ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ರೀಚಾರ್ಜ್ ಪ್ಲಾನ್ ಗಳಲ್ಲಿ (Recharge Plan) ಬದಲಾವಣೆಯಾಗಿದೆ. ಎಲ್ಲಾ ಕಂಪನಿಗಳು ಮೊಬೈಲ್ ರೀಚಾರ್ಜ್ ಪ್ಲಾನ್ ಅನ್ನು ದುಬಾರಿಯನ್ನಾಗಿಸಿದೆ. ಅಂಥದ್ದರಲ್ಲಿ ಏರ್ ಟೆಲ್ ನ (Airtel) 19 ರೂಪಾಯಿ ರೀಚಾರ್ಜ್ ಕೂಪನ್ ನಲ್ಲಿ ಅನಿಯಮಿತ ಕರೆ ಸೇರಿದಂತೆ ಮೊಬೈಲ್ ಡೇಟಾ, ಉಚಿತ ಎಸ್ ಎಂಎಸ್ (SMS) ಸೇವೆಗಳು ಕೂಡಾ ಸಿಕ್ಕಿದರೆ ? ಹೌದು ಅಗ್ಗದ ರೀಚಾರ್ಜ್ ಸೇವೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಏರ್ ಟೆಲ್ ನ 19 ರೂಪಾಯಿಯ ರೀಚಾರ್ಜ್ ಕೂಪನ್ :
ಏರ್ ಟೆಲ್ (Airtel) ತನ್ನ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು, ರೀಚಾರ್ಜ್ ಕೂಪನ್ (Recharge coupon) ಅನ್ನು ಬಿಡುಗಡೆ ಮಾಡಿದೆ. ಈ ರೀಚಾರ್ಜ್ ಕೂಪನ್‌ನ ಬೆಲೆ ಕೇವಲ 19 ರೂಪಾಯಿಗಳು. ಈ ಯೋಜನೆಯಲ್ಲಿ ಏರ್ ಟೆಲ್ ತನ್ನ ಗ್ರಾಹಕರಿಗೆ (Customer) ಅನೇಕ ಉತ್ತಮ ಪ್ರಯೋಜನಗಳನ್ನು ನೀಡುತ್ತಿದೆ.
ಇದನ್ನೂ ಓದಿ : AMAZON FAB PHONE FEST:Samsungನ ಫೋನ್‌ಗೆ ಸಿಗುತ್ತಿದೆ 13000 ರೂಪಾಯಿ ರಿಯಾಯಿತಿ
ಉಚಿತ ಅನಿಯಮಿತ ಕರೆ :
ಏರ್‌ಟೆಲ್‌ನ ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರು ಅನಿಯಮಿತ ಕರೆ (Umlimited calls) ಸೌಲಭ್ಯವನ್ನು ಪಡೆಯುತ್ತಾರೆ. ಈ ಯೋಜನೆಯಡಿ ಯಾವುದೇ ನೆಟ್‌ವರ್ಕ್‌ನಲ್ಲಿ (Network) ಬಳಕೆದಾರರು ದಿನದ 24 ಗಂಟೆಯೂ ಅಡೆತಡೆಗಳಿಲ್ಲದೆ ಪೋನ್ ನಲ್ಲಿ ಮಾತನಾಡಬಹುದು.
ಇಂಟರ್ ನೆಟ್ ಲಾಭವೂ ಇದೆ :
ಬಳಕೆದಾರರು 19 ರೂಪಾಯಿಗಳ ರೀಚಾರ್ಜ್ ಯೋಜನೆಯಲ್ಲಿ, ಕೇವಲ ಕರೆ ಮಾಡುವ ಸೌಲಭ್ಯವನ್ನು ಮಾತ್ರ ಪಡೆಯುತ್ತಿಲ್ಲ. ಬಳಕೆದಾರರಿಗೆ ಅತ್ಯುತ್ತಮ ಇಂಟರ್ನೆಟ್ (Internet) ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತಿದೆ. ಈ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ 200MB ಡೇಟಾವನ್ನು ಸಹ ನೀಡಲಾಗುತ್ತಿದೆ.
ಇದನ್ನೂ ಓದಿ : ತನ್ನ ಗ್ರಾಹಕರಿಗಾಗಿ BSNL ತಂದಿದೆ ಅಗ್ಗದ ರೀಚಾರ್ಜ್ ಯೋಜನೆ
ಉಚಿತ ಎಸ್‌ಎಂಎಸ್ ಸೌಲಭ್ಯವೂ ಇದೆ :
ರೀಚಾರ್ಜ್ ಯೋಜನೆಯಲ್ಲಿ, ಕರೆ ಮತ್ತು ಇಂಟರ್ನೆಟ್‌ನಿಂದ ಹೆಚ್ಚಿನ ಸೌಲಭ್ಯಗಳು ಲಭ್ಯವಾಗುತ್ತಿವೆ. ಇದರೊಂದಿಗೆ ಈ ರೀಚಾರ್ಜ್‌ನಲ್ಲಿ ನೀವು ಉಚಿತ ಎಸ್‌ಎಂಎಸ್ (SMS) ಸಹ ಮಾಡಬಹುದು. ಮಾಹಿತಿಯ ಪ್ರಕಾರ, ಈ ಏರ್‌ಟೆಲ್ ಯೋಜನೆಯ ಇನ್ನೊಂದು ವಿಷಯವೆಂದರೆ ಈ ರೀಚಾರ್ಜ್‌ನಲ್ಲಿ ಎರಡು ದಿನಗಳ ವ್ಯಾಲಿಡಿಟಿಯನ್ನು (Validity) ನೀಡಲಾಗುತ್ತಿದೆ.
ಇದಲ್ಲದೆ, ಗ್ರಾಹಕರನ್ನು ಸೆಳೆಯಲು ಏರ್ಟೆಲ್ ದೀರ್ಘ ವ್ಯಾಲಿಡಿಟಿ ಯೋಜನೆಗಳಲ್ಲಿಯೂ ಭಾರೀ ಕೊಡುಗೆಗಳನ್ನು ನೀಡುತ್ತಿದೆ. 84 ದಿನಗಳ ರೀಚಾರ್ಜ್ ಯೋಜನೆಯಲ್ಲಿ 6 ಜಿಬಿ ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ಏರ್ ಟೆಲ್ ನ ಉಚಿತ ಕೂಪನ್ ಗಳನ್ನು ಪಡೆಯಲು ಬಳಕೆದಾರರು Airtel Thanks ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ. ಈ ಅಪ್ಲಿಕೇಶನ್ ಮೂಲಕ ಎಲ್ಲಾ ಉಚಿತ ಕೂಪನ್‌ಗಳನ್ನು ಬಳಕೆದಾರರಿಗೆ ನೀಡಲಾಗುತ್ತಿದೆ.
ಇದನ್ನೂ ಓದಿ : ತಕ್ಷಣವೇ ಬದಲಾಯಿಸಿ ನಿಮ್ಮ WhatsApp ಸೆಟ್ಟಿಂಗ್, ಇಲ್ದಿದ್ರೆ ಖಾತೆ ಹ್ಯಾಕ್ ಆಗುತ್ತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.