್ಮಾರ್ಟ್ ಆಗಲಿದೆ Instagram, ಶೀಘ್ರವೇ ಸಿಗಲಿದೆ New Audio Feature


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.